12 ನೇ ವರ್ಷದ ASMA ರಾಜ್ಯಮಟ್ಟದ ಕರಾಟೆ ಸ್ಪರ್ಧೆ-2024 : ಡಿ.8 ರಂದು ಹೊಸನಗರ ಈಡಿಗರ ಭವನದಲ್ಲಿ ಆಯೋಜನೆ
ಹೊಸನಗರ: ASMA ರಾಜ್ಯಮಟ್ಟದ ಕರಾಟೆ ಸ್ಪರ್ಧೆ-2024 ಡಿಸೆಂಬರ್ 8 ರಂದು ಹೊಸನಗರದ ಈಡಿಗರ ಭವನದಲ್ಲಿ ಆಯೋಜಿಸಲಾಗಿದೆ ಎಂದು ASMA ಕರ್ನಾಟಕದ ಅಧ್ಯಕ್ಷ ಜೆ.ಕೆ.ರಾಘವೇಂದ್ರ ತಿಳಿಸಿದ್ದಾರೆ.
ಕರಾಟೆ ದಿಗ್ಗಜ ಹನ್ಷಿ ಸಿ.ಎ.ವಿಜಯನ್ ಅಧ್ಯಕ್ಷತೆಯಲ್ಲಿ ಸ್ಪರ್ಧೆ ಹಾಗೂ ಸಭಾ ಕಾರ್ಯಕ್ರಮ ನಡೆಯಲಿದ್ದು ತಾಲೂಕಿನ ವಿವಿಧ ಗಣ್ಯರು ಭಾಗವಹಿಸುವರು.
ಈ ವೇಳೆ ಕರಾಟೆಯ ವುವಿಧ ವಿಭಾಗದ ಸಾಧಕರಾದ ರಿಷಬ್ ರವಿ, ಅನಿರುದ್ಧ ಎ ಪ್ರಭು, ಅರ್ಜುನ್ ಆರ್, ವಿಶ್ವಾತ್ಮ, ಜಾಹ್ನವಿ ಪ್ರವೀಣ್, ಶೃತಕೀರ್ತಿ ಶಿವಶಂಕರ ಹಿರೇಮಠ, ಪೃಥ್ವಿ ಪ್ರಕಾಶ್, ಪುಷ್ಕರ ಹೆಗಡೆ, ಸ್ಪೂರ್ತಿ ಕುಲಾಲ್, ಅನ್ವಿತ ಕೆ, ಭುವನವರ್ಧಿ ಜೆ, ಚಿನ್ಮಯ್, ಶ್ರೀಷ ಮತ್ತು ತಾಲೂಕು ದೈಹಿಕ ಪರಿವೀಕ್ಷಕ ಬಾಲಚಂದ್ರ ಇವರನ್ನು ಸನ್ಮಾನಿಸಲಾಗುವುದು ಎಂದರು.
ತಾಲೂಕಿನ ವಿವಿಧ ಶಿಕ್ಷಣ ಸಂಸ್ಥೆ, ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಸ್ಪರ್ಧೆ ಏರ್ಪಡಿಸಲಾಗಿದ್ದು ಡಿ.8 ರ ಬೆಳಿಗ್ಗೆ 9 ರಿಂದ ಕರಾಟೆ ಸ್ಪರ್ಧೆ ಆರಂಭವಾಗಲಿದೆ. ಮಧ್ಯಾಹ್ನ 12 ಕ್ಕೆ ವೇದಿಕೆ ಕಾರ್ಯಕ್ರಮ, ಮಧ್ಯಾಹ್ನ 1 ಕ್ಕೆ ಭೋಜನ ವ್ಯವಸ್ಥೆ ಇರುತ್ತದೆ. ಮತ್ತೆ ಕರಾಟೆ ಸ್ಪರ್ಧೆ ಮುಂದುರೆಸಲಾಗುವುದು ಎಂದರು.
ಕಾರ್ಯಕ್ರಮದ ಯಶಸ್ಸಿಗೆ ASMA ಉಪಾಧ್ಯಕ್ಷ ಕೆ.ವಿ.ಲಕ್ಷ್ಮಣ ಆಚಾರ್ಯ, ಹೊಸನಗರ ತಾಲೂಕು ಕರಾಟೆ ಶಿಕ್ಷಕರ ಸಂಘದ ಅಧ್ಯಕ್ಷ ಎನ್.ಎಸ್.ಹರೀಶ್ ಕುಮಾರ್, ಗೌರವಾಧ್ಯಕ್ಷ ವಕೀಲ ಮೋಹನ ಜಿ ಶೆಟ್ಟಿ, ಖಜಾಂಚಿ ಶ್ರೀಧರ ಶೆಟ್ಟಿ, ಸಂಘದ ಪದಾಧಿಕಾರಿಗಳು ಕೈಜೋಡಿಸಿದ್ದಾರೆ ಎಂದರು.