Homeತಾಲ್ಲೂಕು

ಅರೆಬೆತ್ತಲೆಯಾಗಿ ತಾಪಂ ಕಚೇರಿ ಗುಡಿಸಿದ ಗ್ರಾಪಂ ಅಧ್ಯಕ್ಷ

ತಾಪಂ ಕಚೇರಿ ಗುಡಿಸುತ್ತಿರುವ ಅಧ್ಯಕ್ಷ: ನರೇಗಾ ಯೋಜನೆಯಡಿ ಕಾಮಗಾರಿ ನಿರ್ವಹಿಸಲು ಗ್ರಾಪಂ ಅಧಿಕಾರವನ್ನು ಕಸಿದುಕೊಂಡ ತೋಟಗಾರಿಕಾ ಇಲಾಖಾ ಅಧಿಕಾರಿಗಳ ಕ್ರಮವನ್ನು ವಿರೋಧಿಸಿ ಗ್ರಾಪಂ ಅಧ್ಯಕ್ಷನೋರ್ವ ಅರೆಬೆತ್ತೆಲೆಯಾಗಿ ತಾಪಂ ಕಚೇರಿ ಗುಡಿಸಿದ ಘಟನೆ ಹೊಸನಗರದಲ್ಲಿ ನಡೆದಿದೆ.

ಮೂಡುಗೊಪ್ಪ ಗ್ರಾಪಂ ಅಧ್ಯಕ್ಷ ಕರುಣಾಕರ ಶೆಟ್ಟಿ ಅರೆಬೆತ್ತಲೆ ಪ್ರತಿಭಟನೆ ನಡೆಸಿದ ವ್ಯಕ್ತಿ. ನರೇಗಾ ಯೋಜನೆಯಡಿ ಗ್ರಾಮಸಭೆಯಲ್ಲಿ ನಿರ್ಣಯಗೊಂಡ ಫಲಾನುಭವಿಗಳಿಗೆ ಅಡಕೆ ಗಿಡ ನೆಡಲು ಅನುದಾನ ನೀಡುವ ಅಧಿಕಾರಿ ಗ್ರಾಪಂಗಿದೆ. ಆದರೆ ಗ್ರಾಪಂಗೆ ಯಾವುದೇ ಮಾಹಿತಿ ನೀಡದ ತೋಟಗಾರಿಕಾ ಇಲಾಖಾ ಅಧಿಕಾರಿಗಳು ಅವರೇ ಫಲಾನುಭವಿಗಳನ್ನು ಗುರುತು ಮಾಡಿ ಲಂಚ ಪಡೆದು ಪಟ್ಟಿಯನ್ನು ತಾಪಂ ಇಒಗೆ ಕಳುಹಿಸಿ ಅಲ್ಲೇ ಮಂಜೂರು ಪಡೆದಿರುತ್ತಾರೆ.ಪಂಚಾಯ್ತಿಗಿರುವ ಪರಮಾಧಿಕಾರಿ ಕಸಿದುಕೊಂಡು, ಪಂ ಅಧ್ಯಕ್ಷರು ಮತ್ತು ಅಭಿವೃದ್ಧಿ ಅಧಿಕಾರಿಗಳ ಸಹಿಯನ್ನು ಪಡೆಯದೇ ಅಕ್ರಮ ಪಟ್ಟಿ ತಯಾರಿಸಿದ ಕಾರಣ ಈ ಆಕ್ರೋಶಕ್ಕೆ ಕಾರಣವಾಗಿದೆ.

ನಮ್ಮ ಕೆಲಸವನ್ನು ತಾಪಂ ಇಒ ಸೇರಿದಂತೆ ಅಧಿಕಾರಿಗಳು ನಿರ್ವಹಿಸಿದ ಕಾರಣ ತಾಪಂಗೆ ತೆರಳಿ ಕಸಗುಡಿಸುವ ಮೂಲಕ ಪ್ರತಿಭಟಿಸಲಾಗಿದೆ ಎಂದು ಗ್ರಾಪಂ ಅಧ್ಯಕ್ಷ ಕರುಣಾಕರಶೆಟ್ಟಿ ತಿಳಿಸಿದ್ದಾರೆ.

ಈ ಬಗ್ಗೆ ಕೂಡಲೇ ಗಮನಹರಿಸಿ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಜಿಪಂ ಸಿಇಒರನ್ನು ಆಗ್ರಹಿಸಿದ್ದಾರೆ.

ಸಮಾಜದಲ್ಲಿಯ ಸುದ್ದಿಗಳನ್ನು ಆರಿಸಿ ಮತ್ತೆ ಸಮಾಜಕ್ಕೆ ನೀಡುವ ಒಂದು ಸಣ್ಣ ಪ್ರಯತ್ನ.. ಆ ಕಾರ್ಯದಲ್ಲಿ ಖಚಿತತೆ, ವಿಶ್ವಾಸಾರ್ಹತೆ, ಸಮಸ್ಯೆಯ ಬಿಂಬ, ಬಿಂಬಿತ ಸಮಸ್ಯೆಗೆ ಪರಿಹಾರದ ಯತ್ನ.. ಆ ಯತ್ನದಲ್ಲಿ ದಕ್ಕಿದ ಒಂದಷ್ಟು ಯಶಸ್ಸು.. ಇದರಲ್ಲಿ‌ ನಿರಂತರತೆ ಕಾಯ್ದುಕೊಳ್ಳುವ ಆಶಯ.. ಅಷ್ಟೆ..

What's your reaction?

Related Posts

ಅಡಿಕೆ ಔಷಧಿ ಹೊಡೆಯುವ ವೇಳೆ ಮರದಿಂದ ಬಿದ್ದ ವ್ಯಕ್ತಿ ಸಾ*ವು!  ಕರಿಮನೆ ಗ್ರಾಪಂ ಕಿಳಂದೂರು‌ ಗ್ರಾಮದಲ್ಲಿ ಘಟನೆ

ಅಡಿಕೆ ಔಷಧಿ ಹೊಡೆಯುವ ವೇಳೆ ಮರದಿಂದ ಬಿದ್ದ ವ್ಯಕ್ತಿ ಸಾ*ವು!  ಕರಿಮನೆ ಗ್ರಾಪಂ ಕಿಳಂದೂರು‌…

1 of 48

Leave A Reply

Your email address will not be published. Required fields are marked *