ಹೊಸನಗರದಲ್ಲಿ ಅರ್ಥಪೂರ್ಣ ಮಹಿಳಾ ದಿನಾಚರಣೆ | ಹೊಸನಗರ ಜೆಸಿಯಿಂದ ಮಹಿಳಾ ಸಾಧಕಿಯರಿಗೆ ವಜ್ರ ಸಾಧಕಿ ಪುರಸ್ಕಾರ

ಹೊಸನಗರ: ಜೆಸಿಐ ಹೊಸನಗರ ಡೈಮಂಡ್, ಅಂತರಾಷ್ಟ್ರೀಯ ವ್ಯಕ್ತಿತ್ವ ವಿಕಸನ ಸಂಸ್ಥೆ, ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ವಿವಿಧ ಕ್ಷೇತ್ರಗಳ ಸಾಧಕರಿಗೆ ‘ವಜ್ರ ಸಾಧಕಿ’ ಪ್ರಶಸ್ತಿ ಪ್ರದಾನ ಸಮಾರಂಭ ಅರ್ಥಪೂರ್ಣವಾಗಿ ನಡೆಯಿತು.

ಹೊಸನಗರದ ಡಿಸಿಸಿ ಬ್ಯಾಂಕ್ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಹಿಳಾ ಜೆಸಿ ಸಂಯೋಜಕರಾದ  ಜೆಸಿ ಕವಿತಾ ವಿಶ್ವನಾಥ್ ಅಧ್ಯಕ್ಷತೆ ವಹಿಸಿದ್ದರು.

ವಜ್ರ ಸಾಧಕಿ ಪುರಸ್ಕೃತ ಹೊಸನಗರದ ಮಹಿಳಾ ಸಾಧಕಿಯರು:

ಶ್ರೀಮತಿ ಗುಲಾಬಿ ಮರಿಯಪ್ಪ.
ಹೊಸನಗರ ನಿವಾಸಿಯಾಗಿದ್ದು ಎರಡು ಬಾರಿ ಚುನಾವಣೆಯಲ್ಲಿ ಗೆದ್ದು ಎರಡೆರೆಡು ಬಾರಿಗೆ ಹೊಸನಗರ ಪಟ್ಟಣ ಪಂಚಾಯಿತಿಗೆ ಅಧ್ಯಕ್ಷರಾಗಿರುತ್ತಾರೆ. ಹೊಸ ಸಂತೆ ಮಾರ್ಕೆಟ್ ನಿರ್ಮಾಣ, ಪಟ್ಟಣಕ್ಕೆ ನೀರಿನ ಸರಬರಾಜಿನ ಟ್ಯಾಂಕರ್ ಹಾಗೂ ಹೊಸನಗರಕ್ಕೆ ಹೆಲಿಪ್ಯಾಡ್ ಇವರ ಅಧ್ಯಕ್ಷೀಯ ಅವಧಿಯಲ್ಲಿ ನಿರ್ಮಾಣವಾಗಿವೆ.

ಶ್ರೀಮತಿ ಸ್ವಾತಿ ರವಿ
ಹೊಸನಗರದ ಅತ್ಯಂತ ಕುಗ್ರಾಮವಾದ ಕಿರುಗುಳಿಗೆ ಯವರಾದ ಶ್ರೀಮತಿ ಸ್ವಾತಿ ರವಿ ಯವರು ಮೂರು ಮಕ್ಕಳ ತಾಯಿಯಾಗಿದ್ದು ಶಾಲೆಯ 400 ಮೀಟರ್ ಓಟದಿಂದ ಕ್ರೀಡಾ ಜೀವನ ಪ್ರಾರಂಭಿಸಿದರು ಕ್ರೀಡಾಪಟುವಾದ ಇವರ ಪತಿ ಶ್ರೀ ಕೆ.ಎಸ್ ರವಿ ಯವರ ಸಹಕಾರದಿಂದ ಸಂಸಾರದ ಜವಾಬ್ದಾರಿಯನ್ನು ನಿಭಾಯಿಸಿ 2014 ರಿಂದ ಪುನಃ ಕ್ರೀಡಾ ಜೀವನಕ್ಕೆ ಬಂದು ಮಾಸ್ಟರ್ ಅಥ್ಲೆಟಿಕ್ಸ್ ಗೆ ಪ್ರವೇಶಿಸಿ ಭಾರತಾದ್ಯಂತ ವಲ್ಲದೆ ಶ್ರೀಲಂಕಾದಲ್ಲಿ ಸಹ ಮಾಸ್ಟರ್ ಅಥ್ಲೆಟಿಕ್ ವಿಭಾಗದಲ್ಲಿ ಪಾಲ್ಗೊಂಡು ಅಂತರಾಷ್ಟ್ರೀಯ ಕ್ರೀಡಾಪಟುವಾಗಿ ಹೊಸನಗರಕ್ಕೆ ಕೀರ್ತಿ ತಂದಿರುತ್ತಾರೆ.

