
ಅಗಲಿದ ಹಿರಿಯ ಚೇತನ ಉಳ್ಳಾಗದ್ದೆ ದೇವೇಂದ್ರಪ್ಪ ಗೌಡರಿಗೆ ತಾಲೂಕು ಒಕ್ಕಲಿಗರ ಸಂಘ ಸಂತಾಪ
ಹೊಸನಗರ: ತಾಲೂಕು ಒಕ್ಕಲಿಗರ ಸಂಘದ ನಿಕಟಪೂರ್ವ ಅಧ್ಯಕ್ಷ, ಮಾಜಿ ಮಂಡಲ ಪ್ರಧಾನ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸಿದ್ದ ಒಕ್ಕಲಿಕ ಸಮುದಾಯದ ಹಿರಿಯ ನಾಯಕ ಉಳ್ಳಾಗದ್ದೆ ದೇವೇಂದ್ರಪ್ಪ ಗೌಡರ ನಿಧನಕ್ಕೆ ತಾಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ಹಾಲಗದ್ದೆ ಉಮೇಶ್ ಸಂತಾಪ ಸೂಚಿಸಿದರು.
ಬೇಳೂರು ಮೃತರ ನಿವಾಸಕ್ಕೆ ತೆರಳಿ ಪಾರ್ಥೀವ ಶರೀರದ ಅಂತಿಮ ದರ್ಶನ ಪಡೆದ ಅವರು, ದೇವೇಂದ್ರಗೌಡರ ನಿಧನದಿಂದ ಒಕ್ಕಲಿಗ ಸಮುದಾಯಕ್ಕೆ ತುಂಬಲಾರದ ನಷ್ಟವಾಗಿದೆ. ಅವರ ಅಗಲಿಕೆ ಸಹಿಸಿಕೊಳ್ಳುವ ಶಕ್ತಿ ಕುಟುಂಬಕ್ಕೆ ದೇವರು ನೀಡಲಿ ಎಂದು ಹಾರೈಸಿದರು.
ಅವರ ಅಂತ್ಯಕ್ರಿಯೆ ಸಂದರ್ಭದಲ್ಲಿ ಊರಿನ ಪ್ರಮುಖರು, ಸಮುದಾಯದ ಪ್ರಮುಖರು ಪಾಲ್ಗೊಂಡಿದ್ದರು.











