
ಹೊಸನಗರ: ಅಡಿಕೆ ಕಾರ್ಯಾಪಡೆಯ ಅಧ್ಯಕ್ಷರಾಗಿರುವ ಸಚಿವ ಆರಗಜ್ಞಾನೇಂದ್ರ ನಿಷ್ಕ್ರೀಯ ಅಧ್ಯಕ್ಷರಾಗಿದ್ದು ಅವರಿಂದ ಅಡಿಕೆ ಬೆಳೆಗಾರರಿಗೆ ಒಳಿತಾಗುವ ಯಾವ ಲಕ್ಷಣಗಳು ಕಂಡು ಬರುತ್ತಿಲ್ಲ. ಅವರು ತಮ್ಮ ಎಲ್ಲಾ ಹುದ್ದೆಗಳಿಗೆ ರಾಜೀನಾಮೆ ನೀಡಿ ಮನೆಯಲ್ಲಿ ಇರುವುದು ಒಳ್ಳೆಯದು ಎಂದು ಆಮ್ ಆದ್ಮಿ ಮುಖಂಡ ಕೆ. ದಿವಾಕರ್ ವ್ಯಂಗ್ಯವಾಡಿದ್ದಾರೆ.
ಶನಿವಾರ ಪಟ್ಟಣದ ಆಮ್ ಆದ್ಮಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ, ಕೇಂದ್ರ ಸರ‍್ಕಾರ ಇಂದು ಅಡಿಕೆ ಬೆಳೆಗಾರರ ನೆಮ್ಮದಿಗೆ ಕೊಳ್ಳಿ ಇಟ್ಟಿದೆ. ಭೂತಾನ್ ದೇಶದಿಂದ 17 ಸಾವಿರ ಟನ್ ಅಡಿಕೆ ಆಮದು ಮಾಡಿಕೊಳ್ಳಲು ಅವಕಾಶ ನೀಡಿ ಇಲ್ಲಿನ ಸಂಪ್ರಾದಾಯಿಕ ಅಡಿಕೆ ಬೆಳೆಗಾರರ ಭವಿಷ್ಯಕ್ಕೆ ಮಸಿ ಬಳಿದಿದೆ. ಕೇಂದ್ರದ ಈ ನಿಲುವಿನಿಂದ ಇಡೀರಾಜ್ಯದಲ್ಲಿ ಆತಂಕ ಮನೆ ಮಾಡಿದೆ.


ಆದರೆ ನಮ್ಮ ಅಡಿಕೆ ಕಾರ್ಯಪಡೆ ಅಧ್ಯಕ್ಷ, ಸಚಿವ ಆರಗಜ್ಞಾನೇಂದ್ರ ಮಾತ್ರ ಏನೂ ಆಗಿಲ್ಲ ಎಂಬ ರೀತಿಯಲ್ಲಿ ತಮ್ಮ ಎಂದಿನ ಬಾಲಿಷ ಮಾತುಗಾರಿಕೆಯನ್ನು ಮುಂದುವರೆಸಿದ್ದಾರೆ ಆರೋಪಿಸಿದರು.
ದಲ್ಲಾಳಿ ಅಡಿಕೆ ಮಂಡಿ ತೆರೆಯಲಿ:
ರೈತರ ಪರವಾಗಿ ನಿಲ್ಲಬೇಕಿದ್ದ ಕಾರ್ಯಾಪಡೆ ಅಧ್ಯಕ್ಷರು ರೈತರ ವಿರುದ್ದ ನಿಂತು ಕೇಂದ್ರದ ಪರ ಹೇಳಿಕೆ ನೀಡುತ್ತಿದ್ದಾರೆ. ರೈತರ ಮರಣಶಾಸನಕ್ಕೆ ಕೊನೆಯ ಮೊಳೆ ಕೊಡೆಯುತ್ತಿದ್ದಾರೆ. ಆರಗಜ್ಞಾನೇಂದ್ರ ಅವರ ಈ ಬೇಜವಾವ್ದಾರಿ ನಡೆಯು ಅನೇಕ ಸಂಶಯ ಮೂಡಿಸಿದೆ. ಅಡಿಕೆ ವ್ಯಾಪಾರಿಗಳ ದಲ್ಲಾಳಿಯಾಗಿ ಕೆಲಸ ಮಾಡುತ್ತಿದ್ದಾರೆ. ರಾಜ್ಯದ ರೈತರ ಹಿತಕಾಯದ ಆರಗಜ್ಞಾನೇಂದ್ರ ಸರ‍್ಕಾರದ ಹುದ್ದೆಯಲ್ಲಿ ಮುಂದುವರೆಯುದಕ್ಕಿಂತ ರಾಜೀನಾಮೆ ನೀಡಿ ಒಂದು ದಲ್ಲಾಳಿ ಮಂಡಿ ತೆರೆಯಲಿ ಎಂದು ಸುದ್ದಿಗೊಷ್ಟಿಯಲ್ಲಿ ಆಗ್ರಹಿಸಿದರು.
