ಶಿವಮೊಗ್ಗತೀರ್ಥಹಳ್ಳಿಪ್ರಮುಖ ಸುದ್ದಿಭದ್ರಾವತಿಶಿಕಾರಿಪುರಶಿರಾಳಕೊಪ್ಪ

Hosanagara| ಸಮ್ಮೇಳನಾಧ್ಯಕ್ಷ ಅಂಬ್ರಯ್ಯಮಠರಿಗೆ ಅದ್ದೂರಿ ಸ್ವಾಗತ: ಇಂದು ಮತ್ತು ನಾಳೆ ನಡೆಯಲಿರುವ ಜಿಲ್ಲಾ ಶರಣ ಸಾಹಿತ್ಯ ಸಮ್ಮೇಳನ

ಸಮ್ಮೇಳನಾಧ್ಯಕ್ಷ ಅಂಬ್ಯಯ್ಯಮಠರಿಗೆ ಅದ್ದೂರಿ ಸ್ವಾಗತ
ಹೊಸನಗರ: ಶನಿವಾರ ಮತ್ತು ಭಾನುವಾರ ಹೊಸನಗರದ ಕುವೆಂಪು ವಿದ್ಯಾಶಾಲೆಯ ಆವರಣದಲ್ಲಿ ನಡೆಯಲಿರುವ 6ನೇ ಶಿವಮೊಗ್ಗ ಜಿಲ್ಲಾ ಶರಣ ಸಾಹಿತ್ಯ ಸಮ್ಮೇಳನಕ್ಕೆ ಆಗಮಿಸಿದ ಸಮ್ಮೇಳನಾಧ್ಯಕ್ಷ ಅಂಬ್ರಯ್ಯಮಠರಿಗೆ ಪರಿಷತ್ ವತಿಯಿಂದ ಸಾರ್ವಜನಿಕರು ಅದ್ದೂರಿ ಸ್ವಾಗತ ಕೋರಿದರು.
ಹೊಸನಗರದ ಪ್ರಮುಖ ಬೀದಿಗಳಲ್ಲಿ ಮೆರವಣೆಗೆ ನಡೆಸುವ ಮೂಲಕ ಸಮ್ಮೇಳನದ ಆವರಣಕ್ಕೆ ಸಮ್ಮೇಳನಾಧ್ಯಕ್ಷರನ್ನು ಕರೆತರಲಾಯಿತು. ಮೂಲೆಗದ್ದೆ ಮಠದ ಶ್ರೀ ಅಭಿನವ ಚನ್ನಬಸವ ಸ್ವಾಮೀಜಿ ನೇತೃತ್ವ ವಹಿಸಿದ್ದರು.
ತಾಲೂಕು ಘಟಕದ ಅಧ್ಯಕ್ಷ ಡಿ.ವಿ.ರೇವಣಪ್ಪಗೌಡ, ಸಮ್ಮೇಳನದ ಕಾರ್ಯಾಧ್ಯಕ್ಷ ಬಿ.ಜಿ.ಚಂದ್ರಮೌಳಿ ಕೊಡೂರು, ಗೌರವಾಧ್ಯಕ್ಷ ಸೊನಲೆ ಶ್ರೀನಿವಾಸ್, ಎನ್.ಆರ್.ದೇವಾನಂದ್, ಎ.ವಿ.ಮಲ್ಲಿಕಾರ್ಜುನ್, ಹ.ರು.ಗಂಗಾಧರಯ್ಯ, ಘಟಕದ ಪದಾಧಿಕಾರಿಗಳು, ಸಾರ್ವಜನಿಕರು ಪಾಲ್ಗೊಂಡಿದ್ದರು.
6ನೇ ಶಿವಮೊಗ್ಗ ಜಿಲ್ಲಾ ಶರಣ ಸಾಹಿತ್ಯ ಸಮ್ಮೇಳನ ಇಂದು
ಮಲೆನಾಡ ನಡುಮನೆಯಲ್ಲಿ ಶಿವಶರಣರ ಸಾಹಿತ್ಯ ಸಮ್ಮಿಲನ
