![](https://goodmorningkarnataka.com/wp-content/uploads/2022/10/Sun-Time-electronics-hosanagara-ad.jpg)
ಆರ್ಥಿಕ ದುರ್ಬಲತೆಯಿಂದ ಹೊರಬರಲು ಸಹಕಾರಿ ಸಂಘ ಸಹಕಾರಿ: ಪ್ರಜ್ಞಾವಂತ ಆಡಳಿತ ಮಂಡಳಿ ಇದ್ದಲ್ಲಿ ಸಹಕಾರಿ ಅಭಿವೃದ್ಧಿ | ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ|
ಶ್ರೀ ಶಿವಪ್ಪನಾಯಕ ಸೌಹಾರ್ದ ಸಹಕಾರಿ ಸಂಘ ಉದ್ಘಾಟನೆ
ಹೊಸನಗರ: ಹಿಂದಿನಿಂದಲೂ ಶೋಷಿತ ವರ್ಗ ಆರ್ಥಿಕ ದುರ್ಬಲತೆಗೆ ಒಳಗಾಗುತ್ತಲೇ ಬಂದಿದೆ. ಆ ಶೋಷಣೆಯಿಂದ ಹೊರಬರಲು ಸಹಕಾರಿ ಸಂಘಗಳು ಸಹಕಾರಿಯಾಗಿದೆ ಎಂದು ಮಾಜಿ ಗೃಹಸಚಿವ ಶಾಸಕ ಆರಗ ಜ್ಞಾನೇಂದ್ರ ಹೇಳಿದರು.
ತಾಲೂಕಿನ ಚಿಕ್ಕಪೇಟೆ ನಗರದಲ್ಲಿ ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ಶ್ರೀ ಶಿವಪ್ಪ ನಾಯಕ ಸಹಕಾರ ಸಂಘಕ್ಕೆ ಮಾಜಿ ಗೃಹಸಚಿವ, ಶಾಸಕ ಆರಗ ಜ್ಞಾನೇಂದ್ರ ಭಾನುವಾರ ಚಾಲನೆ ನೀಡಿ ಮಾತನಾಡಿದರು.
ಸಹಕಾರಿ ಸಂಸ್ಥೆಗಳು ಪರಸ್ಪರ ಸಹಕಾರದಿಂದ ಬೆಳೆಯುತ್ತವೆ. ಲಾಭವು ಕೂಡ ಶೇರುದಾರರಿಗೆ ಹಂಚಿಕೆಯಾಗುತ್ತದೆ. ಆದರೆ ಕೊಟ್ಟವ ಕೋಡಂಗಿ ಇಸ್ಕಂಡವ ವೀರಭದ್ರ ಅನ್ನುವ ಭಾವನೆಯಿಂದ ಹೊರ ಬರಬೇಕು. ಕೊಟ್ಟು ತೆಗೆದುಕೊಳ್ಳುವ ಒಳ್ಳೆಯ ಮನಸ್ಥಿತಿಯನ್ನು ಬೆಳಸಿಕೊಳ್ಳಬೇಕಿದೆ ಎಂದರು.
![](https://goodmorningkarnataka.com/wp-content/uploads/2022/11/IMG-20221121-WA0002.jpg)
![](https://goodmorningkarnataka.com/wp-content/uploads/2022/10/Sun-Time-electronics-hosanagara-ad-3.jpg)
ಸಹಕಾರಿ ಸಂಘದ ಯೋಜನೆಗಳು ರೈತರಿಗೆ, ಜನರಿಗೆ ಕೂಲಿಕಾರ್ಮಿಕರಿಗೆ ಪೂರಕವಾಗಬೇಕು. ಸಹಕಾರ ಸಂಘದ ನಿರ್ದೇಶಕರುಗಳು ಕ್ಲೀನ್ ಹ್ಯಾಂಡ್ ಆಗಿರಬೇಕು. ಪ್ರಜ್ಞಾವಂತ ಆಡಳಿತ ಮಂಡಳಿ ಇದ್ದಲ್ಲಿ ಸಹಕಾರ ಸಂಘ ಅಭಿವೃದ್ಧಿಯಾಗಿತ್ತದೆ ಎಂದರು.
ಸಹಕಾರಿ ಸಂಘದ ಅಧ್ಯಕ್ಷ ಎನ್.ವೈ.ಸುರೇಶ್ ಅಧ್ಯಕ್ಷತೆ ವಹಿಸಿ, ಸಹಕಾರಿ ಕ್ಷೇತ್ರದಲ್ಲಿ ಮಾದರಿ ಸಂಘವಾಗಿ ರೂಪಿಸುವ ಭರವಸೆ ನೀಡಿದರು.
ಪ್ರೊ. ರಾಮಪ್ಪಗೌಡ ಹೆರಗೊಡಿಗೆ, ಪ್ರಸನ್ನಕುಮಾರ್, ಗ್ರಾಪಂ ಅಧ್ಯಕ್ಷೆ ಸಂಗೀತಾ ಯು, ಉಪಾಧ್ಯಕ್ಷೆ ಸುಮನಾ ಭಾಸ್ಕರ್, ಗ್ರಾಪಂ ಸದಸ್ಯದ ಸದಸ್ಯರಾದ ಕರುಣಾಕರಶೆಟ್ಟಿ, ಎಂ.ವಿಶ್ವನಾಥ, ನಿರ್ಮಲ, ಸವಿತಾ, ಸುಮತಿದಾಸ್, ಸಂಘದ ಉಪಾಧ್ಯಕ್ಷ ಕೆ.ವಿ.ಸುಬ್ರಹ್ಮಣ್ಯ, ಮ್ಯಾಮ್ಕೋಸ್ ನಿರ್ದೇಶಕ ಕೆ.ವಿ.ಕೃಷ್ಣಮೂರ್ತಿ, ಹೆಚ್.ಜಿ.ರಮಾಕಾಂತ, ಪ್ರೊ.ರಾಮಪ್ಪಗೌಡ, ನಿರ್ದೇಶಕರಾಗಿ ಎಸ್.ಎನ್.ದೇವರಾಜ್, ಪಿ.ಪ್ರಕಾಶ್, ಬಿ.ಇ.ಮಂಜುನಾಥ್, ಎಸ್.ಎಸ್.ಸುರೇಶ್, ಹೆಚ್.ಟಿ.ಚಂದ್ರ, ಬಿ.ಪುರುಶೋತ್ತಮ್, ಅಶ್ವಿನಿ ಎಸ್.ಪಾಟೀಲ್, ಕೆ.ಕವಿರಾಜ್, ಎನ್.ಸುಗುಣ, ಕೆ.ಸವಿತಾ, ಟಿ.ಜಿ.ಸೃಪಾ ಉಪಸ್ಥಿತರಿದ್ದರು.
ಕಾರ್ಯನಿರ್ವಾಹಣಾಧಿಕಾರಿ ಕೆ.ಎಸ್.ಶರಣ್ಯ ಕಾರ್ಯಕ್ರಮ ನಿರ್ವಹಿಸಿದರು. ಉಪನ್ಯಾಸಕ ಶ್ರೀಧರ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.
![](https://goodmorningkarnataka.com/wp-content/uploads/2022/10/Sun-Time-electronics-hosanagara-ad-4.jpg)