ACCIDENT|YADURU| THIRTHAHALLI|ಯಡೂರು ಅಪಘಾತದಲ್ಲಿ ಕಾರು ಮತ್ತು ಲಾರಿ ನಜ್ಜುಗುಜ್ಜು | 15 ಅಡಿ ಕೆಳಕ್ಕೆ ಉರುಳಿದ ಲಾರಿ
ಹೊಸನಗರ: ತೀರ್ಥಹಳ್ಳಿ ಕಡೆಯಿಂದ ಬರುತ್ತಿದ್ದ ಲಾರಿ ಮತ್ತು ಮಾಸ್ತಿಕಟ್ಟೆ ಕಡೆಯಿಂದ ಬರುತ್ತಿದ್ದ ಕಾರಿನ ನಡುವೆ ಅಪಘಾತ ನಡೆದ ಘಟನೆ ಯಡೂರು ಮುಖ್ಯರಸ್ತೆಯಲ್ಲಿ ನಡೆದಿದೆ.
ಕಾರಿನಲ್ಲಿ ನಾಲ್ಕು ಜನರಿದ್ದು ಯಾವುದೇ ಅಪಾಯವಾಗಿಲ್ಲ. ಲಾರಿ 15 ಅಡಿ ಕೆಳಗೆ ಬಿದ್ದ ಕಾರಣ ಚಾಲಕನಿಗೆ ಸ್ವಲ್ಪ ಪೆಟ್ಟಾಗಿದ್ದು ಚಿಕಿತ್ಸೆಗೆ ಮಾಸ್ತಿಕಟ್ಟೆಗೆ ಕಳುಹಿಸಲಾಗಿದೆ.
ಶಿವಮೊಗ್ಗದವರು ಎನ್ನಲಾದ ನಾಲ್ವರು ಪ್ರವಾಸಕ್ಕೆಂದು ಬಂದು ಯಡೂರಿನ ಆಮಂತ್ರಣ ರೆಸಾರ್ಟ್ ನಲ್ಲಿ ಉಳಿದುಕೊಂಡಿದ್ದರು. ಬುಧವಾರ ಹುಲಿಕಲ್ ಫಾಲ್ಸ್ ನೋಡಿ ವಾಪಾಸಾಗುವ ವೇಳೆಗೆ ಈ ದುರ್ಘಟನೆ ನಡೆದಿದೆ.
ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಘಟನಾ ಸ್ಥಳಕ್ಕೆ ತೆರಳಿ ಪರಿಶೀಲಿಸಿದರು.