
-
Hosanagara| ಡಾ.ಪುನೀತ್ ರಾಜಕುಮಾರ್ ವೃತ್ತವನ್ನು ಸುಂದರವಾಗಿ ರೂಪಿಸಿ | ಹೆದ್ದಾರಿ ಗುತ್ತಿಗೆದಾರರಿಗೆ ಶಾಸಕ ಬೇಳೂರು ಸೂಚನೆ
ಹೊಸನಗರ: ಪಟ್ಟಣದ ಕೆಇಬಿ ಸರ್ಕಲ್ ನ್ನು ಇನ್ಮುಂದೆ ಡಾ.ಪುನೀತ್ ರಾಜಕುಮಾರ್ ವೃತ್ತ ಎಂದು ಶಾಸಕ ಬೇಳೂರು ಗೋಪಾಲಕೃಷ್ಣ ಘೋಷಿಸಿದ್ದರು. ಅದರ ಬೆನ್ನಲ್ಲೇ ಮಂಗಳವಾರ ಸರ್ಕಲ್ ಗೆ ಭೇಟಿ ನೀಡಿ ಸ್ಥಳ ಪರಿಶೀಲಿಸಿದರು. ಈ ವೇಳೆ ಹೆದ್ದಾರಿ ಕಾಮಗಾರಿ ನಿರ್ವಹಿಸುತ್ತಿರುವ ಗುತ್ತಿಗೆದಾರ ನ್ಯಾಷನಲ್ ಶರೀಫ್ ರಿಗೆ ಡಾ.ಪುನೀತ್ ರಾಜಕುಮಾರ್ ವೃತ್ತವನ್ನು ಹೆದ್ದಾರಿಗೆ ಅಡಚಣೆ ಆಗದಂತೆ ಸುಂದರವಾಗಿ ರೂಪಿಸಿಕೊಡಲು ಸೂಚಿಸಿದರು.
ಈ ವೇಳೆ ವೃತ್ತದ ವಿನ್ಯಾಸದ ಬಗ್ಗೆ ಡಾ.ಪುನೀತ್ ರಾಜಕುಮಾರ್ ಸಂಘದ ಪ್ರಶಾಂತ್ ಮತ್ತು ಸ್ಥಳೀಯರೊಂದಿಗೆ ಚರ್ಚಿಸಿದರು.
ಪ್ರಮುಖರಾದ ದುಮ್ಮ ವಿನಯ ಕುಮಾರ್, ಬಾವಿಕಟ್ಟೆ ಸತೀಶ್, ಅಶ್ವಿನಿ ಕುಮಾರ್, ಎರಗಿ ಉಮೇಶ್, ಮಹಾಬಲರಾವ್, ಹೆಬೈಲ್ ಗಣೇಶ, ಗಣೇಶ ಮಂಕಿ, ಅರವಿಂದ, ಶಶಿ ಭಂಡಾರಿ. ಸದಾಶಿವ ಶ್ರೇಷ್ಠಿ, ಶಾಸಕರ ಆಪ್ತ ಸಹಾಯಕ ಸಣ್ಣಕ್ಕಿ ಮಂಜು ಉಪಸ್ಥಿತರಿದ್ದರು.
