ನಾಳೆ ಬಟ್ಟೆಮಲ್ಲಪ್ಪ ವ್ಯಾಸಮಹರ್ಷಿ ಗುರುಕುಲದಲ್ಲಿ ಗಾನಸುಧೆ | ವಿದುಷಿ ವಸುಧಾ ಶರ್ಮಾ ಮತ್ತು ಶಿಷ್ಯರಿಂದ ಸ್ವರ ಮಾಧುರ್ಯ

ಹೊಸನಗರ.ಆ.14: ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ಸೋಮವಾರ ಶ್ರೀ ವ್ಯಾಸ ಮಹರ್ಷಿ ಗುರುಕುಲ, ಬಟ್ಟೆಮಲ್ಲಪ್ಪ ಇಲ್ಲಿ ಗುರು ಶಿಷ್ಯರ ಗಾನ ಸುಧೆ ಹರಿಯಲಿದೆ.

ಶ್ರೀ ವ್ಯಾಸ ಮಹರ್ಷಿ ಗುರುಕುಲದಲ್ಲಿ ಐದು ದಿನಗಳ ತಿರಂಗ ಸಂಭ್ರಮ ಕಾರ್ಯಕ್ರಮ ಏರ್ಪಡಿಸಿದ್ದು, ನಾಳೆ ಮೂರನೇ ದಿನದ ಕಾರ್ಯಕ್ರಮದಲ್ಲಿ ನಾಡಿನ ಖ್ಯಾತ ಸಂಗೀತ ಗುರು ಹಾಗೂ ಗುರುಕುಲದ ಸಂಗೀತ ಗುರುಗಳಾದ ವಿದುಷಿ ವಸುಧಾ ಶರ್ಮಾ ಹಾಗೂ ಅವರ ಶಿಷ್ಯೆ ವಿದುಷಿ ಶ್ರೀರಂಜಿನಿ ಹಾಗೂ ಇವರುಗಳ ಶಿಷ್ಯೆ ಎದೆ ತುಂಬಿ ಹಾಡಿದೆನು ಖ್ಯಾತಿಯ ಸಾನ್ವಿ ಜಿ. ಭಟ್ಹಾ ಗೂ ತಂಡದ ಸಂಗೀತ ಸ್ವರ ಸಂಭ್ರಮ ನಡೆಯಲಿದೆ. ಮಧ್ಯಾಹ್ನ 3 ಗಂಟೆ ಯಿಂದ ಆರಂಭವಾಗಲಿರುವ ಈ ಕಾರ್ಯಕ್ರಮಕ್ಕೆ ಗುರುಕುಲ ಆಡಳಿತ ಮಂಡಳಿ ಸ್ವಾಗತಿಸಿದೆ.

Exit mobile version