
ಮೂಡುಗೊಪ್ಪ ಗ್ರಾಪಂ ಅಧ್ಯಕ್ಷ ಕರುಣಾಕರ ಶೆಟ್ಟಿ ಅರೆಬೆತ್ತಲೆ ಪ್ರತಿಭಟನೆ ನಡೆಸಿದ ವ್ಯಕ್ತಿ. ನರೇಗಾ ಯೋಜನೆಯಡಿ ಗ್ರಾಮಸಭೆಯಲ್ಲಿ ನಿರ್ಣಯಗೊಂಡ ಫಲಾನುಭವಿಗಳಿಗೆ ಅಡಕೆ ಗಿಡ ನೆಡಲು ಅನುದಾನ ನೀಡುವ ಅಧಿಕಾರಿ ಗ್ರಾಪಂಗಿದೆ. ಆದರೆ ಗ್ರಾಪಂಗೆ ಯಾವುದೇ ಮಾಹಿತಿ ನೀಡದ ತೋಟಗಾರಿಕಾ ಇಲಾಖಾ ಅಧಿಕಾರಿಗಳು ಅವರೇ ಫಲಾನುಭವಿಗಳನ್ನು ಗುರುತು ಮಾಡಿ ಲಂಚ ಪಡೆದು ಪಟ್ಟಿಯನ್ನು ತಾಪಂ ಇಒಗೆ ಕಳುಹಿಸಿ ಅಲ್ಲೇ ಮಂಜೂರು ಪಡೆದಿರುತ್ತಾರೆ.ಪಂಚಾಯ್ತಿಗಿರುವ ಪರಮಾಧಿಕಾರಿ ಕಸಿದುಕೊಂಡು, ಪಂ ಅಧ್ಯಕ್ಷರು ಮತ್ತು ಅಭಿವೃದ್ಧಿ ಅಧಿಕಾರಿಗಳ ಸಹಿಯನ್ನು ಪಡೆಯದೇ ಅಕ್ರಮ ಪಟ್ಟಿ ತಯಾರಿಸಿದ ಕಾರಣ ಈ ಆಕ್ರೋಶಕ್ಕೆ ಕಾರಣವಾಗಿದೆ.
ನಮ್ಮ ಕೆಲಸವನ್ನು ತಾಪಂ ಇಒ ಸೇರಿದಂತೆ ಅಧಿಕಾರಿಗಳು ನಿರ್ವಹಿಸಿದ ಕಾರಣ ತಾಪಂಗೆ ತೆರಳಿ ಕಸಗುಡಿಸುವ ಮೂಲಕ ಪ್ರತಿಭಟಿಸಲಾಗಿದೆ ಎಂದು ಗ್ರಾಪಂ ಅಧ್ಯಕ್ಷ ಕರುಣಾಕರಶೆಟ್ಟಿ ತಿಳಿಸಿದ್ದಾರೆ.
ಈ ಬಗ್ಗೆ ಕೂಡಲೇ ಗಮನಹರಿಸಿ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಜಿಪಂ ಸಿಇಒರನ್ನು ಆಗ್ರಹಿಸಿದ್ದಾರೆ.