ಹೊಸನಗರಕ್ರೈಂತಾಲ್ಲೂಕುತೀರ್ಥಹಳ್ಳಿಪ್ರಮುಖ ಸುದ್ದಿಭದ್ರಾವತಿಶಿಕಾರಿಪುರ

ಹೊಸನಗರ ಅಡಿಕೆ ಕಳ್ಳತನ ಪ್ರಕರಣ | ಮೂವರು ಆರೋಪಿಗಳನ್ನು ಬಂಧಿಸಿದ ಪಿಎಸ್ಐ ಶಿವಾನಂದ ಕೋಳಿ ನೇತೃತ್ವದ ಪೊಲೀಸ್ ತನಿಖಾ ತಂಡ| ರೂ.1.33 ಲಕ್ಷ ಮೌಲ್ಯದ ಅಡಿಕೆ ವಶ

  • ಹೊಸನಗರ ಅಡಿಕೆ ಕಳ್ಳತನ ಪ್ರಕರಣ | ಮೂವರು ಆರೋಪಿಗಳನ್ನು ಬಂಧಿಸಿದ ಪಿಎಸ್ಐ ಶಿವಾನಂದ ಕೋಳಿ ನೇತೃತ್ವದ ಪೊಲೀಸ್ ತನಿಖಾ ತಂಡ| ರೂ.1.33 ಲಕ್ಷ ಮೌಲ್ಯದ ಅಡಿಕೆ ವಶ

ಹೊಸನಗರ: ಪಟ್ಟಣದ ಸುಮೇಧಾ ವಿವಿದ್ಧೋದ್ದೇಶ ಸೌಹಾರ್ದ ಸಹಕಾರ ಸಂಘದ ಗೋದಾಮಿನಲ್ಲಿ ಸಂಗ್ರಹಿಸಿ ಇಟ್ಟಿದ್ದ 2 ಕ್ವಿಂಟಾಲ್ 72 ಕೆ. ಜಿ ಅಡಿಕೆಯನ್ನು ಕಳ್ಳತನ ಮಾಡಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ, ಪ್ರಕರಣವನ್ನ ದಾಖಲಿಸಿಕೊಂಡ ಪೊಲೀಸರು ಅಡಿಕೆ ಕಳ್ಳತನ ಮಾಡಿದ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.

ಪ್ರಕರಣದಲ್ಲಿ ಕಳುವಾದ ಅಡಿಕೆ ಮತ್ತು ಆರೋಪಿತರ ಪತ್ತೆಗಾಗಿ ಎಸ್ಪಿ ಮಿಥುನ್ ಕುಮಾರ್ ಜಿ. ಕೆ ಮತ್ತು ಹೆಚ್ಚುವರಿ ಜಿಲ್ಲಾ ರಕ್ಷಣಾಧಿಕಾರಿ ಅನಿಲ್ ಕುಮಾರ್ ಭೂಮರಡ್ಡಿಯವರ ಮಾರ್ಗದರ್ಶನದಲ್ಲಿ, ತೀರ್ಥಹಳ್ಳಿ ಡಿವೈಎಸ್ಪಿ ಗಜಾನನ ವಾಮನ ಸುತಾರ ಮತ್ತು ಸಿಪಿಐ ಗುರಣ್ಣ ಹೆಬ್ಬಾಳ ರವರ ಮೇಲ್ವಿಚಾರಣೆಯಲ್ಲಿ ಹೊಸನಗರ ಪೊಲೀಸ್ ಠಾಣೆಯ ಪಿಎಸ್ ಐ ಶಿವಾನಂದ್ ಕೋಳಿ ನೇತೃತ್ವದ, ಎಎಸ್ಐ ಸತೀಶ್ ರಾಜ್ ಮತ್ತು ಸಿಬ್ಬಂಧಿಗಳಾದ ಸಿಪಿಸಿ – ಸುನಿಲ್, ರಂಜಿತ್, ಗಂಗಪ್ಪ ಬಟೋಲಿ, ಮಹೇಶ್ ಮತ್ತು ಸಿಬ್ಬಂದಿಗಳ ತನಿಖಾ ತಂಡವನ್ನು ರಚಿಸಲಾಗಿತ್ತು.

ತನಿಖಾ ತಂಡವು ಅ.27 ರಂದು ಪ್ರಕರಣದ ಆರೋಪಿತರಾದ 1) ರವಿರಾಜ, 32 ವರ್ಷ, ಮಾವಿನಕೊಪ್ಪ ಹೊಸನಗರ, 2) ನಾಗರಾಜ, 31 ವರ್ಷ, ಹೊಸನಗರ ಟೌನ್, 3) ರಾಜೇಶ್, 40 ವರ್ಷ, ಮಾವಿನಕೊಪ್ಪ ಹೊಸನಗರ ರವರನ್ನು ದಸ್ತಗಿರಿ ಮಾಡಿ ಆರೋಪಿತರಿಂದ ಅಂದಾಜು ಮೌಲ್ಯ 1,33,000/- ರೂಗಳ 02 ಕ್ವಿಂಟಾಲ್ 72 ಕೆಜಿ ಅಡಿಕೆ ಮತ್ತು ಕೃತ್ಯಕ್ಕೆ ಬಳಸಿದ 01 ಬೈಕ್ ಅನ್ನು ವಶಪಡಿಸಿಕೊಂಡು ಆರೋಪಿತರನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ.

ಅಡಿಕೆ ಕಳ್ಳತನ ಪ್ರಕರಣದ ತನಿಖಾ ತಂಡದ ನೇತೃತ್ವ ವಹಿಸಿದ್ದ ಹೊಸನಗರ ಪಿಎಸ್ಐ ಶಿವಾನಂದ ಕೋಳಿ
ಸಮಾಜದಲ್ಲಿಯ ಸುದ್ದಿಗಳನ್ನು ಆರಿಸಿ ಮತ್ತೆ ಸಮಾಜಕ್ಕೆ ನೀಡುವ ಒಂದು ಸಣ್ಣ ಪ್ರಯತ್ನ.. ಆ ಕಾರ್ಯದಲ್ಲಿ ಖಚಿತತೆ, ವಿಶ್ವಾಸಾರ್ಹತೆ, ಸಮಸ್ಯೆಯ ಬಿಂಬ, ಬಿಂಬಿತ ಸಮಸ್ಯೆಗೆ ಪರಿಹಾರದ ಯತ್ನ.. ಆ ಯತ್ನದಲ್ಲಿ ದಕ್ಕಿದ ಒಂದಷ್ಟು ಯಶಸ್ಸು.. ಇದರಲ್ಲಿ‌ ನಿರಂತರತೆ ಕಾಯ್ದುಕೊಳ್ಳುವ ಆಶಯ.. ಅಷ್ಟೆ..

What's your reaction?

Related Posts

1 of 45

Leave A Reply

Your email address will not be published. Required fields are marked *