ಶಿವಮೊಗ್ಗ ಜಿಲ್ಲೆತಾಲ್ಲೂಕುತೀರ್ಥಹಳ್ಳಿಪ್ರಮುಖ ಸುದ್ದಿಶಿವಮೊಗ್ಗಸಾಗರ

ಇಂದು ಪ್ರೌಢಶಾಲಾ ಕ್ರೀಡಾಕೂಟ..! ನಾಳೆ SSLC ಅರ್ಧ ವಾರ್ಷಿಕ ಪರೀಕ್ಷೆ ?.. ಓದೋದು ಯಾವಾಗ.. ಹೇಗೆ ಪರೀಕ್ಷೆ ಬರೆಯೋದು?.. ಕ್ರೀಡಾ ವಿದ್ಯಾರ್ಥಿಗಳ ಪಾಡೇನು ಸ್ವಾಮಿ?

ಇಂದು ಪ್ರೌಢಶಾಲಾ ಕ್ರೀಡಾಕೂಟ..! ನಾಳೆ SSLC ಅರ್ಧ ವಾರ್ಷಿಕ ಪರೀಕ್ಷೆ ?.. ಓದೋದು ಯಾವಾಗ.. ಹೇಗೆ ಪರೀಕ್ಷೆ ಬರೆಯೋದು?.. ಕ್ರೀಡಾ ವಿದ್ಯಾರ್ಥಿಗಳ ಪಾಡೇನು ಸ್ವಾಮಿ?

ಹೊಸನಗರ: ಪಠ್ಯಕ್ಕೆ ಮಾತ್ರ ಒತ್ತು ನೀಡಿದರೆ ಸಾಲದು ಪಠ್ಯೇತರ ವಿಷಯಕ್ಕು ಆಧ್ಯತೆ ನೀಡಬೇಕು ಎಂಬುದು ವಿಧ್ಯಾರ್ಥಿಗಳಿಗೆ ಪದೇ ಪದೇ ಹೇಳುವ ಕಿವಿಮಾತು.. ಆದರೆ ಎರಡಕ್ಕು ಒಂದೇ ಸಮಯದಲ್ಲಿ ಒತ್ತು ನೀಡಲು ಸಾಧ್ಯವೇ.. ಇಲ್ಲಿಯ ಕ್ರೀಡಾ ವಿದ್ಯಾರ್ಥಿ ಸ್ಥಿತಿ ಹಾಗೆಯೇ ಇದೆ.

ಹೌದು ಇಂದು ಸೋಮವಾರ ತಾಲೂಕಿನ ನೆಹರು ಕ್ರೀಡಾಂಗಣದಲ್ಲಿ ತಾಲೂಕು ಪ್ರೌಢಶಾಲಾ ಮಟ್ಟದ ಕ್ರೀಡಾಕೂಟ ನಡೆಯುತ್ತಿದೆ. ಹೊಸನಗರದ ಶ್ರೀ ಗುರೂಜಿ ಇಂಟರ್ ನ್ಯಾಷನಲ್ ಸ್ಕೂಲ್ ಇದರ ಸಾರಥ್ಯ ವಹಿಸಿಕೊಂಡಿದೆ. ನಾಳೆ ಅಂದರೆ ಸೆ.24 ರಿಂದ SSLC ವಿದ್ಯಾರ್ಥಿಗಳಿಗೆ ಅರ್ಧವಾರ್ಷಿಕ ಪರೀಕ್ಷೆ ನಿಗಧಿಯಾಗಿದೆ. ಇದರಿಂದಾಗಿ ಕ್ರೀಡೆಯಲ್ಲಿ ಭಾಗಿಯಾಗಿರುವ SSLC ವಿದ್ಯಾರ್ಥಿಗಳು ಒಂದೇ ಸಮಯದಲ್ಲಿ ಎರಡನ್ನು ನಿಭಾಯಿಸಬೇಕಾದ ಸ್ಥಿತಿ ಬಂದಿದೆ.
ತಾಲೂಕು ಮಟ್ಟದ ಕ್ರೀಡಾಕೂಟ ಎಂದರೆ ವಲಯ ಮಟ್ಟವನ್ನು ಪ್ರತಿನಿಧಿಸಿ ಆಯ್ಕೆಯಾಗಿ ಬರಬೇಕು. ಕ್ರೀಡಾಕೂಟದ ವರೆಗೂ ಭರ್ಜರಿ ಪ್ರಾಕ್ಟೀಸ್ ಮಾಡಬೇಕು. ಕ್ರೀಡೆಯಲ್ಲೂ ಉತ್ತಮ ಸಾಧನೆ ತೋರಬೇಕಿರುವುದು ಶಾಲೆಗಳ ಅನಿವಾರ್ಯತೆ ಕೂಡ ಹೌದು.. ಈ ನಡುವೆ SSLC ಅಂದರೇನೇ ವಿದ್ಯಾರ್ಥಿಗಳಿಗೆ, ಅವರನ್ನು ಹೆತ್ತ ವಿದ್ಯಾರ್ಥಿಗಳಿಗೆ, ಉತ್ತಮ ಪಲಿತಾಂಶದ ಗುರಿ ಹೊಂದಿದ ಶಾಲೆಗಳಿಗೂ ಒಂತರಾ ಢವ..ಢವ. ಅದಕ್ಕಾಗಿ ಇಡೀ ವರ್ಷವೇ ಭಗೀರಥ ಪ್ರಯತ್ನ ನಡೆಯುತ್ತದೆ. ಆದರೆ ಅರ್ಧವಾರ್ಷಿಕ ದಂತಹ ಮಹತ್ವದ ಪರೀಕ್ಷೆಯನ್ನು ಕ್ರೀಡಾ ವಿದ್ಯಾರ್ಥಿಗಳು ನಿಭಾಯಿಸೋದು ಹೇಗೆ..

