
ಡಿಸೇಲ್ ಖಾಲಿಯಾಗಿ ಹುಲಿಕಲ್ ಘಾಟ್ ರಸ್ತೆ ಮೇಲೆ ನಿಂತ ಉಡುಪಿ ತೆರಳುತ್ತಿದ್ದ KSRTC ಬಸ್ಸು! ಒಂದು ಗಂಟೆ ಕಾಲ ಅಲ್ಲೇ ನಿಂತ ಬಸ್ಸು!
ಹೊಸನಗರ: ಡಿಸೇಲ್ (Diesel) ಖಾಲಿಯಾಗಿ ಕೆಎಸ್‌ಆರ್‌ಟಿಸಿ ಬಸ್ ಹುಲಿಕಲ್ ಘಾಟಿ ತಿರುವಿನ ಸಮೀಪ ನಿಂತಿತ್ತು. ಇದರಿಂದ ಘಾಟಿಯಲ್ಲಿ ಕೆಲಕಾಲ ವಾಹನ ಸಂಚಾರ ಅಸ್ತವ್ಯಸ್ತವಾಗಿತ್ತು.
ಶಿವಮೊಗ್ಗ ಹೊಸನಗರ ಮಾರ್ಗವಾಗಿ ಉಡುಪಿಗೆ ತೆರಳುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್ಸು ಹುಲಿಕಲ್ ಘಾಟಿಯ ಮುಖ್ಯ ತಿರುವಿನಲ್ಲಿ ಡಿಸೇಲ್ ಖಾಲಿಯಾಗಿ ನಿಂತಿತ್ತು.
ಘಾಟಿ ರಸ್ತೆ ಕಿರಿದಾಗಿದ್ದು ಇತರೆ ವಾಹನಗಳ ಸಂಚಾರಕ್ಕೆ ಅಡಚಣೆ ಉಂಟಾಗಿತ್ತು. ಕಾರು, ಸಣ್ಣ ಗೂಡ್ಸ್ ವಾಹನಗಳು ಮಾತ್ರ ಬಸ್ಸನ್ನು ದಾಟಿ ಹೋಗಲು ಸಾಧ್ಯವಾಗಿತ್ತು.
ಸ್ವಲ್ಪ ಹೊತ್ತಿನ ಬಳಿಕ ಮಾಸ್ತಿಕಟ್ಟೆಯಿಂದ ಡಿಸೇಲ್ ವ್ಯವಸ್ಥೆ ಮಾಡಲಾಯಿತು. ಬಹು ಹೊತ್ತು ನಡುರಸ್ತೆಯಲ್ಲೇ ಬಸ್ ನಿಂತಿದ್ದರಿಂದ ಹುಲಿಕಲ್ ಘಾಟಿಯಲ್ಲಿ ಕೆಲಕಾಲ ಸಂಚಾರ ಅಸ್ತವ್ಯಸ್ತವಾಗಿತ್ತು.
