
ಹೊಸನಗರ.ಆ.20: ಹಲವು ಸಮಯದಿಂದ ತಾಲೂಕು ಕೇಂದ್ರ ಹೊಸನಗರಕ್ಕೆ ವಂಚಿತವಾಗಿದ್ದ 108 ಅಂಬುಲೆನ್ಸ್ ಸೇವೆ ಲಭ್ಯವಾಗಿದೆ.
ದುರಸ್ಥಿಯ ನೆಪದಲ್ಲಿ ಹೊಸನಗರದಲ್ಲಿ 108 ತುರ್ತುವಾಹನ ಲಭ್ಯವಿರಲಿಲ್ಲ. ಕಳೆದ ಮೂರ್ನಾಲ್ಕು ತಿಂಗಳಿಂದ ಸೇವೆ ಸಿಗದೆ ಬಡ ರೈತಕೂಲಿಕಾರ್ಮಿಕರು ನಲುಗುವಂತಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದರು. ಅಲ್ಲದೇ ಕೆಲವು ದಿನಗಳ ಹಿಂದೆ ತುಂಬು ಗರ್ಭಿಣಿಯೊಬ್ಬರು 108 ಅಂಬುಲೆನ್ಸ್ ಸಿಗದೆ ಪರದಾಡಿದ್ದರು.


ಇದನ್ನು ಓದಿ: 108 ಅಂಬುಲೆನ್ಸ್ ಗಾಗಿ ಪರದಾಡಿದ ತುಂಬು ಗರ್ಭಿಣಿ https://goodmorningkarnataka.com/108-ambulance-hosanagar/
ಈ ಬಗ್ಗೆ ಮಾಧ್ಯಮದಲ್ಲಿ ವರದಿ ಪ್ರಸಾರವಾಗಿತ್ತು. ಇದರ ಪರಿಣಾಮ ತುರ್ತಾಗಿ ಸ್ಪಂದಿಸಿದ ತಾಲೂಕು ಆರೋಗ್ಯ ಇಲಾಖೆ 108 ಅಂಬುಲೆನ್ಸ್ ವಾಹನ ತರಿಸುವಲ್ಲಿ ಯಶಸ್ವಿಯಾಗಿದೆ.
ಇದರಿಂದಾಗಿ ಬಡರೈತ ಕೂಲಿಕಾರ್ಮಿಕರು ನಿಟ್ಟುಸಿರು ಬಿಟ್ಟಿದ್ದಾರೆ.
