
ಗ್ರಾಮೀಣ ಪತ್ರಕರ್ತರ ಮಹತ್ವ ಇಡೀ ರಾಜ್ಯಕ್ಕೆ ಪಸರಿಸಿದೆ | ಶಾಸಕ ಗೋಪಾಲಕೃಷ್ಣ ಬೇಳೂರು ಮೆಚ್ಚುಗೆ |
ನಾಡಿಗೆ ಬೆಳಕು ನೀಡಿದ ನಗರ ಹೋಬಳಿಯ ಪ್ರವಾಸೋದ್ಯಮ ಅಭಿವೃದ್ಧಿಗೆ ಯತ್ನ | ಸಚಿವ ಹೆಚ್.ಕೆ.ಪಾಟಿಲ್ ಭೇಟಿಗೆ ಮನವಿ : ಶಾಸಕ ಆರಗ ಜ್ಞಾನೇಂದ್ರ |ಶಿಮುಲ್ ಅಧ್ಯಕ್ಷ ವಿದ್ಯಾಧರ್, ಪತ್ರಕರ್ತ ನಾಗೇಶ್ ನಾಯ್ಕ್ ಗೆ ಗೌರವ ಪುರಸ್ಕಾರ|
ನಿಟ್ಟೂರಿನಲ್ಲಿ ಯಶಸ್ವಿ ಪತ್ರಿಕಾ ದಿನಾಚರಣೆ, ವಿವಿಧ ಕ್ಷೇತ್ರದ 40 ಮಹನೀಯರಿಗೆ ಸನ್ಮಾನ ಪುರಸ್ಕಾರ|
ಹೊಸನಗರ: ನಾಡಿಗೆ ಬೆಳಕು ನೀಡಿದ ನಗರ ಹೋಬಳಿಯಲ್ಲಿ ಅಭಿವೃದ್ಧಿಗೆ ಅರಣ್ಯ ಸಮಸ್ಯೆ ಇದೆ. ಇಕೋ ಟೂರಿಸಂ ಅಭಿವೃದ್ಧಿಗೆ ಒತ್ತು ನೀಡಬೇಕಿದೆ ಎಂದು ಮಾಜಿ ಗೃಹಸಚಿವ ಶಾಸಕ ಆರಗ ಜ್ಞಾನೇಂದ್ರ ಹೇಳಿದರು.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಹೊಸನಗರ ತಾಲೂಕು ಘಟಕ, ನಿಟ್ಟೂರು ಸರ್ಕಾರಿ ಪದವಿ ಪೂರ್ವ ಕಾಲೇಜು ಸಭಾಂಗಣದಲ್ಲಿ ಆಯೋಜಿಸಲಾದ ಪತ್ರಿಕಾ ದಿನಾಚರಣೆ, ಸಾಧಕರಿಗೆ ಸನ್ಮಾನ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿದರು.
ನಗರ ಹೋಬಳಿಯಲ್ಲಿ ಬಿದನೂರು ಕೋಟೆ, ಚಕ್ರಾ ಫಾಲ್ಸ್, ದೇವಗಂಗೆ ಕೊಳ, ಚಕ್ರಾ ಸಾವೇಹಕ್ಲು ಡ್ಯಾಂ, ವಾರಾಹಿ ತಾಣ, ಹುಲಿಕಲ್ ಪ್ರದೇಶ, ಕೊಡಚಾದ್ರಿ ಸೇರಿದಂತೆ ಪ್ರವಾಸೋಧ್ಯಮಕ್ಕೆ ಹೇಳಿ ಮಾಡಿಸಿದ ಅಪೂರ್ವ ತಾಣವಿದೆ. ಪ್ರವಾಸೋದ್ಯಮ ಅಭಿವೃದ್ಧಿಯಾದರೆ ಈಭಾಗದ ಜನರ ಬದುಕು ಸುಧಾರಿಸುತ್ತದೆ ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ಶಾಸಕ ಬೇಳೂರು ಗೋಪಾಲಕೃಷ್ಣ, ಗ್ರಾಮೀಣ ಪ್ರದೇಶದ ಹತ್ತು ಹಲವು ಸಮಸ್ಯೆಗಳನ್ನು ಎತ್ತಿ ಹಿಡಿಯುವ ಮೂಲಕ ರಾಜಕಾರಣಿಗಳನ್ನು ಎಚ್ಚರಿಸುವ ಕೆಲಸದಲ್ಲಿ ಗ್ರಾಮೀಣ ಪತ್ರಕರ್ತರ ಪಾತ್ರ ಮಹತ್ವದ್ದಾಗಿದೆ ಎಂದರು.