ಹೊಸನಗರ: ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಜಿಲ್ಲಾ ಘಟಕ ಶಿವಮೊಗ್ಗ ಆಶ್ರಯದಲ್ಲಿ 6ನೇ ಶಿವಮೊಗ್ಗ ಜಿಲ್ಲಾ ಶರಣ ಸಾಹಿತ್ಯ ಸಮ್ಮೇಳನವು ಪಟ್ಟಣದ ಕುವೆಂಪು ವಿದ್ಯಾಶಾಲೆ ಆವರಣದಲ್ಲಿ ಶನಿವಾರ ಮತ್ತು ಭಾನುವಾರ ನಡೆಯಲಿದೆ ಎಂದು ಸಮ್ಮೇಳನ ಸಮಿತಿ‌ ಕಾರ್ಯಾದ್ಯಕ್ಷ ಬಿ.ಜಿ.ಚಂದ್ರಮೌಳೀ ತಿಳಿಸಿದರು.
ಹೊಸನಗರದಲ್ಲಿ ಸುದ್ದಿ ಗೋಷ್ಠಿ ನಡೆಸಿ,
ಸಮ್ಮೇಳನ ಅಧ್ಯಕ್ಷರಾದ ಹಿರಿಯ ಸಾಹಿತಿ ಅಂಬ್ರಯ್ಯ ಮಠ ಅವರ ಮೆರವಣಿಗೆ ಬೆಳಿಗ್ಗೆ ಗಣಪತಿ ದೇವಸ್ಥಾನದಿಂದ ಆರಂಭವಾಗಲಿದೆ. ಹಿರಿಯ ವರ್ತಕ ಶ್ರೀನಿವಾಸ್ ಕಾಮತ್ ಮೆರವಣಿಗೆಗೆ ಚಾಲನೆ ನೀಡುವರು. ಉದ್ಯಮಿ ಎನ್.ಆರ್. ದೇವಾನಂದ್, ಹೆಚ್.ಎನ್. ಶ್ರೀಪತಿರಾವ್ ವಚನಕಟ್ಟುಗಳಿಗೆ ಮತ್ತು ಬಸವಣ್ಣರ ಭಾವಚಿತ್ರಕ್ಕೆ ಪುಷ್ಪಾರ‍್ಚನೆ ಮಾಡುವರು.
ಇದಕ್ಕೂ ಮುನ್ನ ತಹಸೀಲ್ದಾರ್ ರಾಕೇಶ್ ಫ್ರಾನ್ಸಿಸ್ ಬ್ರಿಟ್ಟೋ ಅವರು ರಾಷ್ಟ್ರ ದ್ವಜರೋಹಣ ಮಾಡುವರು. ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ತ.ಮ ನರಸಿಂಹ ನಾಡದ್ವಜ, ಮತ್ತು ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಎಚ್.ಎನ್. ಮಹಾರುದ್ರ ಪರಿಷತ್ ದ್ವಜರೋಹಣ ಮಾಡುವರು.
ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಎಂ.ವಿ. ಜಯರಾಮ್ ಅವರು ಕೆಳದಿ ಶಿವಪ್ಪನಾಯಕ ಜ್ಯೋತಿ ಸ್ವಾಗತ ಮಾಡುವರು.
ಪದ್ಮಶ್ರೀ ಪುರಸ್ಕೃತೆ  ಮಾತಾ ಬಿ. ಮಂಜಮ್ಮ ಜೋಗತಿ ಸಮ್ಮೇಳನವನ್ನು ಉದ್ಘಾಟಿಸುವರು. ಸಂಸದ ಬಿ.ವೈ. ರಾಘವೇಂದ್ರ, ಸಚಿವ ಎಸ್. ಮಧು ಬಂಗಾರಪ್ಪ, ಶಾಸಕರಾದ ಆರಗ ಜ್ಞಾನೇಂದ್ರ, ಬೇಳೂರು ಗೋಪಾಲಕೃಷ್ಣ ಅತಿಥಿಯಾಗಿ ಭಾಗವಹಿಸುವರು.
