
ನಿಟ್ಟೂರು: ಶಿವಮೊಗ್ಗ ಜಿಲ್ಲಾ ಮಟ್ಟದ ಬಾಲ್ ಬ್ಯಾಡ್ಮಿಂಟನ್ (Ball badminton sports) ಸ್ಪರ್ಧೆಯಲ್ಲಿ ಹೊಸನಗರ ತಾಲೂಕಿನ ನಿಟ್ಟೂರು ಸರ್ಕಾರಿ ಕಾಲೇಜು ಬಾಲಕಿಯರ ತಂಡ ಪ್ರಥಮ ಸ್ಥಾನಗಳಿಸಿ ಗಮನಸೆಳೆದಿದೆ.
ದ್ವಿತೀಯ ಪಿಯುಸಿಯ ಸುಪ್ರಿತಾ ಎನ್.ಎಂ, ಧನುಶ್ರೀ, ರಶ್ಮಿತಾ, ಪ್ರಥಮ ಪಿಯುಸಿಯ ದೀಕ್ಷಿತಾ ಹೆಚ್.ಆರ್, ಪೃಥ್ವಿ ಎಮ್.ಸಿ, ಪ್ರಥಮ ಸ್ಥಾನ ಗಳಿಸುವ ಮೂಲಕ ಕಾಲೇಜಿನ ಕೀರ್ತಿ ಹೆಚ್ಚಿಸಿದ್ದಾರೆ.
ಫೈನಲ್ ಪಂದ್ಯಾಟದಲ್ಲಿ ಶಿವಮೊಗ್ಗ ನಗರದ ಪ್ರತಿಷ್ಠಿತ ಕಸ್ತೂರಬಾ ಕಾಲೇಜು ತಂಡದ ವಿರುದ್ಧ ಗೆಲುವು ಸಾಧಿಸಿರುವುದು ವಿಶೇಷ.


ತಂಡದ ನೇತೃತ್ವ ವಹಿಸಿದ್ದ ಆಂಗ್ಲ ಭಾಷಾ ಉಪನ್ಯಾಸಕಿ ಕಲ್ಪ ಕೆ.ಕೆ. ವಿದ್ಯಾರ್ಥಿಗಳ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಲ್ಲದೆ ನಿಟ್ಟೂರು ಕಾಲೇಜು ಸಿಬ್ಬಂದಿ ವರ್ಗ, ಗ್ರಾಮಸ್ಥರ ಅಭಿನಂದನೆಗೂ ಪಾತ್ರವಾಗಿದೆ.
