Homeತಾಲ್ಲೂಕುತೀರ್ಥಹಳ್ಳಿಪ್ರಮುಖ ಸುದ್ದಿಶಿವಮೊಗ್ಗಶಿವಮೊಗ್ಗ ಜಿಲ್ಲೆ

ಬಿದನೂರು ನಗರದಲ್ಲಿ ಯಶಸ್ವಿ ಬಂಟರ ಸಮ್ಮಿಲನ | ಯಕ್ಷಗಾನ ಕಲಾವಿದ ನಗರ ಪ್ರಕಾಶ ಶೆಟ್ಟಿ, ನಗರ ಸತೀಶ ಶೆಟ್ಟಿ, ಭಾಗವತ ನಗರ ಅಣ್ಣಪ್ಪ ಶೆಟ್ಟಿ ಯವರಿಗೆ ಗೌರವ ಸನ್ಮಾನ

ಸಂಘಟನೆಗೆ ಬಂಟ ಸಮುದಾಯ ಒಳಗೊಳ್ಳಬೇಕು : ದೇವಗಂಗೆ ಚಂದ್ರಶೇಖರ ಶೆಟ್ಟಿ


ಹೊಸನಗರ: ಸಂಘಟನೆ ಇದ್ದರೆ ಮಾತ್ರ ಅಭಿವೃದ್ಧಿ ಸಾಧ್ಯ. ಬಂಟ ಸಮುದಾಯ ಸಂಘಟನೆಗೆ ಒಳಗೊಳ್ಳಬೇಕಿದೆ ಎಂದು ನಗರ  ಬಂಟರ ಯಾನೆ ನಾಡವರ ಸಂಘದ ನೂತನ ಗೌರವಾಧ್ಯಕ್ಷ ದೇವಗಂಗೆ ಚಂದ್ರಶೇಖರ ಶೆಟ್ಟಿ ಹೇಳಿದರು.

ಮೂಡುಗೊಪ್ಪ ನಗರ ಗ್ರಾಪಂ ಸಭಾಭವನದಲ್ಲಿ ನಡೆದ ಬಂಟರ ಸಮ್ಮಿಲನ ಕಾರ್ಯಕ್ರಮದಲ್ಲಿ ಅಧಿಕಾರ ಸ್ವೀಕರಿಸಿ ಮಾತನಾಡಿದರು.

ಸಂಘ ನಡೆಸುವುದು ಸುಲಭವಲ್ಲ, ಆರ್ಥಿಕ ಕ್ರೋಡಿಕರಣದ ಜೊತೆ ಸಮುದಾಯದ ಹಿತಕ್ಕಾಗಿ ಸಮಯ ಮೀಸಲಿಡಬೇಕು. ಯುವಕರು ಹೆಚ್ಚಾಗಿ ಸಂಘಟನೆಯಲ್ಲಿ ಭಾಗಿಯಾಗಬೇಕು ಎಂದರು.

ಕಾರ್ಯಕ್ರಮ ಉದ್ಘಾಟಿಸಿದ ಹೊಸನಗರ ತಾಲೂಕು ಬಂಟರ ಯಾನೆ ನಾಡವರ ಸಂಘದ ಅಧ್ಯಕ್ಷ ದಿವಾಕರ ಶೆಟ್ಟಿ, ಇತ್ತೀಚಿನ ದಿನದಲ್ಲಿ ತಾಲೂಕಿನಾಧ್ಯಂತ ಸಂಚರಿಸಿ ಸಂಘಟನೆ ಗಟ್ಟಿ ಮಾಡಲಾಗುತ್ತಿದೆ, ರಿಪ್ಪನಪೇಟೆ, ನಿಟ್ಟೂರು, ನಗರ, ಮಾಸ್ತಿಕಟ್ಟೆ, ಬಟ್ಟೆಮಲ್ಲಪ್ಪ, ಕೊಡೂರು ಭಾಗದಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸಮುದಾಯದ ಭವನ ನಿರ್ಮಿಸಲು ಮುಂದಾಗಿದ್ದು ಬಂಧುಗಳ ಸಹಕಾರ ಅಗತ್ಯವಾಗಿದೆ ಎಂದರು.
ಉಪಾಧ್ಯಕ್ಷ ನಗರ ಚಂದ್ರಶೇಖರ ಶೆಟ್ಟಿ, ಸಂಘದ ನಡೆದು ಬಂದಿ ಹಾದಿ, ಮುಂದೆ ಆಗಬೇಕಾದ ಕಾರ್ಯಕ್ರಮಗಳ ಬಗ್ಗೆ ಪ್ರಾಸ್ತಾವಿಕವಾಗಿ ಮಾತನಾಡಿದರು.


ಇದೇ ವೇಳೆ ಯಕ್ಷಗಾನ ಕಲಾವಿದ ಪ್ರಕಾಶ ನಗರ ಜಗನ್ನಾಥ ಶೆಟ್ಟಿ, ಸತೀಶ ಶೆಟ್ಟಿ, ಭಾಗವತ ಅಣ್ಣಪ್ಪ ಶೆಟ್ಟಿ ಮುಂಡುಕೋಡು ದಂಪತಿಗಳನ್ನು ಪ್ರಶಸ್ತಿ ನೀಡಿ ಸನ್ಮಾನಿಸಿ ಗೌರವಿಸಲಾಯಿತು.