ಆನಂದಪುರ ಮಠದ ಮಲ್ಲಿಕರ‍್ಜುನ ಮುರುಘರಾಜೇಂದ್ರ ಸ್ವಾಮಿ ಸಾನಿಧ್ಯ ವಹಿಸುವರು. ಮೂಲೆಗದ್ದೆ ಮಠದ ಅಭಿನವ ಚನ್ನಬಸವ ಸ್ವಾಮಿ ನೇತ್ರತ್ವ ವಹಿಸುವರು.
ಸಮ್ಮೇಳನಾಧ್ಯಕ್ಷ ಅಂಬ್ರಯ್ಯ ಮಠ ಸಮ್ಮೇಳನ ಅಧ್ಯಕ್ಷತೆಯ ನುಡಿ,. ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಎಚ್.ಎನ್. ಮಹಾರುದ್ರ ಆಶಯ ನುಡಿ, ಕರ‍್ಯಾಧ್ಯಕ್ಷ ಬಿ.ಜಿ. ಚಂದ್ರಮೌಳಿಗೌಡ ಪ್ರಾಸ್ತಾವಿಕ ಮಾತನಾಡಲಿದ್ದು ಸಮ್ಮೇಳನ ಸ್ವಾಗತ ಸಮಿತಿ ಅಧ್ಯಕ್ಷ ಸೊನಲೆ ಶ್ರೀನಿವಾಸ್ ಸಮಾರಂಭದ ಅಧ್ಯಕ್ಷತೆ ವಹಿಸುವರು.
ಸಮ್ಮೇಳನದಲ್ಲಿ ಮಲೆನಾಡು ಶರಣ ಪರಂಪರೆ, ಸಮ್ಮೇಳನಾಧ್ಯಕ್ಷರ ಬದುಕು ಬರಹ, ಅಕ್ಕಮಹಾದೇವಿ ಸಂದೇಶಸಾರ, ಮಲೆನಾಡು ಕಾಯಕ ಪರಂಪರೆ, ಮಲೆನಾಡ ವೈಚಾರಿಕ ಸಾಹಿತ್ಯದಲ್ಲಿ ವಚನಗಳ ಪ್ರಭಾವ ಎಂಬ ವಿಚಾರದಲ್ಲಿ ಗೋಷ್ಟಿಗಳು ನಡೆಯಲಿದೆ.
ಸಮ್ಮೇಳನದಲ್ಲಿ ಉಚಿತ ಆರೋಗ್ಯ ಶಿಬಿರ, ವಚನ ಗಾಯನ, ಯೋಗ, ಶಿವಯೋಗ, ಸೌಹಾರ್ಧ ವಾಲಿಬಾಲ್ ಪಂದ್ಯಾವಳಿ, ವಚನ ಸಾಂಸ್ಕೃತಿಕ ವೈಭವ ಕಾರ‍್ಯಕ್ರಮ ನಡೆಯಲಿದೆ.
ಭಾನುವಾರ ಸಂಜೆ ಸಮ್ಮೇಳನದ ಸಮಾರೋಪ ಕಾರ‍್ಯಕ್ರಮ ನಡೆಯಲಿದ್ದು, ಜಡೆ ಮಠದ ಮಹಾಂತ ಸ್ವಾಮಿ ಸಮಾರೋಪ ಸಮಾರಂಭದ ಸಾನಿಧ್ಯ ವಹಿಸುವರು. ಮೂಲೆಗದ್ದೆ ಮಠದ ಅಭಿನವ ಚನ್ನಬಸವ ಸ್ವಾಮಿ ಸಮಾರೋಪ ಭಾಷಣ ಮಾಡಲಿದ್ದಾರೆ. ಎಚ್.ಎನ್. ಮಹಾರುದ್ರ ಅಧ್ಯಕ್ಷತೆ ವಹಿಸುವರು. ಶಾಸಕರು, ಜನಪ್ರತಿನಿದಿಗಳು, ವಿವಿಧ ಸಂಘ ಸಂಸ್ಥೆಗಳ ಮುಖಂಡರು. ಸಾಹಿತಿಗಳು, ಶರಣ ಪ್ರಮುಖರು ಹಾಜರಿರುವರು ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ತಾಲೂಕು ಘಟಕದ ಅಧ್ಯಕ್ಷ ಡಿ.ವಿ.ರೇವಣಪ್ಪಗೌಡ, ಹೆಚ್.ಬಿ.ಕಲ್ಯಾಣಪ್ಪಗೌಡ, ಚನ್ನಬಸಪ್ಪಗೌಡ್ರು, ಹ.ರು.ಗಂಗಾಧರಯ್ಯ ಉಪಸ್ಥಿತರಿರುವರು.
