
ದಸರಾ ಆಚರಣೆ ಸಮಿತಿ ಅಧ್ಯಕ್ಷರಾಗಿ ದುಮ್ಮ ವಿನಯ್ ಕುಮಾರ್ ಮರು ಆಯ್ಕೆ..
ಹೊಸನಗರ: ತಾಲೂಕು ಆಡಳಿತ, ಪಟ್ಟಣ ಪಂಚಾಯತಿ, ರಾಷ್ಟ್ರೀಯ ಹಬ್ಬ ಮತ್ತು ನಾಡಹಬ್ಬ ಆಚರಣೆ ಸಮಿತಿಯ 2025-26ನೇ ಸಾಲಿನ ದಸರಾ ಆಚರಣೆ ಸಮಿತಿಯ ಅಧ್ಯಕ್ಷರಾಗಿ ದುಮ್ಮ ಡಿ.ಆರ್. ವಿನಯ್ ಕುಮಾರ್ ಮರು ಆಯ್ಕೆಯಾಗಿದ್ದಾರೆ. ಕಳೆದ ಸಾಲಿನ ದಸರಾ ಹಬ್ಬವನ್ನು ವಿವಿಧ ಸಂಘಸಂಸ್ಥೆಗಳ ಸಹಕಾರದೊಂದಿಗೆ ಹಲವು ವೈವಿಧ್ಯಮಯ ಕನ್ನಡ ನಾಡಿನ ನಾಡು, ನುಡಿ, ಸಂಸ್ಕೃತಿ ಬಿಂಬಿಸುವ ಅನೇಕ ಜನಪದ ತಂಡಗಳೊಂದಿಗೆ ಅದ್ದೂರಿಯಾಗಿ ಆಚರಿಣೆ ಮಾಡಿದ ಹಿನ್ನಲೆಯಲ್ಲಿ ಮರು ಆಯ್ಕೆಯಾಗಿದ್ದಾರೆ. ಇವರು ಪ್ರಸ್ತುತ ಪಟ್ಟಣದ ಕಳೂರು ಶ್ರೀ ರಾಮೇಶ್ವರ ಪತ್ತಿನ ಸಹಕಾರ ಸಂಘ ಹಾಗೂ ತುಂಗಾ ಅಡಿಕೆ ಸೌಹಾರ್ದ ಸಹಕಾರಿ ಸಂಸ್ಥೆಯ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ತಹಶೀಲ್ದಾರ್ ರಶ್ಮಿ ,ಪಟ್ಟಣ ಪಂಚಾಯತಿ ಅಧ್ಯಕ್ಷ ನಾಗಪ್ಪ, ಮುಖ್ಯಾಧಿಕಾರಿ ಹರೀಶ್, ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಸದಸ್ಯರಾದ ಶ್ರೀನಿವಾಸ ಕಾಮತ್, ಶ್ರೀಧರ ಉಡುಪ, ಬಿ.ಪರಮೇಶ್ವರ ರಾವ್ ಎಂ.ಗುಡ್ಡೇಕೊಪ್ಪ ಗ್ರಾಮ ಪಂಚಾಯತಿ ಅಧ್ಯಕ್ಷ ಜಿ.ಎನ್.ಪ್ರವೀಣ್, ಸದಸ್ಯ ಮಹೇಂದ್ರ ಶೇಟ್, ಉದ್ಯಮಿ ಬಾವಿಕಟ್ಟೆ ಸತೀಶ್, ಗುತ್ತಿಗೆದಾರ ನಾಸೀರ್, ಜಯನಗರ ಗೋಪಿನಾಥ್, ಬೇಕರಿ ಪ್ರವೀಣ್, ಅರಸಾಳು ಗ್ರಾಮ ಪಂಚಾಯತಿ ಸದಸ್ಯ ಉಮಾಕರ, ಶಾಸಕರ ಆಪ್ತ ಕಾರ್ಯದರ್ಶಿ ಸಣ್ಣಕ್ಕಿ ಮಂಜು ಸೇರಿದಂತೆ ಅನೇಕ ಗಣ್ಯಮಾನ್ಯರ ಸಮ್ಮುಖದಲ್ಲಿ ಅಧ್ಯಕ್ಷರ ಆಯ್ಕೆ ನಡೆಯಿತು.
ಇದೇ ವೇಳೆ ಸ್ವಾಗತ ಸಮಿತಿ, ಸಾಂಸ್ಕೃತಿಕ ಸಮಿತಿ, ಆಹಾರ ಸಮಿತಿ, ಅಲಂಕಾರ ಸಮಿತಿ, ಪೂಜಾ ಸಮಿತಿ, ಪ್ರಚಾರ ಸಮಿತಿ ಸೇರಿದಂತೆ ವಿವಿಧ ಸಮಿತಿಗಳನ್ನು ರಚಿಸಲಾಗಿದೆ
