
ಸಿಎಂ ಸನ್ಮಾನ ಪಡೆದ ಹಳ್ಳಿ ಹುಡುಗಿ| ರಾಷ್ಟ್ರೀಯ ಮಟ್ಟದ ಕಲ್ಪಿತ ನ್ಯಾಯಾಲಯ ಸ್ಪರ್ಧೆಯಲ್ಲಿ ಉತ್ತಮ ಮಹಿಳಾ ನ್ಯಾಯವಾದಿ | ಹಾಸ್ಟೆಲ್ ನಲ್ಲಿದ್ದು ಉತ್ತಮ ಸಾಧನೆ ತೋರಿದ ಸಾಧಕಿಯನ್ನು ಸನ್ಮಾನಿಸಿದ ಸಿಎಂ | ವಿಧಾನಸೌಧದಲ್ಲಿ ಸನ್ಮಾನ ಪಡೆದ ನಗರ ಹೋಬಳಿಯ ಮಳಲಿಯ ಕಾವ್ಯ ಹೆಚ್.ಎಲ್
ಶಿವಮೊಗ್ಗ: ಸರಸ್ವತಿ ಕಾನೂನು ಕಾಲೇಜು ಚಿತ್ರದುರ್ಗದಲ್ಲಿ ಇತ್ತೀಚೆಗೆ ನಡೆದ ರಾಷ್ಟ್ರೀಯ ಮಟ್ಟದ ಕಲ್ಪಿತ ನ್ಯಾಯಾಲಯ ( Moot court competition) ಸ್ಪರ್ಧೆಯಲ್ಲಿ ಉತ್ತಮ ಮಹಿಳಾ ನ್ಯಾಯವಾದಿ ಯಾಗಿ ಕುಮಾರಿ ಕಾವ್ಯ ಹೆಚ್ ಎಲ್ ಆಯ್ಕೆಯಾಗುವ ಮೂಲಕ ಹಳ್ಳಿ ಹುಡುಗಿ ಕಾವ್ಯ ಗಮನಸೆಳೆದಿದ್ದಾಳೆ.
ಕಾವ್ಯ ಹೆಚ್ಎಲ್ ರವರು ಶಿವಮೊಗ್ಗ ಜಿಲ್ಲೆ ಹೊಸನಗರ ತಾಲೂಕಿನ ನಗರ ಹೋಬಳಿಯ ಮಳಲಿ ಗ್ರಾಮದ ಹೂಗೇಬೈಲು ನಿವಾಸಿ. ತಂದೆ ಉಮೇಶ್, ತಾಯಿ ಕಲಾವತಿ.
ಪ್ರಾಥಮಿಕ ಶಿಕ್ಷಣವನ್ನು ನೂಲಿಗ್ಗೇರಿಯಲ್ಲಿ, ಪ್ರೌಢ ಹಾಗೂ ಪದವಿ ಪೂರ್ವ ಶಿಕ್ಷಣವನ್ನು ನಗರ ಪ್ರೌಢಶಾಲೆ ಹಾಗೂ ನಗರ ಪದವಿ ಪೂರ್ವ ಕಾಲೇಜಿನಲ್ಲಿ ಮುಗಿಸಿ, ಪದವಿ ಶಿಕ್ಷಣವನ್ನು ಹೊಸನಗರದ ಕೊಡಚಾದ್ರಿ ಕಾಲೇಜಿನಲ್ಲಿ ಪಡೆದು, ಪ್ರಸ್ತುತ ಕಾನೂನು ಶಿಕ್ಷಣವನ್ನು ಸಿ.ಭೀಮಸೇನ್ ರಾವ್ ಕಾನೂನು ಕಾಲೇಜು ಶಿವಮೊಗ್ಗದಲ್ಲಿ ಪಡೆಯುತ್ತಿದ್ದಾರೆ.


ಸಿಎಂ ಸನ್ಮಾನ:
ಬಿಸಿಎಂ ಹಾಸ್ಟೆಲ್ ನಲ್ಲಿ ಓದಿಕೊಂಡೇ.. ಗಮನಾರ್ಹ ಸಾಧನೆಯನ್ನು ಮೆಚ್ಚಿ ಬೆಂಗಳೂರಿನ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ನಡೆದ 109ನೇ ಡಿ. ದೇವರಾಜ್ ಅರಸು ರವರ ಜನ್ಮದಿನದ ಕಾರ್ಯಕ್ರಮದಲ್ಲಿ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ರವರಿಂದ ಗೌರವ ಸನ್ಮಾನಕ್ಕೆ ಪಾತ್ರಳಾಗಿದ್ದಾಳೆ.
ಸಾಧಿಸುವ ಛಲ ಇದ್ದರೆ.. ಯಾವುದೇ ಸಾಧನೆ ಕಷ್ಟಸಾಧ್ಯವಲ್ಕ ಎಂಬುದಕ್ಕೆ ಸಾಕ್ಷಿಯಾಗಿರುವ ಕಾವ್ಯ.. ಕರಿಮನೆ ಗ್ರಾಪಂ ಮಾತ್ರವಲ್ಲ ತಾಲೂಕಿಗೆ ಹಿರಿಮೆ ತಂದಿದ್ದು, ಆಕೆಯ ಸಾಧನೆಗೆ ಮಳಲಿ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