ಸಮಸ್ಯೆ ಅವಾಂತರ:
ಬಹುಶಃ ಹೊಸನಗರ, ತೀರ್ಥಹಳ್ಳಿ, ಸಾಗರ ಮತ್ತು ಚಿಕ್ಕಮಗಳೂರಿನ ಮಳೆ ಬೀಳುವ ತಾಲೂಕುಗಳ ಸಮಸ್ಯೆ ಇದು.. ಕಾರಣ ಮಳೆ.. ಕ್ರೀಡಾಕೂಟವನ್ನು ನಿಗಧಿತ ಅವಧಿಯಲ್ಲಿ ಮುಗಿಸೋದು ಕಷ್ಟ. ಕಾರಣ ಎಡಬಿಡದೇ ಕಾಡೋ ಮಳೆ.. ಒಂದೆಡೆ ಸುಗಮವಾಗಿ ಕ್ರೀಡೆಯನ್ನು ಆಡುವ ಸ್ಥಿತಿ ವಿದ್ಯಾರ್ಥಿಗಳಿಗಿಲ್ಲ.. ಮತ್ತೊಂದೆಡೆ ಕ್ರೀಡೆಯ ಒಳಗೋದ ಮನಸ್ಸನ್ನು ದಿಢೀರ್ ಓದೋ ಕಡೆ ಬದಲಾಯಿಸಿ ಪರೀಕ್ಷೆ ಬರೆಯೋ ಸ್ಥಿತಿಯಲ್ಲೂ ಇಲ್ಲ.. ಒಟ್ಟಾರೆ ನಾಮಾಕಾವಾಸ್ತೆ ಯಂತೆ.. ಯಾರಿಗೇಳೋಣ..ನಮ್ಮ ಪ್ರಾಬ್ಲಮ್ಮೂ…! ಎಂಬ ಸ್ಥಿತಿ ವಿಧ್ಯಾರ್ಥಿಗಳದ್ದು.

ಯಾಕೆ ಹೀಗೆ.. ?
ಶಿಕ್ಷಣ ಇಲಾಖೆಯ ಸುತ್ತೋಲೆ ಇಡೀ ರಾಜ್ಯಕ್ಕೆ ಅನ್ವಯ.. ಆದರೆ ಹೊಸನಗರ ಸೇರಿದಂತೆ ಮಳೆ ಬೀಳುವ ತಾಲೂಕಿನಲ್ಲಿರೋದು ಪ್ರಾಕೃತಿಕ ಸಮಸ್ಯೆ. ಈ ಸಮಸ್ಯೆಯನ್ನು ನಿಭಾಯಿಸೋದು ಮಕ್ಕಳಿಗೆ ಕಷ್ಟವಲ್ಲವೇ.. ಸಮಸ್ಯೆಗಳ‌ ನಡುವೆ ಓದು ಮತ್ತು ಕ್ರೀಡೆಯಲ್ಲಿ ಸಾಧನೆ ಕಷ್ಟವಲ್ಲವೇ..? ಇದು ಒಂದು ರೀತಿ ಇಲ್ಲಿಯ ಕ್ರೀಡಾ ವಿದ್ಯಾರ್ಥಿಗಳ ಭವಿಷ್ಯಕ್ಕೆ ಮಾರಕವಲ್ಲವೇ..? ಈ ಬಗ್ಗೆ ಪರಿಹಾರ ಏನು ?

ಪ್ರತಿ ವರ್ಷ ಇದೇ ಗೋಳು ಕಂಡು ಬರುತ್ತಿರುವ ಇಲ್ಲಿ.. ಈ ಸಮಸ್ಯೆ ನೀಗಿಸುವಲ್ಲಿ.. ವಿದ್ಯಾರ್ಥಿಗಳು ಪಠ್ಯ ಹಾಗೂ ಕ್ರೀಡೆಯಲ್ಲಿ ಸುಗಮವಾಗಿ ಪಾಲ್ಗೊಳ್ಳುವ ಸಲುವಾಗಿ ಜಿಲ್ಲಾ ಮಟ್ಟದ ಅಧಿಕಾರಿಗಳು, ಜನಪ್ರತಿನಿಧಿಗಳು ಒಟ್ಟಾಗಿ ಸೂಕ್ತ ಪರಿಹಾರ ಸೂತ್ರವನ್ನು ಕಂಡುಕೊಳ್ಳುವುದು ಅಗತ್ಯ ಎಂಬುದು ಸಾರ್ವಜನಿಕರ ಆಶಯ..

ಸಮಾಜದಲ್ಲಿಯ ಸುದ್ದಿಗಳನ್ನು ಆರಿಸಿ ಮತ್ತೆ ಸಮಾಜಕ್ಕೆ ನೀಡುವ ಒಂದು ಸಣ್ಣ ಪ್ರಯತ್ನ.. ಆ ಕಾರ್ಯದಲ್ಲಿ ಖಚಿತತೆ, ವಿಶ್ವಾಸಾರ್ಹತೆ, ಸಮಸ್ಯೆಯ ಬಿಂಬ, ಬಿಂಬಿತ ಸಮಸ್ಯೆಗೆ ಪರಿಹಾರದ ಯತ್ನ.. ಆ ಯತ್ನದಲ್ಲಿ ದಕ್ಕಿದ ಒಂದಷ್ಟು ಯಶಸ್ಸು.. ಇದರಲ್ಲಿ‌ ನಿರಂತರತೆ ಕಾಯ್ದುಕೊಳ್ಳುವ ಆಶಯ.. ಅಷ್ಟೆ..

What's your reaction?

Related Posts

1 of 45

Leave A Reply

Your email address will not be published. Required fields are marked *