ಆನಂದಪುರದಲ್ಲಿ ಮಾಜಿ‌ಸಚಿವ ಪ್ರಮೋದ ಮದ್ವರಾಜ್ ಹುಟ್ಟುಹಬ್ಬ ಆಚರಣೆ

 ಆನಂದಪುರದಲ್ಲಿ ಮಾಜಿ‌ ಸಚಿವ ಪ್ರಮೋದ ಮದ್ವರಾಜ್ ಹುಟ್ಟುಹಬ್ಬ ಆಚರಣೆ

ಆನಂದಪುರ(ಸಾಗರ): ಪ್ರಮೋದ್ ಮಧ್ವರಾಜ್ ಮಾಜಿ ಸಚಿವರ ಹುಟ್ಟುಹಬ್ಬದ ಪ್ರಯುಕ್ತ ಹಣ್ಣು, ಪಾನೀಯ ಹಾಗೂ ಸಿಹಿತಿಂಡಿಯನ್ನು ವಿತರಿಸಲಾಯಿತು.

ರಾಷ್ಟ್ರೀಯ ಮೀನುಗಾರರ ಸಂಘ ಕರ್ನಾಟಕದ ವತಿಯಿಂದ ಪ್ರಮೋದ್ ಮಧ್ವರಾಜ್ ಮಾಜಿ ಸಚಿವರು ,ಕರ್ನಾಟಕ ಸರ್ಕಾರ ಮೀನುಗಾರಿಕೆ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರಾಗಿ ಸೇವೆ ಸಲ್ಲಿಸಿದ ಪ್ರಮೋದ್ ಮಧ್ವರಾಜ್ ರವರ 55ನೇ ಹುಟ್ಟು ಹಬ್ಬದ ಪ್ರಯುಕ್ತ ರಾಷ್ಟ್ರೀಯ ಮೀನುಗಾರರ ಸಂಘ ಕರ್ನಾಟಕ ವತಿಯಿಂದ ಆನಂದಪುರದ ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರದ ಒಳರೋಗಿಗಳಿಗೂ ಹಾಗೂ ಆನಂದಪುರದಲ್ಲಿ ಶ್ರಮಿಕ ವರ್ಗ ಹಮಾಲರಿಗೆ ಸಿಹಿ ಹಣ್ಣು ಮತ್ತು ಪಾನೀಯವನ್ನು ವಿತರಿಸಲಾಯಿತು.

 

ಈ ಸಂದರ್ಭದಲ್ಲಿ ರವಿಕುಮಾರ್ ಬಿ ಡಿ. ರಾಜ್ಯ ಪ್ರಧಾನ ಕಾರ್ಯದರ್ಶಿ ರಾಷ್ಟ್ರೀಯ ಮೀನುಗಾರರ ಸಂಘ ಕರ್ನಾಟಕ ಹಾಗೂ ಡಾಕ್ಟರ್ ಕಾಂತೇಶ್. ಡಾಕ್ಟರ್ ಸೌಮ್ಯ , ಮೀನುಗಾರ ಸಮುದಾಯದ ಪ್ರಮುಖರಾದ ಶಿವಾನಂದ ಗೇರಬೀಸ್. ಮಾಜಿ ಅಧ್ಯಕ್ಷರು ಯಡೆಹಳ್ಳಿ ಗ್ರಾಮ ಪಂಚಾಯತ್ .ಗಣಪತಿ ಸುಣ್ಣಗಾರ್ ಗಂಗಾಮತ ಸಮಾಜದ ಕಾರ್ಯದರ್ಶಿ ಆನಂದಪುರ .ಗಣಪತಿ ಯಡೆಹಳ್ಳಿ. ಮಂಜುನಾಥ್ ಜಲಾಗರ್ .ಗುಡುವಿ ಸ್ವಾಮಿ ಸತೀಶ ಗುತ್ಯಪ್ಪ. ಸುರೇಶ ಮಂಜುನಾಥ್ ಸುಣಗಾರ್ ಹಾಗೂ ಇನ್ನಿತರರು ಹಾಜರಿದ್ದರು

Exit mobile version