ಪತ್ರಕರ್ತರು ಸಮಾಜದ ಕೈಗನ್ನಡಿಯಾಗಬೇಕು. ಪರ, ವಿರೋಧ ಎರಡನ್ನು ಸಮಾನವಾಗಿ ಸ್ವೀಕರಿಸುವ ಮೂಲಕ ಊರಿನ ಮೂಲಭೂತ ಸೌಲಭ್ಯಗಳ ಬಗ್ಗೆ ಗಮನಸೆಳೆಯುವ ಕೆಲಸ ಮಾಡುವುದರೊಂದಿಗೆ ರಾಜಕಾರಣಿಗಳನ್ನು ಎಚ್ಚರಿಸುವ ಕಾರ್ಯದಲ್ಲಿ ಗ್ರಾಮೀಣ ಪ್ರದೇಶದ ಪತ್ರಕರ್ತರ ಕಾರ್ಯವನ್ನು ಪ್ರಶಂಸಿದರು. ಅಲ್ಲದೇ ತಾಲೂಕಿನ ಕಟ್ಟಕಡೆಯ ಗ್ರಾಮ ನಿಟ್ಟೂರಿನಲ್ಲಿ ಪತ್ರಿಕಾ ದಿನಾಚರಣೆ ಹಮ್ಮಿಕೊಂಡಿರುವುದು ಉತ್ತಮ ಎಂದರು.
ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ರವಿ ಬಿದನೂರು ಆಧ್ಯಕ್ಷತೆ ವಹಿಸಿದ್ದು, ನಗರ ಹೋಬಳಿಯ ಜ್ವಲಂತ ಸಮಸ್ಯೆ, ನಾಡಿಗೆ ಬೆಳಕುಕೊಟ್ಟರು ಕೂಡ ಆಗುತ್ತಿರುವ ನಿರ್ಲಕ್ಷದ ಬಗ್ಗೆ ಶಾಸಕಧ್ವಯರ ಗಮನ ಸೆಳೆದರು.
ಇದೇ ಸಂದರ್ಭದಲ್ಲಿ ಉದಯವಾಣಿ ವರದಿಗಾರ ನಾಗೇಶ್ ಎಸ್.ನಾಯಕ್, ಶಿಮುಲ್ ಅಧ್ಯಕ್ಷ ವಿದ್ಯಾಧರ್ ರನ್ನು ಸನ್ಮಾನಿಸಿ ಗೌರವಿಸಲಾಯಿತು. ದ್ವಿತೀಯ ಪಿಯುಸಿ ಮತ್ತು ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿ ತೇರ್ಗಡೆಯಾದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಪತ್ರಿಕಾ ವಿತರಕರನ್ನು ಗೌರವಿಸಲಾಯಿತು.
