
ಗ್ರಾಮೀಣ ಪತ್ರಕರ್ತರ ಮಹತ್ವ ಇಡೀ ರಾಜ್ಯಕ್ಕೆ ಪಸರಿಸಿದೆ | ಶಾಸಕ ಗೋಪಾಲಕೃಷ್ಣ ಬೇಳೂರು ಮೆಚ್ಚುಗೆ |
ನಾಡಿಗೆ ಬೆಳಕು ನೀಡಿದ ನಗರ ಹೋಬಳಿಯ ಪ್ರವಾಸೋದ್ಯಮ ಅಭಿವೃದ್ಧಿಗೆ ಯತ್ನ | ಸಚಿವ ಹೆಚ್.ಕೆ.ಪಾಟಿಲ್ ಭೇಟಿಗೆ ಮನವಿ : ಶಾಸಕ ಆರಗ ಜ್ಞಾನೇಂದ್ರ |ಶಿಮುಲ್ ಅಧ್ಯಕ್ಷ ವಿದ್ಯಾಧರ್, ಪತ್ರಕರ್ತ ನಾಗೇಶ್ ನಾಯ್ಕ್ ಗೆ ಗೌರವ ಪುರಸ್ಕಾರ|
ನಿಟ್ಟೂರಿನಲ್ಲಿ ಯಶಸ್ವಿ ಪತ್ರಿಕಾ ದಿನಾಚರಣೆ, ವಿವಿಧ ಕ್ಷೇತ್ರದ 40 ಮಹನೀಯರಿಗೆ ಸನ್ಮಾನ ಪುರಸ್ಕಾರ|
ಹೊಸನಗರ: ನಾಡಿಗೆ ಬೆಳಕು ನೀಡಿದ ನಗರ ಹೋಬಳಿಯಲ್ಲಿ ಅಭಿವೃದ್ಧಿಗೆ ಅರಣ್ಯ ಸಮಸ್ಯೆ ಇದೆ. ಇಕೋ ಟೂರಿಸಂ ಅಭಿವೃದ್ಧಿಗೆ ಒತ್ತು ನೀಡಬೇಕಿದೆ ಎಂದು ಮಾಜಿ ಗೃಹಸಚಿವ ಶಾಸಕ ಆರಗ ಜ್ಞಾನೇಂದ್ರ ಹೇಳಿದರು.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಹೊಸನಗರ ತಾಲೂಕು ಘಟಕ, ನಿಟ್ಟೂರು ಸರ್ಕಾರಿ ಪದವಿ ಪೂರ್ವ ಕಾಲೇಜು ಸಭಾಂಗಣದಲ್ಲಿ ಆಯೋಜಿಸಲಾದ ಪತ್ರಿಕಾ ದಿನಾಚರಣೆ, ಸಾಧಕರಿಗೆ ಸನ್ಮಾನ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿದರು.
ನಗರ ಹೋಬಳಿಯಲ್ಲಿ ಬಿದನೂರು ಕೋಟೆ, ಚಕ್ರಾ ಫಾಲ್ಸ್, ದೇವಗಂಗೆ ಕೊಳ, ಚಕ್ರಾ ಸಾವೇಹಕ್ಲು ಡ್ಯಾಂ, ವಾರಾಹಿ ತಾಣ, ಹುಲಿಕಲ್ ಪ್ರದೇಶ, ಕೊಡಚಾದ್ರಿ ಸೇರಿದಂತೆ ಪ್ರವಾಸೋಧ್ಯಮಕ್ಕೆ ಹೇಳಿ ಮಾಡಿಸಿದ ಅಪೂರ್ವ ತಾಣವಿದೆ. ಪ್ರವಾಸೋದ್ಯಮ ಅಭಿವೃದ್ಧಿಯಾದರೆ ಈಭಾಗದ ಜನರ ಬದುಕು ಸುಧಾರಿಸುತ್ತದೆ ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ಶಾಸಕ ಬೇಳೂರು ಗೋಪಾಲಕೃಷ್ಣ, ಗ್ರಾಮೀಣ ಪ್ರದೇಶದ ಹತ್ತು ಹಲವು ಸಮಸ್ಯೆಗಳನ್ನು ಎತ್ತಿ ಹಿಡಿಯುವ ಮೂಲಕ ರಾಜಕಾರಣಿಗಳನ್ನು ಎಚ್ಚರಿಸುವ ಕೆಲಸದಲ್ಲಿ ಗ್ರಾಮೀಣ ಪತ್ರಕರ್ತರ ಪಾತ್ರ ಮಹತ್ವದ್ದಾಗಿದೆ ಎಂದರು.
ಪತ್ರಕರ್ತರು ಸಮಾಜದ ಕೈಗನ್ನಡಿಯಾಗಬೇಕು. ಪರ, ವಿರೋಧ ಎರಡನ್ನು ಸಮಾನವಾಗಿ ಸ್ವೀಕರಿಸುವ ಮೂಲಕ ಊರಿನ ಮೂಲಭೂತ ಸೌಲಭ್ಯಗಳ ಬಗ್ಗೆ ಗಮನಸೆಳೆಯುವ ಕೆಲಸ ಮಾಡುವುದರೊಂದಿಗೆ ರಾಜಕಾರಣಿಗಳನ್ನು ಎಚ್ಚರಿಸುವ ಕಾರ್ಯದಲ್ಲಿ ಗ್ರಾಮೀಣ ಪ್ರದೇಶದ ಪತ್ರಕರ್ತರ ಕಾರ್ಯವನ್ನು ಪ್ರಶಂಸಿದರು. ಅಲ್ಲದೇ ತಾಲೂಕಿನ ಕಟ್ಟಕಡೆಯ ಗ್ರಾಮ ನಿಟ್ಟೂರಿನಲ್ಲಿ ಪತ್ರಿಕಾ ದಿನಾಚರಣೆ ಹಮ್ಮಿಕೊಂಡಿರುವುದು ಉತ್ತಮ ಎಂದರು.
ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ರವಿ ಬಿದನೂರು ಆಧ್ಯಕ್ಷತೆ ವಹಿಸಿದ್ದು, ನಗರ ಹೋಬಳಿಯ ಜ್ವಲಂತ ಸಮಸ್ಯೆ, ನಾಡಿಗೆ ಬೆಳಕುಕೊಟ್ಟರು ಕೂಡ ಆಗುತ್ತಿರುವ ನಿರ್ಲಕ್ಷದ ಬಗ್ಗೆ ಶಾಸಕಧ್ವಯರ ಗಮನ ಸೆಳೆದರು.
ಇದೇ ಸಂದರ್ಭದಲ್ಲಿ ಉದಯವಾಣಿ ವರದಿಗಾರ ನಾಗೇಶ್ ಎಸ್.ನಾಯಕ್, ಶಿಮುಲ್ ಅಧ್ಯಕ್ಷ ವಿದ್ಯಾಧರ್ ರನ್ನು ಸನ್ಮಾನಿಸಿ ಗೌರವಿಸಲಾಯಿತು. ದ್ವಿತೀಯ ಪಿಯುಸಿ ಮತ್ತು ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿ ತೇರ್ಗಡೆಯಾದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಪತ್ರಿಕಾ ವಿತರಕರನ್ನು ಗೌರವಿಸಲಾಯಿತು.
ಮುಖ್ಯ ಅತಿಥಿಗಳಾಗಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಸಮಿತಿ ಸದಸ್ಯ ಎನ್.ರವಿಕುಮಾರ್, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ವಿ.ಟಿ.ಅರುಣ್, ಉಪಾಧಯಕ್ಷ ವೈದ್ಯ, ಆರ್.ಎಸ್.ಹಾಲಸ್ವಾಮಿ, ಜಿಲ್ಲಾ ಕಾಂಗ್ರೆಸ್ ಯುವ ಮುಖಂಡ ಮಾಸ್ತಿಕಟ್ಟೆ ಸುಬ್ರಹ್ಮಣ್ಯ, ಉದ್ಯಮಿ ಹಾಲಗದ್ದೆ ಉಮೇಶ್, ಮಾಮ್ಕೋಸ್ ನಿರ್ದೇಶಕ ಕೆ.ವಿ.ಕೃಷ್ಣಮೂರ್ತಿ, ನಿಟ್ಟೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಚಂದ್ರಮತಿ, ಗ್ರಾಮ ಪಂಚಾಯಿತಿ ಸದಸ್ಯ ನಾಗೋಡಿ ವಿಶ್ವನಾಥ, ಪದವಿ ಪೂರ್ವ ಕಾಲೇಜ್ ಸಿಡಿಸಿ ಉಪಾಧ್ಯಕ್ಷ ಜೆ.ವಿ.ಸುಬ್ರಹ್ಮಣ್ಯ, ಪ್ರಾಂಶುಪಾಲ ಕೆ.ಎಸ್. ಗಣೇಶ, ಪ್ರೌಢಶಾಲೆಯ ಎಸ್.ಡಿ.ಎಂ.ಸಿ.ಅಧ್ಯಕ್ಷ ಗೋಪಾಲ ಕಟ್ಟಿನಹೊಳೆ, ಸಹಶಿಕ್ಷಕ ಖಮರುಲ್ಲಾ , ಶಾಸಕ ಬೇಳೂರು ಆಪ್ತ ಸಹಾಯಕ ಸಣ್ಣಕ್ಕಿ ಮಂಜು, ಶಾಸಕ ಆರಗ ಆಪ್ತ ಸಹಾಯಕರಾದ ಬಸವರಾಜ ಹೊದಲ, ರಾಜೇಶ್ ಹಿರೀಮನೆ ಇನ್ನಿತರರು ಪಾಲ್ಗೊಂಡಿದ್ದರು.
ಯಕ್ಷಪಲ್ಲವಿ ಟ್ರಸ್ಟ್ (ರಿ.) ಮಾಳಕೋಡ ಇವರಿಂದ ಯಕ್ಷಮಾಣಿಕ್ಯ ಚಿಂತನಾ ಹೆಗಡೆ, ಮಾಳಕೋಡ ಇವರ ಗಾನಸಾರಥ್ಯದಲ್ಲಿ ಕಾರ್ತಿಕ್ ಚಿಟ್ಟಾಣಿ, ಸುಧೀರ್ ಉಪ್ಪೂರು ಮುಮ್ಮೇಳದೊಂದಿಗೆ ‘ಯಕ್ಷ-ಗಾನ-ನೃತ್ಯ-ವೈಭವ’ ನಡೆಯಿತು.
ನಾಗರಕೊಡಿಗೆ ರವಿ ಸ್ವಾಗತಿಸಿದರು. ಅಶ್ವಿನಿಪಂಡಿತ್ ನಿರೂಪಿಸಿದರು.
