
ಹೊಸನಗರ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಶಿವಮೊಗ್ಗ ಜಿಲ್ಲಾ ಘಟಕ ಕೊಡಮಾಡುವ ವಿಶೇಷ ಪ್ರಶಸ್ತಿಗೆ ಹೊಸನಗರ ತಾಲೂಕಿನ ಪ್ರಜಾವಾಣಿ ವರದಿಗಾರ ರವಿ ನಾಗರಕೊಡಿಗೆ ಭಾಜನರಾಗಿದ್ದಾರೆ.
ಚುಟುಕು, ಹನಿಗವನ ರಚನೆ ಮೂಲಕ ವಿದ್ಯಾರ್ಥಿ ದಿಸೆಯಲ್ಲೇ ಸಾಹಿತ್ಯ ಆಸಕ್ತಿ ಹೊಂದಿದ್ದ ನಾರವಿ ಕನ್ನಡ ಜನಾಂತರಂಗದ ಮೂಲಕ ಪತ್ರಿಕಾ ವರದಿಗಾರರಾಗಿ ಕೆಲಸ ಆರಂಭಿಸಿದರು. ಬಳಿಕ ವಿಜಯಕರ್ನಾಟಕ, ವಿಜಯವಾಣಿಯ ಬಳಿಕ ಪ್ರಸ್ತುತ ಪ್ರಜಾವಾಣಿಯ ಹೊಸನಗರ ತಾಲೂಕು ವರದಿಗಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.


ಹೊಸನಗರ ತಾಲೂಕು ನಾಗರಕೊಡಿಗೆ ನಿವಾಸಿ ದಿ.ಎಲ್.ಜಿ.ರಾಮಸ್ವಾಮಿ ರಾವ್, ರಾಧಮ್ಮ ಇವರ ಪುತ್ರರಾದ ಇವರು ಪತ್ನಿ ಆಶಾ, ಮಗ ಎಲ್.ಆರ್.ಪ್ರಮಥ ವಶಿಷ್ಠ ಜೊತೆ ಸುಖೀ ಜೀವನ ಸಾಗಿಸುತ್ತಿದ್ದಾರೆ.
ಅ.08 ರಂದು ಶಿವಮೊಗ್ಗದಲ್ಲಿ ನಡೆಯುವ ವರ್ಣರಂಜಿತ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪುರಸ್ಕಾರ ನಡೆಯಲಿದೆ.