ಕು.ಇಂಪನಾ ರಿಂದ ಯಕ್ಷನೃತ್ಯ ಮತ್ತು ರಿಂಗ್ ಡ್ಯಾನ್ಸ್, ಕು.ಹಿತ ಹೇಳಿದ 100 ಜನ ಕೌರವರ ಹೆಸರಿನ ಪಠಣ, ಧನ್ಯ ಮತ್ತು ಸಂಗಡಿಗರ ನೃತ್ಯ ಮೂಡಿಬಂದಿತು.

ತಾಲೂಕು ಕಾರ್ಯದರ್ಶಿ ನಾಗರಾಜ ಶೆಟ್ಟಿ, ಗ್ರಾಪಂ ಸದಸ್ಯ ಕರುಣಾಕರ ಶೆಟ್ಟಿ,‌ ರಿಪ್ಪನ್‌ಪೇಟೆ ಅಧ್ಯಕ್ಷ ವಿಜಯಕುಮಾರ ಶೆಟ್ಟಿ, ಬಟ್ಟೆಮಲ್ಲಪ್ಪ ವಲಯ ಅಧ್ಯಕ್ಷ ನಾಗರಾಜಶೆಟ್ಟಿ, ನಗರ ವಲಯ ಘಟಕದ ಅಧ್ಯಕ್ಷ ಗೋಪಾಲಶೆಟ್ಟಿ, ಗಿರಿಜಮ್ಮ ಶಿವರಾಮ ಶೆಟ್ಟಿ, ನಿಟ್ಟೂರು ಶಿವರಾಮ ಶೆಟ್ಟಿ, ನಿಟ್ಟೂರು ಚಂದ್ರಶೇಖರ ಶೆಟ್ಟಿ, ವಕೀಲ ಮೋಹನಶೆಟ್ಟಿ, ನಗರ ಕಾರ್ಯದರ್ಶಿ ಮಂಜುನಾಥ ಶೆಟ್ಟಿ, ಕೆರೆಗದ್ದೆ ರಾಘವೇಂದ್ರ ಶೆಟ್ಟಿ, ಪ್ರದೀಪ್ ಹೆಗ್ಡೆ, ನಗರ ಪ್ರಭಾಕರ ಶೆಟ್ಟಿ, ರವಿರಾಜ ಶೆಟ್ಟಿ, ಮಧುಕರ ಶೆಟ್ಟಿ, ಶ್ರೀಧರಶೆಟ್ಟಿ, ರಘುರಾಮ ಶೆಟ್ಟಿ, ಮಾಲಾಶ್ರೀ ಶೆಟ್ಟಿ, ರಶ್ಮಿ ಶೆಟ್ಟಿ, ಸಾನಿಕ ಶೆಟ್ಟಿ ಸಮುದಾಯದ ಪ್ರತಿನಿಧಿಗಳು ಹಾಜರಿದ್ದರು.

ಸಮಾಜದಲ್ಲಿಯ ಸುದ್ದಿಗಳನ್ನು ಆರಿಸಿ ಮತ್ತೆ ಸಮಾಜಕ್ಕೆ ನೀಡುವ ಒಂದು ಸಣ್ಣ ಪ್ರಯತ್ನ.. ಆ ಕಾರ್ಯದಲ್ಲಿ ಖಚಿತತೆ, ವಿಶ್ವಾಸಾರ್ಹತೆ, ಸಮಸ್ಯೆಯ ಬಿಂಬ, ಬಿಂಬಿತ ಸಮಸ್ಯೆಗೆ ಪರಿಹಾರದ ಯತ್ನ.. ಆ ಯತ್ನದಲ್ಲಿ ದಕ್ಕಿದ ಒಂದಷ್ಟು ಯಶಸ್ಸು.. ಇದರಲ್ಲಿ‌ ನಿರಂತರತೆ ಕಾಯ್ದುಕೊಳ್ಳುವ ಆಶಯ.. ಅಷ್ಟೆ..

What's your reaction?

Related Posts

ಅಡಿಕೆ ಔಷಧಿ ಹೊಡೆಯುವ ವೇಳೆ ಮರದಿಂದ ಬಿದ್ದ ವ್ಯಕ್ತಿ ಸಾ*ವು!  ಕರಿಮನೆ ಗ್ರಾಪಂ ಕಿಳಂದೂರು‌ ಗ್ರಾಮದಲ್ಲಿ ಘಟನೆ

ಅಡಿಕೆ ಔಷಧಿ ಹೊಡೆಯುವ ವೇಳೆ ಮರದಿಂದ ಬಿದ್ದ ವ್ಯಕ್ತಿ ಸಾ*ವು!  ಕರಿಮನೆ ಗ್ರಾಪಂ ಕಿಳಂದೂರು‌…

1 of 48

Leave A Reply

Your email address will not be published. Required fields are marked *