ಮುಖ್ಯ ಅತಿಥಿಗಳಾಗಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಸಮಿತಿ ಸದಸ್ಯ ಎನ್.ರವಿಕುಮಾರ್, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ವಿ.ಟಿ.ಅರುಣ್, ಉಪಾಧಯಕ್ಷ ವೈದ್ಯ, ಆರ್.ಎಸ್.ಹಾಲಸ್ವಾಮಿ, ಜಿಲ್ಲಾ ಕಾಂಗ್ರೆಸ್ ಯುವ ಮುಖಂಡ ಮಾಸ್ತಿಕಟ್ಟೆ ಸುಬ್ರಹ್ಮಣ್ಯ, ಉದ್ಯಮಿ ಹಾಲಗದ್ದೆ ಉಮೇಶ್, ಮಾಮ್ಕೋಸ್ ನಿರ್ದೇಶಕ ಕೆ.ವಿ.ಕೃಷ್ಣಮೂರ್ತಿ, ನಿಟ್ಟೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಚಂದ್ರಮತಿ, ಗ್ರಾಮ ಪಂಚಾಯಿತಿ ಸದಸ್ಯ ನಾಗೋಡಿ ವಿಶ್ವನಾಥ, ಪದವಿ ಪೂರ್ವ ಕಾಲೇಜ್ ಸಿಡಿಸಿ ಉಪಾಧ್ಯಕ್ಷ ಜೆ.ವಿ.ಸುಬ್ರಹ್ಮಣ್ಯ, ಪ್ರಾಂಶುಪಾಲ ಕೆ.ಎಸ್. ಗಣೇಶ, ಪ್ರೌಢಶಾಲೆಯ ಎಸ್.ಡಿ.ಎಂ.ಸಿ.ಅಧ್ಯಕ್ಷ ಗೋಪಾಲ ಕಟ್ಟಿನಹೊಳೆ, ಸಹಶಿಕ್ಷಕ ಖಮರುಲ್ಲಾ , ಶಾಸಕ ಬೇಳೂರು ಆಪ್ತ ಸಹಾಯಕ ಸಣ್ಣಕ್ಕಿ ಮಂಜು, ಶಾಸಕ ಆರಗ ಆಪ್ತ ಸಹಾಯಕರಾದ ಬಸವರಾಜ ಹೊದಲ, ರಾಜೇಶ್ ಹಿರೀಮನೆ ಇನ್ನಿತರರು ಪಾಲ್ಗೊಂಡಿದ್ದರು.
ಯಕ್ಷಪಲ್ಲವಿ ಟ್ರಸ್ಟ್ (ರಿ.) ಮಾಳಕೋಡ ಇವರಿಂದ ಯಕ್ಷಮಾಣಿಕ್ಯ ಚಿಂತನಾ ಹೆಗಡೆ, ಮಾಳಕೋಡ ಇವರ ಗಾನಸಾರಥ್ಯದಲ್ಲಿ ಕಾರ್ತಿಕ್ ಚಿಟ್ಟಾಣಿ, ಸುಧೀರ್ ಉಪ್ಪೂರು ಮುಮ್ಮೇಳದೊಂದಿಗೆ ‘ಯಕ್ಷ-ಗಾನ-ನೃತ್ಯ-ವೈಭವ’ ನಡೆಯಿತು.
ನಾಗರಕೊಡಿಗೆ ರವಿ ಸ್ವಾಗತಿಸಿದರು. ಅಶ್ವಿನಿಪಂಡಿತ್ ನಿರೂಪಿಸಿದರು.
ಪೂರ್ತಿ ಕಾರ್ಯಕ್ರಮದ ವಿವರ ಮತ್ತು ಚಿತ್ರ ಸಂಪುಟ ಕೆಳಗಿದೆ|
ಪ್ರೇಕ್ಷಕರ ಮನಗೆದ್ದ ಯಕ್ಷ ನೃತ್ಯ ಗಾನ ವೈಭವ|
ಯಕ್ಷ ಮಾಣಿಕ್ಯ ಚಿಂತನಾ ಹೆಗಡೆ ಸಾರಥ್ಯದಲ್ಲಿ ಬಡಗುತಿಟ್ಟಿನ ಪ್ರಸಿದ್ಧ ಕಲಾವಿದರಾದ ಕಾರ್ತಿಕ ಚಿಟ್ಟಾಣಿ, ಸುಧೀರ್ ಉಪ್ಪೂರು ಮುಮ್ಮೇಳದಲ್ಲಿ ಮೂಡಿಬಂದ ಯಕ್ಷ ನೃತ್ಯ ಗಾನ ವೈಭವ ಸಭಿಕರ ಮೆಚ್ಚುಗೆಗೆ ಪಾತ್ರವಾಯಿತು. ಸ್ವತಃ ಮೆಚ್ಚುಗೆ ವ್ಯಕ್ತಪಡಿಸಿದ ಶಾಸಕ ಗೋಪಾಲಕೃಷ್ಣ ಬೇಳೂರು ಕಲಾವಿದರನ್ನು ಗೌರವಿಸಿ ಅಭಿನಂದಿಸಿದರು.
