
ತೀರ್ಥಹಳ್ಳಿ.ಜು.29: ಕೊಂಡ್ಲೂರಿನಿಂದ ತೀರ್ಥಹಳ್ಳಿಗೆ ಸಾಗುವ ಮಾರ್ಗದಲ್ಲಿ ಮಧ್ಯ ರಾತ್ರಿ ಸಾಗುವಾಗ ಬೊಬ್ಬಿ ಬಳಿ ಕಂಡು ಬಂದ ದೃಶ್ಯವಿದು.

ಎರಡು ಕಟ್ಟುಮಸ್ತಾದ ಕಾಡುಕೋಣಗಳು ಹೆದ್ದಾರಿ ಮೇಲೆ ಠಿಕಾಣಿ ಹೂಡಿದ್ದು.. ಜಪ್ಪಯ್ಯ ಅಂದರೂ ಅಲುಗಾಡುತ್ತಿರಲಿಲ್ಲ.. ಕಾರಿನಲ್ಲಿ ತೀರ್ಥಹಳ್ಳಿ ಆಸ್ಪತ್ರೆಗೆ ಹೋಗುತ್ತಿದ್ದವರು ಒಮ್ಮೆಲೆ ಕಾಡುಕೋಣಗಳನ್ನು ಕಂಡು ದಂಗಾಗುವಂತಾಗಿತ್ತು. ಕಾಲು ಗಂಟೆ ಹೆದ್ದಾರಿಯಲ್ಲಿ ಮುಂದೆ ಸಾಗುವ ಧೈರ್ಯ ಮಾಡಲಿಲ್ಲ. ಬಳಿಕ ಕಾಡುಕೋಣಗಳು ನಿಧಾನವಾಗಿ ರಸ್ತೆ ಬದಿ ಸಾಗುತ್ತಿದ್ದಂತೆ ಮುಂದಿನ ಪಯಣ ಬೆಳೆಸಿದ್ದಾರೆ.


ದೂರದಲ್ಲಿ ನೋಡಿದಾಗ ಬೆಳ್ಳಗಿನ ನಾಲ್ಕು ಕಂಬಗಳು ಕಂಡು ಬಂದಿದ್ದು ಆರಂಭದಲ್ಲಿ ಮರಗಳ ಬುಡಕ್ಕೆ ಸುಣ್ಣ ಹೊಡೆದಿದ್ದು ಅದು ಎದ್ದು ಕಾಣುತ್ತಿವೆ ಅಂದುಕೊಂಡಿದ್ದೆವು.. ಹತ್ತಿರ ಹತ್ತಿರ ಹೋಗುತ್ತಿದ್ದಂತೆ ಅವು ಕಾಡುಕೋಣಗಳು ಎಂದು ಗೊತ್ತಾಗಿದ್ದು. ಎರಡು ಕಾಡುಕೋಣಗಳು ಕಾರನ್ನೇ ದಿಟ್ಟಿಸಿ ನೋಡುತ್ತಿದ್ದು ಗಾಬರಿ ಹುಟ್ಟಿಸಿತ್ತು ಎನ್ನುತ್ತಾರೆ ಕಾರಿನಲ್ಲಿದ್ದ ನಾಗಭೂಷಣ.











