
ಹೊಸನಗರ: ಹೊಸನಗರ ಗ್ರಾಮದಲ್ಲಿ ಮಕ್ಕಳ ಸಿಕ್ಕಿಬಿದ್ದು ಓಡಿ ಹೋಗಿದ್ದಾನೆ ಈತ ಸಿಕ್ಕಿದರೆ ಪೊಲೀಸರಿಗೆ ತಿಳಿಸಿ ಎಂಬ ಮಾಹಿತಿ ಸಹಿತ ವ್ಯಕ್ತಿಯೊಬ್ಬನ ಪೋಟೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು ಜನರ ಆತಂಕಕ್ಕೆ ಕಾರಣವಾಗಿದೆ.
ಈ ಬಗ್ಗೆ ಹೊಸನಗರ ಸರ್ಕಲ್ ಇನ್ಸಪೆಕ್ಟರ್ (CPI) ಸ್ಪಷ್ಟನೆ ನೀಡಿದ್ದು ಇಂತಹ ಯಾವುದೇ ಪ್ರಕರಣ ತಾಲೂಕಿನಲ್ಲಿ ನಡೆದಿಲ್ಲ ಎಂದು ತಿಳಿಸಿದ್ದಾರೆ.


ಇಂತಹ ಮಾಹಿತಿಗಳ ಸತ್ಯಾಸತ್ಯತೆ ಅರಿಯಬೇಕು. ಮಾಹಿತಿ ಅರಿಯದೆ ಬೇರೆ ವ್ಯಕ್ತಿಗಳಿಗೆ, ಜಾಲತಾಣದ ಗ್ರೂಪ್ ಗಳಿಗೆ ಫಾರ್ ವರ್ಡ್ (FORWORD) ಮಾಡುವುದು ಸರಿಯಲ್ಲ. ಇದರಿಂದ ಜನರು ಸಹಜವಾಗಿ ಆತಂಕಗೊಳ್ಳುತ್ತಾರೆ ಎಂದಿದ್ದಾರೆ.
ಸತ್ಯಾಸತ್ಯತೆ ಅರಿಯದೇ ಮಾಹಿತಿ ಹಂಚುತ್ತಿರುವ ಬಗ್ಗೆ ದೂರು ಬಂದಲ್ಲಿ ಅಂತವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದ್ದಾರೆ.
