
ಹೊಸನಗರ: AIKI SCHOOL OF MARTIOL ARTS… ಜಿಲ್ಲಾ ಮಟ್ಟದ ಕರಾಟೆ ಸ್ಪರ್ಧೆ ಪಟ್ಟಣದ ಹೋಲಿ ರಿಡೀಮರ್ ವಿದ್ಯಾಸಣಮಸ್ಥೆಯ ಆವರಣದಲ್ಲಿ ಇತ್ತೀಚೆಗೆ ನಡೆಯಿತು.
ಶಿವಮೊಗ್ಗ.ಜಿಲ್ಲೆಯ ಹೊಸನಗರ ಸಾಗರ ತೀರ್ಥಹಳ್ಳಿ ಶಿಕಾರಿಪುರ ಸೊರಬ ಶಿರಾಳಕೊಪ್ಪ ಆನವಟ್ಟಿ ಆಗುಂಬೆ.. ಮತ್ತು ಮೈಸೂರು ಹೆಚ್.ಡಿ.ಕೋಟೆ, ಉಡುಪಿ ಜಿಲ್ಲೆಯ ಕುಂದಾಪುರ ಸೇರಿದಂತೆ ಹೊರಜಿಲ್ಲೆಯ ವಿವಿಧ ಭಾಗಗಳಿಂದ 700ಕ್ಕೂ ಹೆಚ್ಚು ವಿದ್ಯಾರ್ಥಿಗಳು ಸ್ಪರ್ಧೆ ಯಲ್ಲಿ ಬಾಗವಹಿಸಿದ್ದರು,,
ಕರಾಟೆ ಸ್ಪರ್ಧೆಯ ಮುಖ್ಯ ಆಯೋಜಕ ಹೊಸನಗರ ತಾಲೂಕಿನ ಚಿಕ್ಕಪೇಟೆ ನಗರದ.. ಸೆನ್ಸಾಯ್.. ಜೆ. ಕೆ. ರಾಘವೇಂದ್ರ, ಸಹ ಆಯೋಜಕರಾಗಿ ಸೆನ್ಸಾಯ್ ಏನ್. ಎಸ್. ಹರೀಶ್ ಕುಮಾರ್ ಕಾರ್ಯನಿರ್ವಹಿಸಿದರು.
ಹೊಸನಗರದಲ್ಲಿ ಮೊದಲಬಾರಿ ಆಯೋಜನೆ:
ಹೊಸನಗರ ತಾಲೂಕಿನಲ್ಲಿ ಇದೇ ಮೊದಲ ಬಾರಿಗೆ ಇಷ್ಟು ದೊಡ್ಡ ಮಟ್ಟದಲ್ಲಿ ಆಯೋಜಿಸಲಾಗಿದೆ ಹಾಗೂ ವಿದ್ಯಾರ್ಥಿಗಳು ಸೇರಿದಂತೆ ಒಂದು ಸಾವಿರಕ್ಕು ಹೆಚ್ಚು ಪೋಷಕರು ನೆರದಿದ್ದರು
ASMS ಮುಖ್ಯ ತರಬೇತುದಾರ, ಕೇರಳದ ಕರಾಟೆ ಮಾಸ್ಟರ್ ಸಿ.ಎ.ವಿಜಯನ್ (C. A. VIJAYAN) ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಸ್ಪರ್ಧೆ ಆಯೋಜನೆ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು.
ಜೇಸಿ ಸಂಸ್ಥೆಯ ಪ್ರಮುಖರಾದ ಬಿ ಎಸ್. ಸುರೇಶ್ ಪಾಲ್ಗೊಂಡು ಕರಾಟೆ ಇಂದಿನ ದಿನದಲ್ಲಿ ಅತ್ಯವಶ್ಯಕ. ಕರಾಟೆ ಆತ್ಮರಕ್ಷಣೆಯ ಜೊತೆಗೆ ದೈಹಿಕ ಕ್ಷಮತೆಗೆ ಸಹಕಾರಿಯಾಗಿದೆ. ಹೊಸನಗರದಲ್ಲಿ ಜಿಲ್ಲಾ ಮಟ್ಟದ ಕರಾಟೆ ಸ್ಪರ್ಧೆ ಆಯೋಜಿಸಿರುವುದು ಸ್ವಾಗತಾರ್ಹ ಎಂದರು.
ಹೋಲಿ ರೀಡಿಮರ್ ವಿದ್ಯಾ ಸಂಸ್ಥೆ ಯ ಪ್ರಾಂಶುಪಾಲರಾದ ಐರಿನ್ ಡಿಸಿಲ್ವಾ, ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕಿ ಸಿಸ್ಟರ್ ರುಫೀನಾ, ಮೈಸೂರು ಹೆಚ್.ಡಿ.ಕೋಟೆ ಕರಾಟೆ ಶಿಕ್ಷಕ ವಿ ರಾಯಪ್ಪ, ತಾಲೂಕು ದೈಹಿಕ ಪರಿವೀಕ್ಷಕ ಬಾಲಚಂದ್ರ, ಚಂದ್ರಕಂತ್ ಜೆ ಭಟ್ ಶಿವಮೊಗ್ಗ.. ಮಹಾಬಲ ಜೋಯ್ಸ್ ತೀರ್ಥಹಳ್ಳಿ, ವ್ಯಾಸ ಮಹರ್ಷಿ ಗುರುಕುಲ ಮುಖ್ಯಸ್ಥ ಮಂಜುನಾಥ್ ಬ್ಯಾಣದ.. ಸಂತೋಷ ಕುಮಾರ್ ಕೋಟ.. ಬಿ. ಜಿ. ಚಂದ್ರಮೌಳಿ ಕೋಡೂರು, ಶಿವರಾಮ್ ಹೆದ್ದಾರಿಪುರ, ಇನ್ನಿತರ ಗಣ್ಯರು ಕಾರ್ಯಕ್ರಮದಲ್ಲಿ ಬಾಗಿಯಾಗಿದ್ದರು…..