![](https://goodmorningkarnataka.com/wp-content/uploads/2022/10/Sun-Time-electronics-hosanagara-ad.jpg)
ಹೊಸನಗರ.ಆ.20: ನಾಯಿಗಳ ದಾಳಿಗೆ ಸಿಲುಕಿ ಗ್ರೇಟ್ ಎಸ್ಕೇಪ್ ಆದ ಕಡವೆಯೊಂದು ಬಳಿಕ ಹೃದಯಾಘಾತದಿಂದ ಸಾವನಪ್ಪಿದ ಘಟನೆ ತಾಲೂಕಿನ ಬೈಸೆ ಗ್ರಾಮದಲ್ಲಿ ಶನಿವಾರ ನಡೆದಿದೆ.
ಮಧ್ಯಾಹ್ನ ನಾಯಿಗಳ ದಾಳಿಗೆ ಸಿಲುಕಿದ ಕಡವೆ ಕೊನೆಗೂ ತಪ್ಪಿಸಿಕೊಂಡಿದೆ. ಇದನ್ನು ನೋಡಿದ ಸ್ಥಳೀಯರು ಅರಣ್ಯ ಇಲಾಖೆಗೆ ಸುದ್ದಿಮುಟ್ಟಿಸಿದ್ದಾರೆ. ಕೂಡಲೇ ಅರಣ್ಯ ಸಿಬ್ಬಂದಿಗಳು ದೌಡಾಯಿಸಿದ್ದಾರೆ. ಆದರೆ ಕಾಡಿನೊಳಗೆ ಓಡಿ ಹೋಗುವ ಸಂದರ್ಭದಲ್ಲಿ ಕಡವೆ ಅಲ್ಲೇ ಬಿದ್ದು ಸಾವನಪ್ಪಿದೆ.
![](https://goodmorningkarnataka.com/wp-content/uploads/2022/11/IMG-20221121-WA0002.jpg)
![](https://goodmorningkarnataka.com/wp-content/uploads/2022/10/Sun-Time-electronics-hosanagara-ad-3.jpg)
ಬಳಿಕ ವೆಟನರಿ ವೈದ್ಯ ಡಾ.ಅವಿನಾಶ್ ಕಡವೆ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಿದ್ದು ಹೃದಯಾಘಾತದಿಂದ ಮೃತಪಟ್ಟಿರುವುದಾಗಿ ತಿಳಿದು ಬಂದಿದೆ ಎಂದು ಅರಣ್ಯಾಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಬಳಿಕ ಅರಣ್ಯ ಇಲಾಖೆಯ ನಿಯಮಾವಳಿಯಂತೆ ಮಹಜರು ನಡೆಸಿ ಕಡವೆಯ ಶವಸಂಸ್ಕಾರ ನಡೆಸಲಾಯಿತು.ಕಡವೆ ಎರಡು ವರ್ಷದ್ದಾಗಿದ್ದು 60 ಕೆಜಿ ತೂಕ ಹೊಂದಿತ್ತು ಎಂದು ಅರಣ್ಯ ಇಲಾಖೆ ಮಾಹಿತಿ ನೀಡಿದೆ.
ಕಾರ್ಯಾಚರಣೆಯಲ್ಲಿ ಹೊಸನಗರ ಎಸಿಎಫ್ ಕೆ.ಜಿ.ಪ್ರಕಾಶ್, ನಗರ ವಲಯ ಅರಣ್ಯಾಧಿಕಾರಿ ಬಿ.ಎಸ್.ಸಂಜಯ್, ಉಪವಲಯ ಅರಣ್ಯಾಧಿಕಾರಿ ಅಮೃತ್ ಸುಂಕದ್, ಅರಣ್ಯ ಸಿಬ್ಬಂದಿಗಳು, ಸ್ಥಳೀಯರು ಹಾಜರಿದ್ದರು.
![](https://goodmorningkarnataka.com/wp-content/uploads/2022/10/Sun-Time-electronics-hosanagara-ad-4.jpg)