
ಬಿದನೂರು ಶ್ರೀ ರಾಘವೇಂದ್ರ ಸ್ವಾಮಿ ಮಠದಲ್ಲಿ ಸಂಭ್ರಮದ ಆರಾಧನಾ ಮಹೋತ್ಸವ
ಹೊಸನಗರ: ಬಿದನೂರು ನಗರ ಶ್ರೀ ರಾಘವೇಂದ್ರ ಸ್ವಾಮಿ ಮಠದಲ್ಲಿ ರಾಯರ 353ನೇ ಆರಾಧಾನ ಕಾರ್ಯಕ್ರಮ ವಿಜೃಂಭಣೆಯಿಂದ ನೆರವೇರಿತು.
ಪುರೋಹಿತರಾದ ಕಟ್ಟೆ ಗುರುರಾಜ ಆಚಾರ್ಯ ನೇತೃತ್ವದಲ್ಲಿ ಬುಧವಾರದಿಂದಲೇ ವಿಶೇಷ ಧಾರ್ಮಿಕ ಕಾರ್ಯಕ್ರಮ ನಡೆಯುತ್ತಿದೆ. ಅಷ್ಟೋತ್ತರ ಪಂಚಾಮೃತ ಅಭಿಷೇಕ, ಅಲಂಕಾರ, ಮಹಾಮಂಗಳಾತಿ, ಅನ್ನಸಂತರ್ಪಣೆ ಕಾರ್ಯಕ್ರಮ ನೆರವೇರಿತು. ಅಲ್ಲದೇ ರಾಯರ ಪಲ್ಲಕ್ಕಿ ಉತ್ಸವ ಕೂಡ ದೇಗುಲದಲ್ಲಿ ಗಮನ ಸೆಳೆಯಿತು.


ಮೊದಲದಿನದ ಅನ್ನಸಂತರ್ಪಣೆ ಸೇವಾ ಕಾರ್ಯವನ್ನು ಹಾಸನ ಕವಿತಾ ಮತ್ತು ಗಿರೀಶ ದಂಪತಿಗಳು ಪ್ರತಿವರ್ಷದಂತೆ ಈ ವರ್ಷ ಕೂಡ ನಡೆಸಿಕೊಟ್ಟರು.
ಆರಾಧನೆಯ ದಿನದ ವಿಶೇಷ ಅನ್ನಸಂತರ್ಪಣೆ ಶ್ರೀಮಠದಿಂದ ನೆರವೇರಿತು.
ವೇಶ್ರೀ ಕಾರ್ತಿಕ ಭಟ್ ಮುದ್ರಾಡಿ, ಕೆ.ಹೆಚ್ ಸುಧೀಂದ್ರ ಸಾಗರ, ಕುಮಾರ ಭಟ್, ಕಟ್ಟೆ ನಾಗರಾಜ ಭಟ್, ವಂದಗದ್ದೆ ಶೇಷಾದ್ರಿ, ನಗರಗದ್ದೆ ಮನೆತನದವರು, ಸುತ್ತಮುತ್ತಲ ಗ್ರಾಮದ ಭಕ್ತರು ಆರಾಧನೆಯಲ್ಲಿ ಪಾಲ್ಗೊಂಡಿದ್ದರು.