ಕಾರ್ಯಕ್ರಮದ ಯಶಸ್ಸಿನ ರೂವಾರಿಗಳು:
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ತಾಲೂಕು ಘಟಕದ ಪ್ರಧಾನ ಕಾರ್ಯದರ್ಶಿ ನಾರವಿ ನಾಗರಕೊಡಿಗೆ ನಿರ್ವಹಣೆಯಲ್ಲಿ ಮೂಡಿಬಂದ ಪತ್ರಿಕಾ ದಿನಾಚರಣೆ, ಸನ್ಮಾನ, ಪುರಸ್ಕಾರ, ಮತ್ತು ಯಕ್ಷ ನೃತ್ಯ ಗಾನ ವೈಭವ, ಬೋಜನ, ಸೇರಿದಂತೆ ಇಡೀ ಕಾರ್ಯಕ್ರಮ ಅದ್ದೂರಿ, ಅರ್ಥಪೂರ್ಣ, ಸಂಭ್ರಮದೊಂದಿಗೆ ಸಂಪನ್ನಗೊಂಡಿದ್ದು ಸಾರ್ವಜನಿಕರ ಪ್ರಶಂಸೆಗೆ ಪಾತ್ರವಾಯಿತು. ಪತ್ರಕರ್ತರಾದ ಎಸ್ ಶಾಂತಾರಾಮ, ಮನು ಸುರೇಶ್, ಪತ್ರಕರ್ತೆ ನಿರೂಪಕಿ ಅಶ್ವಿನಿ ಪಂಡಿತ್, ಪತ್ರಕರ್ತಮಿತ್ರ ಪುರುಶೋತ್ತಮ ಶಾನುಭೋಗ್, ಅಚ್ಚುಕಟ್ಟಾದ ಕಾರ್ಯಕ್ರಮಕ್ಕೆ ಸಾಥ್ ನೀಡಿದರು.
ನಿಟ್ಟೂರು ಗ್ರಾಪಂ ಅಧ್ಯಕ್ಷ, ಉಪಾಧ್ಯಕ್ಷರು, ಸದಸ್ಯರು, ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳು ಸಿಬ್ಬಂದಿ ವರ್ಗ ಕಾರ್ಯಕ್ರಮಕ್ಕೆ ಕೈಜೋಡಿಸಿದರು.
ವಿಶೇಷವಾಗಿ ನಿಟ್ಟೂರು ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಕೆ.ಎಸ್.ಗಣೇಶ್ ವಿಶೇಷವಾಗಿ ತೊಡಗಿಸಿಕೊಂಡಿದ್ದು, ಕಾಲೇಜು ವಿಭಾಗದ ಪ್ರಾಚಾರ್ಯರು, ಆಡಳಿತ ಮಂಡಳಿಯವರು, ಪ್ರೌಢಶಾಲಾ ವಿಭಾಗದ ಶಿಕ್ಷಕರು, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರು, ಸದಸ್ಯರು, 300 ಕ್ಕು ಹೆಚ್ಚು ಜನರಿಗೆ ರುಚಿರುಚಿಯಾಗಿ ಪಲಾವ್, ಕೇಸರಿಬಾತ್ ಮಾಡಿ ಬಳಸಿದ ಅಡುಗೆ ಸಿಬ್ಬಂದಿಗಳು, ಮತ್ತು ವಿಭಿನ್ನವಾಗಿ ಮೂಡಿ ಬಂದ ಕಾಲೇಜು ವಿದ್ಯಾರ್ಥಿನಿಯರ ಯಕ್ಷ ನೃತ್ಯ ಕಾರ್ಯಕ್ರಮದ ಯಶಸ್ಸಿಗೆ ಸಾಕ್ಷಿಯಾಯಿತು.