ಶ್ರೀಮತಿ ಗಾಯತ್ರಿ
ಹೊಸನಗರದ ವರಕೋಡು ಗ್ರಾಮದವರಾದ ಶ್ರೀಮತಿ ಗಾಯತ್ರಿ ಅವರು ಎಲ್ಲರಂತೆ ವೈವಾಹಿಕ ಜೀವನವನ್ನು ನಡೆಸುತ್ತಿರುವಾಗ ಪತಿಯ ದಿಢೀರ್ ಸಾವಿನಿಂದ ಚೇತರಿಸಿಕೊಂಡು ಸ್ವ ಉದ್ಯೋಗವನ್ನು ಪ್ರಾರಂಭಿಸಿ ಹಪ್ಪಳ,ಸೆಂಡಿಗೆ, ಉಪ್ಪಿನಕಾಯಿ ತಯಾರಿಸಿ ಮಾರುಕಟ್ಟೆಯನ್ನು ಸೃಷ್ಟಿಸಿಕೊಂಡು ಮುಂದುವರೆಯುತ್ತಿದ್ದಾರೆ. ಇವರ ಉತ್ಪನ್ನಗಳಿಗೆ ಕರ್ನಾಟಕ ಮಾತ್ರವಲ್ಲದೆ ಹೊರರಾಜ್ಯಗಳಲ್ಲೂ ಬೇಡಿಕೆ ಇದ್ದು ಎಲ್ಲರಿಗೂ ಮಾದರಿಯಾಗಿದ್ದಾರೆ.

ಶ್ರೀಮತಿ ಗೀತಾ
ಶ್ರೀ ರಾಮಪ್ಪ ಹಾಗೂ ಲಕ್ಷ್ಮಮ್ಮನವರ ಪುತ್ರಿಯಾಗಿ ಗೀತಾರವರು ಚಂದ್ರಪ್ಪ ರನ್ನು ವಿವಾಹವಾಗಿ ಇಬ್ಬರು ಪುತ್ರಿಯ ರೊಂದಿಗೆ ಸಂಸಾರ ಸಾಗಿಸುತಿದ್ದಾರೆ. ಅತ್ಯಂತ ಪ್ರಮುಖ ಹಾಗೂ ಶ್ರೇಷ್ಠ ಕೆಲಸವಾದ ಪಟ್ಟಣದ ಸ್ವಚ್ಛತೆ ಕಾಪಾಡುವುದು ಇವರ ಕಾಯಕ. ಪೌರಕಾರ್ಮಿಕರಾಗಿ ಹೊಸನಗರ ಪಟ್ಟಣದ ಸ್ವಚ್ಛತೆ ಕಾಪಾಡುತ್ತಾ ಜನ ನೆಮ್ಮದಿಯಿಂದ ಆರೋಗ್ಯದಿಂದ ಓಡಾಡುವಂತೆ ನೋಡಿಕೊಳ್ಳುತ್ತಿದ್ದಾರೆ.

ಜೆ ಸಿ ಐ ಸಂಸ್ಥೆಯು ಇವರುಗಳ ಸೇವೆ, ಸಾಧನೆಯನ್ನು ಗುರುತಿಸಿ ‘ವಜ್ರಸಾಧಕಿ’ ಪ್ರಶಸ್ತಿಯನ್ನು ನೀಡಿ ಸಮಾರಂಭದಲ್ಲಿ ಗೌರವಿಸಿತು.

ಕಾರ್ಯಕ್ರಮದಲ್ಲಿ ಜೆಸಿಐ ಹೊಸನಗರ ಡೈಮಂಡ್ ಅಧ್ಯಕ್ಷರಾದ ಜೆಸಿ ಮಧುಸೂದನ್ ನಾವಡ, ಕಾರ್ಯದರ್ಶಿ ಜೆ ಸಿ ಅನುಪ್ ಅರವಿಂದ್, ಪೂರ್ವ ಅಧ್ಯಕ್ಷರುಗಳು, ಆಡಳಿತ ಮಂಡಳಿ ಸದಸ್ಯರು ಪಾಲ್ಗೊಂಡಿದ್ದರು.

ಕಾರ್ಯಕ್ರಮದಲ್ಲಿ ವಿಶೇಷ ಅಹ್ವಾನಿತರಾಗಿ ಮಲೆನಾಡು ಸಂಜೀವಿನಿ ಒಕ್ಕೂಟದ ತಾಲೂಕು ಅಧ್ಯಕ್ಷೆ ಶ್ರೀಮತಿ ಸುನಿತಾ ಶೇಟ್ ಪಾಲ್ಗೊಂಡು, ಸ್ವಸಹಾಯ ಸಂಘಗಳಲ್ಲಿ ಸ್ವ ಉದ್ಯೋಗದ ಅವಕಾಶಗಳ ಬಗ್ಗೆ ಮಾಹಿತಿ ನೀಡಿದರು.

ಜೆಸಿ ಪೂರ್ಣಿಮಾ ಮಧುಕರ್, ಜೆಸಿ ಅರ್ಚನಾ ವಿಶ್ವೇಶ್ವರ, ಜೆಸಿ ಅಕ್ಷತಾ ಮಧುಸೂದನ್, ಜೆಸಿ ಪ್ರೀತಿ, ಜೆಸಿ ಶುಭದ ರಾಘವೇಂದ್ರ, ಜೆಸಿ ಚಿತ್ರ, ಜೆಸಿ ಅನಗ, ಜೆಸಿ ಅರ್ಚನಾ ಮತ್ತಿತರು ಪಾಲ್ಗೊಂಡಿದ್ದರು.

ಜೆಸಿ ಭವ್ಯ ಕೃಷ್ಣಮೂರ್ತಿಯವರು ನಿರೂಪಿಸಿ

Exit mobile version