
-
ನಗರ ವಲಯ ಅರಣ್ಯ ಇಲಾಖೆಯ ಯಶಸ್ವಿ ಕಾರ್ಯಾಚರಣೆ | ಶ್ರೀಗಂಧ ತುಂಡುಗಳ ವಶ : ನಾಲ್ವರ ಬಂಧನ
ಹೊಸನಗರ; ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿದ ನಗರ ವಲಯ ಅರಣ್ಯ ಇಲಾಖೆಯ ಸಿಬ್ಬಂದಿಗಳು ಆರ್‌ಎಫ್‌ಓ ಸಂಜಯ್ ಅವರ ಮಾರ್ಗದರ್ಶನಲ್ಲಿ ತಾಲ್ಲೂಕಿನ ಹುಂಚ ಹೋಬಳಿ ತೊಗರೆ ಗ್ರಾಮದ ಸ.ನಂ.97ರ ಅರಣ್ಯ ಪ್ರದೇಶದಲ್ಲಿ ಅಕ್ರಮವಾಗಿ ಶ್ರೀಗಂಧದ ಮರವನ್ನು ಕಡಿತಲೆ ಮಾಡಿ ಸಾಗಾಣಿಕೆಗೆ ಯತ್ನಿಸಿದ್ದ ನಾಲ್ವರು ಆರೋಪಿಗಳನ್ನು ಮಾಲು ಸಹಿತ ಬಂಧಿಸಿ ಕೃತ್ಯಕ್ಕೆ ಬಳಸಿದ್ದ ಒಂದು ಮೋಟಾರ್ ಸೈಕಲ್ ವಶಕ್ಕೆ ಪಡೆದು ಪ್ರಕರಣ ದಾಖಲಿಸಿರುವ ಘಟನೆ ನಡೆದಿದೆ.
ಆರೋಪಿಗಳಾದ ನಿವಣೆ ವಾಸಿ ಪರಮೇಶ್ವರ, ಮಾನಿ ಗ್ರಾಮದ ಎಂ.ಕೆ. ಹರೀಶ, ನಾಗರಕೊಡಿಗೆ ವಾಸಿಗಳಾದ ಚಿದಾನಂದ, ಅರುಣ್ ಕುಮಾರ ಎಂಬುವವರನ್ನು ಬಂಧಿಸಿ, ಅಂದಾಜು ರೂ 30 ಸಾವಿರ ಮೌಲ್ಯದ ಎರಡು ಕೆ.ಜಿ ಪರಿವರ್ತಿತ ಹಾಗೂ 21.690 ಕೆ.ಜಿಯಷ್ಟು ಸಿಪ್ಪೆ ಸಹಿತ ನಾಲ್ಕು ಶ್ರೀಗಂಧದ ತುಂಡುಗಳನ್ನು ವಶಕ್ಕೆ ಪಡೆದಿದ್ದಾರೆ.
ಈ ಯಶಸ್ವಿ ಕಾರ್ಯಾಚರಣೆಯಲ್ಲಿ ಸೊನಲೆ ವಿಭಾಗದ ಡಿಆರ್‌ಎಫ್‌ಓ ನರೇಂದ್ರ, ಯಡೂರು ಭಾಗದ ಪ್ರವೀಣ್, ನಗರ ಭಾಗದ ಅಮೃತ್ ಸುಂಕೋಡ್, ನಿಟ್ಟೂರು ಭಾಗದ ಸತೀಶ್, ಕಸಬಾ ಭಾಗದ ಯುವರಾಜ್, ಹಾಲೇಶ್, ಬೀಟ್ ಫಾರೆಸ್ಟರ್‌ಗಳಾದ ನಗರ ವಲಯದ ಮನೋಜ್, ಮನೋಜ್ ಕುಮಾರ್, ಯೋಗೀಶ್, ಹೊಸನಗರದ ಶಶಿಕುಮಾರ್, ಜೆಸ್ಸಿ ಹಾಗೂ ಹೊಸನಗರ ಸುಮಾ, ಚಾಲಕ ರಾಮು ಗಾಣಿಗ ಭಾಗವಹಿಸಿದ್ದರು.