
ಎಡೆಬಿಡದೆ ಒಂದೇ ಸಮನೆ ಸುರಿಯುತ್ತಿರುವ ವರ್ಷಧಾರೆ
ನಗರ ಹೋಬಳಿಯಲ್ಲಿ ನೆರೆ ಭೀತಿ | ಶಾಲಾ ಕಾಲೇಜಿನ ರಜೆ ಬಗ್ಗೆ ಇನ್ನೂ ನಿರ್ಧಾರವಾಗಿಲ್ಲ!
ಹೊಸನಗರ: ತಾಲೂಕಿನ ನಗರ ಹೋಬಳಿಯಲ್ಲಿ ವ್ಯಾಪಕ ಮಳೆಯಾಗುತ್ತಿದ್ದು ನೆರೆಭೀತಿ ಎದುರಾಗಿದೆ.
ಬೆಳಿಗ್ಗೆಯಿಂದಲೂ ಬಿಟ್ಟು ಬಿಟ್ಟು ಮಳೆಯಾಗುತ್ತಿದ್ದು, ಮಧ್ಯಾಹ್ನದ ನಂತರ ಬಿಟ್ಟುಬಿಡದೇ ಒಂದೇ ಸಮನೆ ಮಳೆ ಸುರಿಯುತ್ತಿದೆ. ರಾತ್ರಿ ಆಗುತ್ತಿದ್ದಂತೆ ಮಳೆ ಇನ್ನಷ್ಟು ಬಿರುಸುಗೊಂಡಿದೆ.


ನಗರ ಹೋಬಳಿಯ ನದಿ ಹೊಳೆಗಳಲ್ಲಿನೀರಿನ ಹರಿವು ತೀವ್ರ ಹೆಚ್ಚಾಗಿದೆ. ಸಣ್ಣಪುಟ್ಟ ಹಳ್ಳ, ತೊರೆಗಳು ತುಂಬಿ ಹರಿಯುತ್ತಿದೆ. ಮಳೆಯ ತೀವ್ರತೆಗೆ ಜನರು ಹೊರಬರದಂತ ಸ್ಥಿತಿ ನಿರ್ಮಾಣವಾಗಿದೆ.
ನಾಳೆ ರಜಾ ಕೊಡ್ತಾರಾ?
ಮಳೆ ವ್ಯಾಪಕ ವಾಗಿತ್ತಿದ್ದಂತೆ ಮಕ್ಕಳು ಪೋಷಕರು ನಾಳೆ ಶಾಲಾ ಕಾಲೇಜುಗಳಿಗೆ ರಜೆ ಕೊಡ್ತಾರಾ ಎಂಬ ಪ್ರಶ್ನೆ ಕೇಳಲಾರಂಭಿಸಿದ್ದಾರೆ.
ಒಟ್ಟಾರೆ ಮೇ.ಮೂರನೇ ವಾರದದಿಂದ ಶುರುವಾದ ಮಳೆ ಜೂನ್ ತಿಂಗಳಲ್ಲಿ ತನ್ನ ಆರ್ಭಟ ಹೆಚ್ಚಿಸಿದೆ. ಮೇ.ತಿಂಗಳಲ್ಲಿ ಮಾಡಿಕೊಳ್ಳುತ್ತಿದ್ದ ಕೃಷಿಕಾರ್ಯ ಸಿದ್ಧತೆ, ಹಳ್ಳಿಗಳ ಮಳೆಗಾಲದ ಸಿದ್ಧತೆಗೆ ಎಳ್ಳು ನೀರು ಬಿಟ್ಟ ಮಳೆರಾಯ.. ಈತನಕ ಕೂಡ ಬಿಡುವು ನೀಡಿಲ್ಲ. ಅಡಿಕೆ ತೋಟಗಳಿಗೆ ಔಷಧಿ ಸಿಂಪಡಣೆಗೂ ಅವಕಾಶ ನೀಡದೇ ರೈತರನ್ನು ಹೈರಾಣಾಗಿಸಿದೆ.