ಪತ್ರಕರ್ತರಾದ ರಿಪ್ಪನಪೇಟೆ ಬಸವರಾಜ್, ಚಿದಾನಂದ ಸ್ವಾಮಿ, ಪರಶುರಾಮ್, ರಫಿ ರಿಪ್ಪನಪೇಟೆ, ಸಬಾಸ್ಟಿನ್ ಮ್ಯಾಥ್ಯೂಸ್, ರಮೇಶ ಹೆಗಡೆ ಗುಂಡೂಮನೆ, ವಸಂತ ನೀಚಡಿ ಪತ್ರಿಕಾ ದಿನಾಚರಣೆಯಲ್ಲಿ ಭಾಗವಹಿಸಿ ಶಾಸಕರಾದ ಗೋಪಾಲಕೃಷ್ಣ ಬೇಳೂರು ರಿಂದ ಗೌರವಕ್ಕೆ ಪಾತ್ರರಾದರು.
ಸ್ಥಳೀಯರಾದ ನವೀನ್ ಎಸ್.ಕೆ, ನಾಗೇಂದ್ರ ಭೂಮಿಕಾ, ಅಬುಬಕರ್, ಹಂಝಾ, ಸಚ್ಚಿ ಹೊಸನಗರ, ರಾಘವೇಂದ್ರ ಉಡುಪ, ಶಾಲಾ ಕಾಲೇಜು ವಿದ್ಯಾರ್ಥಿಗಳು, ಇತರರು ವಿಶೇಷವಾಗಿ ಸಹಕರಿಸಿದರು.
ಅಶ್ವಿನಿ ಪಂಡಿತ್ ರ ಅಚ್ಚುಕಟ್ಟಾದ ನಿರೂಪಣೆ ನಾರವಿ ಸ್ವಾಗತದೊಂದಿಗೆ ಆರಂಭಗೊಂಡ ಕಾರ್ಯಕ್ರಮ ಪುರುಶೋತ್ತಮ ಶಾನುಭೋಗರ ವಂದನೆಯ ತನಕ ನಾಲ್ಕು ಗಂಟೆಗಳ ಕಾರ್ಯಕ್ರಮ, ಕೇವಲ ಪತ್ರಿಕಾ ದಿನಾಚರಣೆಯಲ್ಲ.. ಒಂದು ಹಬ್ಬದಂತೆ ಮೂಡಿ ಬಂದಿತು.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಸಮಿತಿ ಸದಸ್ಯ ಎನ್.ರವಿಕುಮಾರ್, ಜಿಲ್ಲಾ ಉಪಾಧ್ಯಕ್ಷ ವೈದ್ಯ, ಕಾರ್ಯದರ್ಶಿ ವಿ.ಟಿ.ಅರುಣ್, ಹಿರಿಯ ಪತ್ರಕರ್ತ ಆರ್.ಎಸ್.ಹಾಲಸ್ವಾಮಿ ಕಾರ್ಯಕ್ರಮದ ಸಂಘಟನೆ, ಜನರ ಪಾಲ್ಗೊಳ್ಳುವಿಕೆ, ವಿವಿಧ ಕ್ಷೇತ್ರದ 40 ಮಹನೀಯರನ್ನು ಗೌರವಿಸಿ ಪುರಸ್ಕರಿಸಿದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಅದರಲ್ಲು ವಿಶೇಷವಾಗಿ ತಾಲೂಕಿನ ಕಟ್ಟಕಡೆಯ ಗ್ರಾಮ ನಿಟ್ಟೂರಿಗೆ ಬಂದು ಇಷ್ಟೊಂದು ಅದ್ದೂರಿ, ಅರ್ಥಪೂರ್ಣವಾಗಿ ಪತ್ರಿಕಾ ದಿನಾಚರಣೆ ಆಚರಿಸಿರುವುದು ಮಾದರಿಯಾಗಿದೆ ಎಂದು ಶಾಸಕಧ್ವಯರು, ಕಾರ್ಯಕ್ರಮದಲ್ಲಿ ಪಾಲ್ಗೊಂಡ ಪ್ರತಿಯೊಬ್ಬ ಗಣ್ಯರು ಮೆಚ್ಚುಗೆ ವ್ಯಕ್ತಪಡಿಸಿದ್ದು ವಿಶೇಷವಾಗಿತ್ತು.
ಚಿತ್ರ ಸಂಪುಟ..|
















