
ಶಿವಮೊಗ್ಗ: ಇದು ಕರ್ನಾಟಕ ಮತ್ತು ದೇಶದ ಸಮಗ್ರ ಅಭಿವೃದ್ಧಿಗೆ ಪೂರಕ ಯೋಜನೆಗಳನ್ನು ಹೊಂದಿದ ಬಜೆಟ್ ಎಂದು ಹೇಳಿದರೆ ತಪ್ಪಾಗಲಾರದು ಎಂದು ವಿಧಾನಪರಿಷತ್ ಸದಸ್ಯ ಡಿ.ಎಸ್.ಅರುಣ್ ಹೇಳಿದರು.
ವಿಶೇಷವಾಗಿ ಮಧ್ಯಮ ವರ್ಗದವರು, ಮಹಿಳೆಯರು ಹಿಂದುಳಿದ ವರ್ಗದವರು,ಪರಿಶಿಷ್ಟ ಜಾತಿ ಪಂಗಡಗಳು ಸಮಾಜದ ಎಲ್ಲ ವರ್ಗದವರನ್ನು ಗಮನದಲ್ಲಿರಿಸಿಕೊಂಡು ವಿತ್ತಯ ಶಿಸ್ತನ್ನು ಎಲ್ಲೂ ನಿರ್ಲಕ್ಷಿಸದೆ ಲೆಕ್ಕಾಚಾರದ ನೀತಿ ಪಾಲಿಸಿದ್ದಾರೆ.
ಎರಡನೆಯ ಪೂರ್ಣ ಅವಧಿಯ ಆಯ ಪತ್ರವನ್ನು ವಿತ್ತ ಸಚಿವರು ಅಮೃತ ಕಾಲದಲ್ಲಿ ಮಂಡಿಸಿ ದೇಶದ ಗಮನ ಸೆಳೆದಿದ್ದಾರೆ.
ಕರ್ನಾಟಕದ ಬರಪೀಡಿತ ಕೇಂದ್ರ ಪ್ರದೇಶಕ್ಕೆ 5300 ಕೋಟಿ ರೂ ನೆರವು ಬಹಳ ಸ್ವಾಗತಾರ್ಹ.
ಮೂಲಸೌಕರ್ಯ ಕ್ಷೇತ್ರದಲ್ಲಿ 10 ಲಕ್ಷ ಕೋಟಿ ಬಂಡವಾಳ ಹೂಡಿಕೆಯಿಂದ ಹೆಚ್ಚಿನ ಉದ್ಯೋಗ ಸೃಷ್ಟಿಯಾಗಲಿದೆ. ರಾಜ್ಯದ ಭದ್ರಾ ಮೇಲ್ದಂಡೆ ಯೋಜನೆಗೆ ರೂ.5,300 ಕೋಟಿ ಅನುದಾನ ನೀಡಿದ್ದು, ಮನೆಮನೆಗೆ ನಳ್ಳಿ ನೀರು (ಹರ್ ಘರ್ ಜಲ್) ಯೋಜನೆಯ ವೇಗಕ್ಕೆ ಕಾರಣ ಆಗಲಿದೆ ಎಂದು ತಿಳಿಸಿದ್ದಾರೆ.


ಕೋವಿಡ್ ನಂತರವೂ ಭಾರತವು ತನ್ನ ಆರ್ಥಿಕತೆಯ ವೇಗದಿಂದಾಗಿ ಜಗತ್ತಿನ ಗಮನ ಸೆಳೆದಿದೆ. ಯುವ ಉದ್ಯಮಿಗಳು, ಕೃಷಿ ಸ್ಟಾರ್ಟಪ್‍ಗಳಿಗೆ ಒತ್ತು ಕೊಟ್ಟಿದ್ದು,
38800 ಶಿಕ್ಷಕರನ್ನು ನೇಮಿಸಿಕೊಳ್ಳಲು ಏಕವಲಯ ಮಾದರಿಯ ಶಾಲೆಗಳ ಘೋಷಣೆ ಸ್ವಾಗತಾರ್ಹ.
5G ಸೇವೆಗಳನ್ನು ಬಳಸಿಕೊಂಡು ಅಪ್ಲಿಕೇಶನ್ ಅನ್ನು ಅಭಿವೃದ್ಧಿಗೊಳಿಸಲು 100 ಲ್ಯಾಬ್ ಗಳನ್ನು ಇಂಜಿನಿಯರಿಂಗ್ ಸಂಸ್ಥೆಗಳಲ್ಲಿ ಸ್ಥಾಪಿಸಲಾಗುವುದು.
ಇದು ಮುಂದೆ ಬರುವ ಪರ್ವಕಾಲವನ್ನು ಸೂಚಿಸುವ ಬಜೆಟ್ ಎಂದು ವಿಶ್ಲೇಷಿಸಬಹುದು ಎಂದಿದ್ದಾರೆ.