ಶರಣ ಪರಂಪರೆಯ ಮಠಗಳು ಕುರಿತ ವಿಚಾರ ಗೋಷ್ಟಿ
ವಿಜಯವಾಣಿ ಪ್ರಶಾಂತ್ ರಿಪ್ಪನಪೇಟೆ ವಿಷಯ ಮಂಡನೆ:
ಹೊಸನಗರ: ಶರಣ ಸಾಹಿತ್ಯ ಸಮ್ಮೇಳನದ ಅನುಭವ ಮಂಟಪದಲ್ಲಿ ಮೊದಲ ಗೋಷ್ಠಿ ಮಲೆನಾಡು ಶರಣ ಪರಂಪರೆ ಕುರಿತಾಗಿ ನಡೆಯಲಿದೆ.
ಗೋಷ್ಠಿ  ಮಧ್ಯಾಹ್ನ 2.30ರಿಂದ ನಡೆಯಲಿದ್ದು ವಿಜಯವಾಣಿ ಪತ್ರಿಕೆಯ ಬೆಂಗಳೂರು ಪ್ರಶಾಂತ ರಿಪ್ಪನಪೇಟೆ ಶರಣ ಪರಂಪರೆಯ ಮಠಗಳ ಕುರಿತು ವಿಷಯ ಮಂಡನೆ ಮಾಡುವರು.
ಶರಣ ಪರಂಪರೆಯ ರಾಜರು ಕುರಿತಾಗಿ ಢಾ.ಶ್ರೀಪತಿ ಹಳಗುಂದ ವಿಷಯ ಮಂಡನೆ ಮಾಡುವರು. ಸಂವಾದ ನಿರ್ವಹಣೆಯನ್ನು ಶಿವಯೋಗಿ ಹಂಚಿನಮನೆ ನಡೆಸಿಕೊಡುವರು..
ಪ್ರಮುಖರಾದ ರುದ್ರಮುನಿ ಎನ್ ಸಜ್ಜನ್, ಕತ್ತಿಗೆ ಚನ್ನಪ್ಪ, ಉಮೇಶ ಹಾಲಾಡಿ, ಜಯಶೀಲಪ್ಪಗೌಡ ಹರತಾಳು, ಬಿ.ಜಿ.ನಾಗರಾಜ ಉಪಸ್ಥಿತರಿರುವರು.
ಸಮಾಜದಲ್ಲಿಯ ಸುದ್ದಿಗಳನ್ನು ಆರಿಸಿ ಮತ್ತೆ ಸಮಾಜಕ್ಕೆ ನೀಡುವ ಒಂದು ಸಣ್ಣ ಪ್ರಯತ್ನ.. ಆ ಕಾರ್ಯದಲ್ಲಿ ಖಚಿತತೆ, ವಿಶ್ವಾಸಾರ್ಹತೆ, ಸಮಸ್ಯೆಯ ಬಿಂಬ, ಬಿಂಬಿತ ಸಮಸ್ಯೆಗೆ ಪರಿಹಾರದ ಯತ್ನ.. ಆ ಯತ್ನದಲ್ಲಿ ದಕ್ಕಿದ ಒಂದಷ್ಟು ಯಶಸ್ಸು.. ಇದರಲ್ಲಿ‌ ನಿರಂತರತೆ ಕಾಯ್ದುಕೊಳ್ಳುವ ಆಶಯ.. ಅಷ್ಟೆ..

What's your reaction?

Related Posts

1 of 45

Leave A Reply

Your email address will not be published. Required fields are marked *