HOSANAGARA| ಹೊಸನಗರ ದಸರಾ ಕಾರ್ಯಕ್ರಮಕ್ಕೆ ಮೂಲೆಗದ್ದೆ ಶ್ರೀಗಳಿಗೆ ಆಹ್ವಾನ | ಈಬಾರಿ ಅದ್ದೂರಿ‌ ದಸರಾ ಆಯೋಜನೆ

ಹೊಸನಗರ: ಈಬಾರಿ ಹೊಸನಗರ ದಸರಾವನ್ನು ವಿಶೇಷ ಆಕರ್ಷಣೆಯೊಂದಿಗೆ ಅದ್ದೂರಿಯಾಗಿ ಆಚರಿಸಲು ನಿರ್ಧರಿಸಲಾಗಿದ್ದು ಕಾರ್ಯಕ್ರಮದ ಸಾನ್ನಿಧ್ಯ ವಹಿಸಲು ಮೂಲೆಗದ್ದೆ ಶ್ರೀ ಅಭಿನವ ಚನ್ನಬಸವ ಸ್ವಾಮೀಜಿಗಳಿಗೆ ಅಧಿಕೃತ ಆಹ್ವಾನ ನೀಡಲಾಯಿತು.

ಮೂಲೆಗದ್ಧ ಮಠಕ್ಕೆ ತೆರಳಿದ ದಸರಾ ಸಮಿತಿ ಅಧ್ಯಕ್ಷ ಹಾಲಗದ್ದೆ ಉಮೇಶ್, ಪಪಂ ಸದಸ್ಯ ಗುರುರಾಜ್, ಎಂ.ಗುಡ್ಡೆಕೊಪ್ಪ ಮಾಜಿ ಅಧ್ಯಕ್ಷ ಕಾಲಸಸಿ ಸತೀಶ್ ಶ್ರೀಗಳ ಆಶೀರ್ವಾದ ಪಡೆದು ಆಮಂತ್ರಣ ನೀಡಿದರು.

ಈ ಸಂದರ್ಭದಲ್ಲಿ ದಸರಾ ಆಯೋಜನೆ, ಸಿದ್ದತೆ ಬಗ್ಗೆ ಶ್ರೀಗಳೊಂದಿಗೆ ಚರ್ಚೆ ನಡೆಯಿತು. ಬಳಿಕ ಮಾತನಾಡಿದ ದಸರಾ ಸಮಿತಿ ಅಧ್ಯಕ್ಷ ಈ ಬಾರಿ ದಸರಾ ಜಾನಪದ ಶ್ರೀಮಂತಿಕೆಯೊಂದಿಗೆ ಮೇಳೈಸಲಿದೆ. ಸುಮಾರು ರೂ.6 ಲಕ್ಷ ವೆಚ್ಚವಾಗಲಿದೆ ಎಂದರು.

Exit mobile version