
ರಿಪ್ಪನ್‌ಪೇಟೆ;-ಗಂಡುಮೆಟ್ಟಿನ ಯಕ್ಷಗಾನ ಕಲೆಯನ್ನು ಉಳಿಸಿ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಪ್ರೇಕ್ಷಕರ ಕಾರ್ಯ ಮುಖ್ಯವಾಗಿದೆ ಎಂದು ಭಾಗವತರಾದ ಜನ್ಸಾಲೆ ರಾಘವೇಂದ್ರ ಅಚಾರ್ಯ ಹೇಳಿದರು.
ರಿಪ್ಪನ್‌ಪೇಟೆ ಮಿತ್ರಬಳಗ ಇಲ್ಲಿನ ಭೂಪಾಳಂ ಚಂದ್ರಶೇಖರಯ್ಯ ಸಭಾಭವನದಲ್ಲಿ ಭಾರತ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಅಂಗವಾಗಿ ಅಯೋಜಿಸಲಾದ `ಶ್ರಾವಣ ಯಕ್ಷ ಸಂಭ್ರಮ ಕಾರ್ಯಕ್ರಮವನ್ನು ಉದ್ಘಾಟಿಸಿ ಅಭಿಮಾನಿಗಳ ಸನ್ಮಾನ ಸ್ವೀಕರಿಸಿ ಮಾತನಾಡಿದರು.


ಕಲಾವಿದರು ಬದುಕು ದುಸ್ತರವಾಗಿದ್ದು ಕೊರೋನಾ ಮಹಾಮಾರಿಯಿಂದಾಗಿ ಎಲ್ಲಾ ರಂಗಗಳಲ್ಲಿ ಸಾಕಷ್ಟು ನಷ್ಟ ಅನುಭವಿಸುವಂತಾಗಿದೆ ಅದರೆ ಕಲಾಭಿಮಾನಿಗಳ ಪ್ರೋತ್ಸಾಹವೇ ನಮ್ಮ ಕಲೆಗೆ ಪೂರಕ ಪ್ರೇರಕವಾಗಿದೆ. ಇದೇ ರೀತಿಯಲ್ಲಿ ಕಲಾವಿದರನ್ನು ಪ್ರೋತ್ಸಾಹಿಸುವ ಕಾರ್ಯ ಎಲ್ಲರೂ ಮಾಡಬೇಕಾಗಿದೆ ಎಂದರು.
ಮಿತ್ರಬಳದ ಅಧ್ಯಕ್ಷ ಹೆಚ್.ಎಸ್.ಸುದೀಂದ್ರ ಹೆಬ್ಬಾರ್ ಅಧ್ಯಕ್ಷತೆ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಮಾಜಿ ಜಿಪಂ ಸದಸ್ಯ ಬಂಡಿ ರಾಮಚಂದ್ರ, ಜಿಎಸ್‌ಬಿ ಸಮಾಜದ ಅಧ್ಯಕ್ಷ ಗಣೇಶ್ ಎನ್.ಕಾಮತ್, ದೇವಸ್ಥಾನ ಧರ್ಮದರ್ಶಿ ಸಮಿತಿಯ ಅಧ್ಯಕ್ಷ ಈಶ್ವರಶೆಟ್ಟಿ, ಹಿಂದೂ ಮಹಾಸಭಾ ಸೇವಾ ಸಮಿತಿಯ ಅಧ್ಯಕ್ಷ ವೈ.ಜೆ.ಕೃಷ್ಣ, ಹಿಂದೂ ಮಹಾಸಭಾ ಕಟ್ಟಡ ಜೀರ್ಣೋದ್ದಾರ ಸಮಿತಿ ಅಧ್ಯಕ್ಷ ಎಂ.ಬಿ.ಮಂಜುನಾಥ,ವಿನಾಯಕ ದೇವಸ್ಥಾನ ಜೀರ್ಣೋದ್ದಾರ ಸಮಿತಿ ಅಧ್ಯಕ್ಷ ಎನ್.ಸತೀಶ್,ತಾಲ್ಲೂಕ್ ವಿಶ್ವಕರ್ಮ ಸಮಾಜದ ಅಧ್ಯಕ್ಷ ಅರ್.ಹೆಚ್.ದೇವದಾಸ್ ಅಚಾರ್,ಹೋಬಳಿ ಘಟಕದ ವಿಶ್ವಕರ್ಮ ಸಮಾಜದ ಅಧ್ಯಕ್ಷ ಅರ್.ಹೆಚ್.ಶ್ರೀನಿವಾಸ್ ಅಚಾರ್,ಎಂ.ಸುರೇಶ್ ಸಿಂಗ್ ಇನ್ನಿತರರು ಪಾಲ್ಗೊಂಡಿದ್ದರು
ಇದೇ ಸಂದರ್ಭದಲ್ಲಿ ಯಕ್ಷಗಾನ ಭಾಗವತ ಜನ್ಸಾಲೆ ರಾಘವೇಂದ್ರ ಅಚಾರ್ಯ, ಜಿಎಸ್‌ಬಿ ಸಮಾಜದ ಅಧ್ಯಕ್ಷ ಗಣೇಶ್ ಎನ್.ಕಾಮತ್, ಸಿದ್ದಿವಿನಾಯಕ ದೇವಸ್ಥಾನ ಸೇವಾ ಸಮಿತಿ ಅಧ್ಯಕ್ಷ ಈಶ್ವರಶೆಟ್ಟಿ ಇವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಎನ್.ಸತೀಶ್ ಸ್ವಾಗತಿಸಿದರು. ಸುರೇಶ್ ಸಿಂಗ್ ನಿರೂಪಿಸಿ ವಂದಿಸಿದರು.
