
-
ಪವರ್ ಲಿಫ್ಟಿಂಗ್ ನಲ್ಲಿ ರಾಜ್ಯಕ್ಕೆ ಮೂರನೇ ಸ್ಥಾನ | ಉಂಬ್ಳೇಬೈಲು ಅರಣ್ಯ ರಕ್ಷಕನ ಸಾಧನೆ
ಶಿವಮೊಗ್ಗ: ಕರ್ನಾಡಕ ರಾಜ್ಯ ಸರ್ಕಾರಿ ನೌಕರರ ಸಂಘದ ವತಿಯಿಂದ ನೌಕರರಿಗಾಗಿ ನಡೆದ ರಾಜ್ಯಮಟ್ಟದ ಕ್ರೀಡಾಕೂಟದಲ್ಲಿ ಉಂಬ್ಳೇಬೈಲು ಅರಣ್ಯ ವಲಯದ ಅರಣ್ಯ ರಕ್ಷಕ ಮಾಲತೇಶ ಸೂರ್ಯವಂಶಿ ಪವರ್ ಲಿಫ್ಟಿಂಗ್ ಸ್ಪರ್ಧೆಯಲ್ಲಿ ಮೂರನೇ ಸ್ಥಾನ ಪಡೆದುಕೊಂಡಿದ್ದಾರೆ.
ತುಮಕೂರು ನಗರದ ಮಹಾತ್ಮಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಮಟ್ಟದ ಕ್ರೀಡಾ ಮತ್ತು ಸಾಂಸ್ಕೃತಿಕ ಸ್ಪರ್ಧೆ ಹಮ್ಮಿಕೊಳ್ಳಲಾಗಿತ್ತು.


ಪವರ್ ಲಿಫ್ಟಿಂಗ್ 120 ಕೆ.ಜಿ. ವಿಭಾಗದ ಸ್ಪರ್ಧಾ ವಿಭಾಗದಲ್ಲಿ ಮಾಲತೇಶ ಸೂರ್ಯವಂಶಿ ಈ ಸಾಧನೆ ಮಾಡಿದ್ದಾರೆ.
ಶಿವಮೊಗ್ಗ ಜಿಲ್ಲೆ ಮತ್ತು ಉಂಬ್ಳೇಬೈಲು ಅರಣ್ಯ ವಲಯಕ್ಕೆ ಕೀರ್ತಿ ತಂದ ಮಾಲತೇಶ ಸೂರ್ಯವಂಶಿ ಸಾಧನೆಯನ್ನು ಉಂಬ್ಳೇಬೈಲು ವಲಯ ಅರಣ್ಯಾಧಿಕಾರಿ ತೇಜ್, ಉಪವಲಯ ಅರಣ್ಯಾಧಿಕಾರಿಗಳಾದ ಅಬ್ದುಲ ಕರೀಮ್, ಚಂದ್ರಶೇಖರ್, ಅರುಣಕುಮಾರ್, ಗಿಡ್ಡಸ್ವಾಮಿ, ನವೀನ್, ಪವನ್, ಅರಣ್ಯ ರಕ್ಷಕ ಸುನೀಲ್, ಶ್ರೀಕಾಂತ್, ಸಂಜು, ರಿಯಾಜ್, ಸಂತೋಷ್ ಅಭಿನಂದಿಸಿದ್ದಾರೆ
