
ಹೊಸನಗರ.ಜು28: ಮಕ್ಕಳ ಆರೋಗ್ಯ ಸುಸ್ಥಿತಿ ಮತ್ತು ವೃದ್ಧಿಗೆ ಶುದ್ಧ ಕುಡಿಯುವ ನೀರು ಅಮೂಲ್ಯವಾಗಿದೆ ಎಂದು ಮೂಡುಗೊಪ್ಪ ನಗರ ಗ್ರಾಪಂ ಉಪಾಧ್ಯಕ್ಷೆ ಸುಮತಿ ಅರುಣದಾಸ್ ಹೇಳಿದರು.
ನಗರದ ಶತಮಾನ ಕಂಡ ಸರ್ಕಾರಿ ಬಾಲಕಿಯರ ಶಾಲೆಯಲ್ಲಿ ಶುದ್ಧ ಕುಡಿಯುವ ನೀರಿನ ಘಟಕಕ್ಕೆ ಚಾಲನೆ ನೀಡಿ, ಈ ಸೌಲಭ್ಯವನ್ನು ಸದುಪಯೋಗ ಮಾಡಿಕೊಳ್ಳುವಂತೆ ಮನವಿ ಮಾಡಿದರು.
ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಕೆ.ರಮೇಶ್, ಹೆಣ್ಣು ಮಕ್ಕಳ ಶಾಲೆಯಲ್ಲಿ ಉತ್ತಮ ಗುಣಮಟ್ಟದ ಶಿಕ್ಷಣಕ್ಕೆ ಒತ್ತು ನೀಡಲಾಗಿದ್ದು ಈ ಶೈಕ್ಷಣಿಕ ವರ್ಷ ಮಕ್ಕಳ ಸಂಖ್ಯೆ ಗಣನೀಯವಾಗಿ ಏರಿಕೆಯಾಗಿದೆ. ಕುಡಿಯುವ ನೀರಿನ ಸಮಸ್ಯೆ ಇದ್ದು ಗುತ್ತಿಗೆದಾರ ಸಿ.ವಿ.ಚಂದ್ರಶೇಖರ್ ನೆರವು ಮತ್ತು ಶಾಲಾಭಿವೃದ್ಧಿ ಸಮಿತಿ, ಶಿಕ್ಷಕರ ಸಹಕಾರದೊಂದಿಗೆ ಶುದ್ಧ ಕುಡಿಯುವ ನೀರು ಫಿಲ್ಟರ್ ವಾಟರ್‌ನ್ನು ಅಳವಡಿಸಲಾಗಿದೆ. ಸರ್ಕಾರಿ ಶಾಲೆಯ ಶೈಕ್ಷಣಿಕ ಮತ್ತು ಅದರ ಪೂರಕ ಅಭಿವೃದ್ಧಿಗೆ ಪೋಷಕರ ಸಹಕಾರ ಅತ್ಯಮೂಲ್ಯವಾಗಿದೆ ಎಂದರು.
ಮುಖ್ಯ ಶಿಕ್ಷಕಿ ಸಾಕಮ್ಮ ಜಗನ್ನಾಥ್ ಸರ್ಕಾರಿ ಶಾಲೆಯ ಶೈಕ್ಷಣಿಕ ಪ್ರಗತಿ ಬಗ್ಗೆ ಮಾತನಾಡಿದರು.
ಈ ವೇಳೆ ಶಾಲಾಭಿವೃದ್ಧಿ ಸಮಿತಿ ಉಪಾಧ್ಯಕ್ಷೆ ಶಿಲ್ಪಾ ಹೊಳ್ಳ, ಸದಸ್ಯರಾದ ಪತ್ರಕರ್ತ ನಗರ ರಾಘವೇಂದ್ರ, ಕೆ.ಟಿ.ರವಿ, ಜಯಚಂದ್ರ, ಸುನಿತಾ, ಹೇಮಾವತಿ, ಸರಿತಾ ಮಧುಕರ್, ಶೈನಾ ಸಮೀರ್, ಲಲಿತಾ ಎಂ, ಲಾರೆನ್ಸ್ ಡಯಾಸ್, ಅಬ್ದುಲ್ ಗಫರ್, ಶಿಕ್ಷಕಕಿಯರಾದ ಶಾರದಾ ಗೋಖಲೆ, ಅಂಬಿಕಾ.ಕೆ, ಚೇತನಾ.ಜಿ, ಸುರೇಖಾ.ಆರ್ ಪೋಷಕರು ಪಾಲ್ಗೊಂಡಿದ್ದರು.