
ರೈಲು ಪ್ರಯಾಣಿಕರು ಮಧ್ಯರಾತ್ರಿಯಲ್ಲಿ ಹೊಸನಗರ ತಹಶೀಲ್ದಾರ್ ಗೆ ಧನ್ಯವಾದ ಸಲ್ಲಿಸಿದ್ದು ಏಕೆ ಗೊತ್ತಾ?
ಶಿವಮೊಗ್ಗ: ಶುಕ್ರವಾರ ರಾತ್ರಿ ಅರಸಾಳು ಸಮೀಪ ರೈಲು ಜಾಮ್ ನಿಂದಾಗಿ ಸಿಲುಕಿಕೊಂಡಿದ್ದ ಪ್ರಯಾಣಿಕರು ಹೊಸನಗರ ತಹಶೀಲ್ದಾರ್ ರಶ್ಮಿ ಹಾಲೇಶ್ ರಿಗೆ ಧನ್ಯವಾದ ಸಮರ್ಪಿಸಿದ್ದಾರೆ.
ಅರಸಾಳು ಸಮೀಪ ಬೆಂಗಳೂರು ಸಾಗರ ಇಂಟರ್ ಸಿಟಿ ರೈಲು ಚಲಿಸುವಾಗ ಮರ ಬಿದ್ದು, ವಿದ್ಯುತ್ ಕಂಬ ಮುರಿದು, ಕೇಬಲ್ ಹರಿದು ರೈಲಿಗೆ ಸಿಕ್ಕಿಕೊಂಡು ಜಾಮ್ ಆಗಿತ್ತು.
ಕೊನೆಗೂ ಮರ ತೆರವುಗೊಳಿಸಿ, ವಿದ್ಯುತ್ ತಂತಿ ಸರಿಪಡಿಸಿ ರೈಲು ತಾಳುಗುಪ್ಪ ಮುಟ್ಟುವ ಹೊತ್ತಿಗೆ ಮಧ್ಯರಾತ್ರಿ 1.10 ಆಗಿತ್ತು. ರಾತ್ರಿ 10 ಗಂಟೆಗೆ ತಲುಪಬೇಕಿದ್ದ ರೈಲು ಬರೋಬ್ಬರಿ 3 ಗಂಟೆ ತಡವಾಗಿ ತಲುಪಿತ್ತು.
ಪ್ರಯಾಣಿಕರ ಪರದಾಟ:
ರೈಲು ಸ್ತಬ್ಧಗೊಂಡ ನಂತರ ಏನಾಗಿದೆ ಎಂದು ಗೊತ್ತಾಗದೇ ಪಚೀತಿಗೆ ಸಿಲುಕಿದ್ದ ಪ್ರಯಾಣಿಕರು ಮನೆಗೆ ತಲುಪಲಾಗದೇ ಪರದಾಡುವಂತಾಗಿತ್ತು.
ಸ್ಪಂದಿಸಿದ ತಹಶೀಲ್ದಾರ್ ಗೆ ಧನ್ಯವಾದ:
ರಾತ್ರಿ ಸುಮಾರಿಗೆ ಅರಸಾಳು ಸೂಡೂರು ಸಮೀಪ ರೈಲು ಸ್ತಬ್ಧಗೊಂಡ ನಂತರ ಅಲ್ಲೇ ಸಿಲುಕಿದ ಪ್ರಯಾಣಿಕರಿಗೆ ಸ್ಪಂದಿಸಿದ್ದು ಹೊಸನಗರ ತಹಶೀಲ್ದಾರ್ ರಶ್ಮೀ ಹಾಲೇಶ್. ಬಸ್ಸಿನ ವ್ಯವಸ್ಥೆ ಮಾಡಿ ಪ್ರಯಾಣಿಕರಿಗೆ ಅಲ್ಲಿಂದ ತೆರಳಲು ಅವಕಾಶ ಮಾಡಿಕೊಟ್ಟರು. ಸಕಾಲಕ್ಕೆ ಸ್ಪಂದಿಸಿದ ತಹಶೀಲ್ದಾರ್ ರಶ್ಮಿಗೆ ನಾಗರಾಜ ಸೇರಿದಂತೆ ಹಲವು ಪ್ರಯಾಣಿಕರು ಧನ್ಯವಾದ ಸಲ್ಲಿಸಿದ್ದಾರೆ.
ಮಧ್ಯರಾತ್ರೀಲಿ ರೈಲು ಪ್ರಯಾಣಿಕರು ಧನ್ಯವಾದ ಹೇಳಿದ್ದು ಯಾರಿಗೆ? ವೀಡಿಯೋ ನೋಡಲು ಈ ಕೆಳಗಿನ ಲಿಂಕ್ open ಮಾಡಿ
https://youtu.be/sI7zJMUfRiQ?si=3TxDHUlENCU2ncLe