ಮರಳು ಅಕ್ರಮ:
ತಾಲ್ಲೂಕಿನಲ್ಲಿ ಅಕ್ರಮ ಮರಳುಗಾರಿಕೆ ನಡೆಯುತ್ತಿದೆ. ಇಲ್ಲಿನ ಪೊಲೀಸರು ಅಕ್ರಮದಂಧೆಗೆ ಶಾಮೀಲಾಗಿದ್ದಾರೆ, ಇದಕ್ಕೆ ಶಾಸಕರ ಕೃಪಾಕಟಾಕ್ಷವೂ ಇದೆ. ಗೃಹ ಸಚಿವರ ಜಿಲ್ಲೆಯಲ್ಲಿಯೇ ಅಕ್ರಮ ಮರಳುಗಾರಿಕೆ ನಡೆಯುತ್ತಿರುವುದು ರಾಜ್ಯದಲ್ಲಿ ಆಡಳಿತ ಹಾದಿ ತಪ್ಪಿದೆ ಎಂಬುದಕ್ಕೆ ಸಾಕ್ಷಿ ಆಗಿದೆ.
ಇರುವಕ್ಕಿ ಕೃಷಿ ವಿಶ್ವವಿದ್ಯಾಲಯದಲ್ಲಿ ಗುಮಾಸ್ತರ ಹುದ್ದೆಗಳ ನೇಮಕದಲ್ಲಿ ಅಕ್ರಮ ನಡೆದಿದೆ. ಸ್ಥಳೀಯರಿಗೆ ಉದ್ಯೋಗ ಅವಕಾಶ ನೀಡಬೇಕಿದ್ದ ಶಾಸಕ ಹಾಲಪ್ಪ ಅನ್ಯರ ನೇಮಕ ಮಾಡುವಲ್ಲಿ ಪ್ರಭಾವ ಬೀರಿದ್ದಾರೆ. ಈ ಬಗ್ಗೆ ಆಮ್‌ಆದ್ಮಿ ಪಾರ‍್ಟಿ ವತಿಯಿಂದ ಪಾದಯಾತ್ರೆ ಮೂಲಕ ಪ್ರತಿಭಟನೆ ನಡೆಸಲಾಗವುದುಎಂದು ತಿಳಿಸಿದರು.
ಹರತಾಳು ಹಾಲಪ್ಪರಿಗೆ ಸಹಾಯ ಮಾಡಿಕೊಡುವ ದರ್ದು ನನಗಿಲ್ಲ:
ಸಾಗರ ಕ್ಷೇತ್ರದಿಂದ ಹರತಾಳು ಹಾಲಪ್ಪರಿಗೆ ಸಹಕಾರ ನೀಡಲು ಸ್ಪರ್ಧಿಸುವ ದರ್ದು ನನಗಿಲ್ಲ. ವಕೀಲ ವೃತ್ತಿಯಲ್ಲಿ ಶ್ರೇಷ್ಠತೆ ಕಾಪಾಡಿಕೊಂಡು ಬಂದ ನನಗೆ, ಸಾಮಾಜಿಕವಾಗಿ, ರಾಜಕೀಯವಾಗಿ ಹಾಲಪ್ಪ ಸೇರಿದಂತೆ ಯಾರು ಸಮರಲ್ಲ ಎಂದು ಸ್ಪಷ್ಟಪಡಿಸಿದರು.
ಗೋಷಿಯಲ್ಲಿ ತಾಲ್ಲೂಕು ಆಮ್‌ಆದ್ಮಿ ಪಾರ್ಟಿ ಅಧ್ಯಕ್ಷ ಗಣೇಶ ಸೊಗೋಡು. ಸತೀಶಗೌಡ, ಚೇತನ್, ಶರತ್ ಇದ್ದರು.
