Homeಭದ್ರಾವತಿಶಿವಮೊಗ್ಗಶಿವಮೊಗ್ಗ ಜಿಲ್ಲೆ

ಮುಳುಗುತ್ತಿದ್ದ ಜಿಂಕೆಮರಿ ಬಚಾವ್!

ಮುಳುಗುತ್ತಿದ್ದ ಜಿಂಕೆಮರಿ ಬಚಾವ್!

ಹೊಳೆಹೊನ್ನೂರು:ಸಮೀಪದ ಅಶೋಕನಗರ ಚಾನಲ್ ಬಳಿ ನೀರು ಕುಡಿಯಲು ಬಂದ ಜಿಂಕೆಯ ಮರಿಯೊಂದು ನೀರು ಪಾಲಾಗಿದ್ದು, ಶಿವಮೊಗ್ಗದ ಅಗ್ನಿಶಾಮಕದಳ ಸಾವಿನ ದಡದಿಂದ ಬಚಾವ್ ಮಾಡಿದ್ದಾರೆ.
ಭದ್ರಾವತಿ ತಾಲೂಕು ಕೈಮರದ ಅಶೋಕ ನಗರದ ಭದ್ರಾ ಚಾನೆಲ್ ಗೆ ನೀರು ಕುಡಿಯಲು ಬಂದಿದ್ದ ಜಿಂಕೆಯ ಮರಿಯೊಂದು ನೀರಿನಲ್ಲಿ ಸಿಲುಕಿಕೊಂಡಿತ್ತು. ಸ್ಥಳೀಯರು ನೋಡಿ ಶಿವಮೊಗ್ಗದ ಅಗ್ನಿಶಾಮಕದಳಕ್ಕೆ ಮಾಹಿತಿ ನೀಡಿದ್ದಾರೆ.
ಭದ್ರ ನಾಲೆಗಳಲ್ಲಿ ನದಿಯ ಒಳಹರಿವು ಹೆಚ್ಚಾಗಿದ್ದು, ಜಿಂಕೆಯೊಂದು ನೀರಿಗೆ ಸಿಲುಕಿಕೊಂಡಿರಬಹುದು ಎಂದು ಸ್ಥಳೀಯರು ತಿಳಿಸಿದ್ದಾರೆ. ಈ ಘಟನೆ ಇಂದು ಬೆಳಗ್ಗೆ ನಡೆದಿದೆ. ಈ ಕಾರ್ಯಾಚರಣೆಯಲ್ಲಿ ಶಿವಮೊಗ್ಗ ಅಗ್ನಿಶಾಮಕ ಠಾಣೆಯ Afsto- ಮುಕ್ತುಂ ಉಸೇನ್, ಪ್ರಮುಖ ಅಗ್ನಿಶಾಮಕ ಠಾಣೆಯ ಚೇತನ್ ಕುಮಾರ್, ಚಾಲಕ – ಶರತ್ ಕುಮಾರ್ .ಕೆ, ನಿರಂಜನ್, ಸಂತೋಷ್, ಜಿಲ್ಲಾ ಅಗ್ನಿಶಾಮಕ ಅಧಿಕಾರಿ – ಬಿ ಆರ್ ಅಶೋಕ್ ಕುಮಾರ್, ಚಾಲಕ ತಂತ್ರಜ್ಞ – ಗಣೇಶ ಈ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು.

ಸಮಾಜದಲ್ಲಿಯ ಸುದ್ದಿಗಳನ್ನು ಆರಿಸಿ ಮತ್ತೆ ಸಮಾಜಕ್ಕೆ ನೀಡುವ ಒಂದು ಸಣ್ಣ ಪ್ರಯತ್ನ.. ಆ ಕಾರ್ಯದಲ್ಲಿ ಖಚಿತತೆ, ವಿಶ್ವಾಸಾರ್ಹತೆ, ಸಮಸ್ಯೆಯ ಬಿಂಬ, ಬಿಂಬಿತ ಸಮಸ್ಯೆಗೆ ಪರಿಹಾರದ ಯತ್ನ.. ಆ ಯತ್ನದಲ್ಲಿ ದಕ್ಕಿದ ಒಂದಷ್ಟು ಯಶಸ್ಸು.. ಇದರಲ್ಲಿ‌ ನಿರಂತರತೆ ಕಾಯ್ದುಕೊಳ್ಳುವ ಆಶಯ.. ಅಷ್ಟೆ..

What's your reaction?

Related Posts

ಬೆಂಗಳೂರು ಸಿನಿ ಉತ್ಸವದಲ್ಲಿ ಮಲೆನಾಡಿನ ಕಲರವ | ಗಾರ್ಗಿ ಕಾರೇಹಕ್ಲು ನಿರ್ದೇಶನದ ಹಕ್ಕಿಗಾಗಿ ಸಿನಿಮಾಕ್ಕೆ ಜೂರಿ ಅವಾರ್ಡ್|

ಬೆಂಗಳೂರು ಸಿನಿ ಉತ್ಸವದಲ್ಲಿ ಮಲೆನಾಡಿನ ಕಲರವ | ಗಾರ್ಗಿ ಕಾರೇಹಕ್ಲು ನಿರ್ದೇಶನದ ಹಕ್ಕಿಗಾಗಿ…

1 of 51

Leave A Reply

Your email address will not be published. Required fields are marked *