ಎಂಪಿ, ಸಚಿವ ಶಾಸಕರನ್ನು ಹಾಡಿ ಹೊಗಳಿದ ಬಿ.ಸ್ವಾಮಿರಾವ್ | ಈ ನಡುವೆ ಹರತಾಳು ಹಾಲಪ್ಪನವರೇ ಸಾಗರ ಕ್ಷೇತ್ರದ ನಮ್ಮ ಅಭ್ಯರ್ಥಿ ಎಂದು ಘೋಷಿಸಿದ ಮಾಜಿ ಶಾಸಕರು

ಹೊಸನಗರ: ಹೊಸನಗರ ಗಾಯತ್ರಿ ಮಂದಿರದಲ್ಲಿ ಬಿಜೆಪಿ ಆಯೋಜಿಸಿದ್ದ ಶ್ರೀನಾರಾಯಣಗುರು ಜಯಂತಿಯಲ್ಲಿ ಸಂಸದ ಬಿ.ವೈ.ರಾಘವೇಂದ್ರ, ಸಚಿವ ಆರಗ, ಮತ್ತು ಶಾಸಕ ಹರತಾಳು ಹಾಲಪ್ಪರನ್ನು ಮಾಜಿ ಶಾಸಕ ಬಿ.ಸ್ವಾಮಿರಾವ್ ಸೊನಲೆ ಹಾಡಿ ಹೊಗಳಿದ್ದಾರೆ.
ಲೋಕಸಭಾ ಕ್ಷೇತ್ರ, ಸಾಗರ ಮತ್ತು ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸಗಳು ನಿರಂತವಾಗಿ ನಡೆಯುತ್ತಿವೆ. ಇದಕ್ಕಿಂತ ಹೆಚ್ಚು ಅಭಿವೃದ್ಧಿ ಕೆಲಸಗಳ ನಿರೀಕ್ಷೆ ಮಾಡಲು ಸಾಧ್ಯವಿಲ್ಲ ಎಂದರು.
ನಾನು ಕೂಡ ಶಾಸಕನಾಗಿದ್ದೆ. ಆದರೆ ಈಗ ಬರುವಷ್ಟು ಅನುದಾನ ಬರುತ್ತಿರಲಿಲ್ಲ. ಈಗ ಅನುದಾನ ಹರಿದು ಬರುತ್ತಿದ್ದು ಅದನ್ನು ಸಮರ್ಪಕವಾಗಿ ಬಳಸಿಕೊಂಡು ಕ್ಷೇತ್ರದ ಅಭಿವೃದ್ಧಿಯಾಗುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಹರತಾಳು ಹಾಲಪ್ಪ ನಮ್ಮ ಅಭ್ಯರ್ಥಿ:
ಸಾಗರ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿಯಿಂದ ನಮ್ಮ ಅಭ್ಯರ್ಥಿ ಹರತಾಳು ಹಾಲಪ್ಪ. ಈ ಬಗ್ಗೆ ಪಕ್ಷ ಏನು ಹೇಳುತ್ತದೋ ಗೊತ್ತಿಲ್ಲ. ನಮ್ಮ ಅಭ್ಯರ್ಥಿ ಅವರೇ ಎಂದು ಶಾಸಕ ಹಾಲಪ್ಪ ಸಮ್ಮುಖದಲ್ಲೇ, ಬಿಜೆಪಿ ಜಿಲ್ಲಾಧ್ಯಕ್ಷ ಟಿಡಿ ಮೇಘರಾಜ ಉಪಸ್ಥಿಯಲ್ಲೇ ಮಾಜಿ ಶಾಸಕ ಬಿ.ಸ್ವಾಮಿರಾವ್ ಘೋಷಣೆ ಮಾಡಿ ಅಚ್ಚರಿ ಮೂಡಿಸಿದರು.

Exit mobile version