ಹೊಸನಗರ ಪಿಯು ಕಾಲೇಜು ಎನ್ಎಸ್ಎಸ್ ವಿದ್ಯಾರ್ಥಿಗಳಿಂದ ಬಿದನೂರಿನಲ್ಲಿ ಸ್ವಚ್ಚತಾ ಕಾರ್ಯ | ನಿಯೋಜನಾಧಿಕಾರಿ ಕೆ.ಟಿ.ಶ್ರೀಧರ್ ನೇತೃತ್ವ |ಪ್ರಾಂಶುಪಾಲ ಸ್ವಾಮಿರಾವ್, ಉಪನ್ಯಾಸಕರ ಸಹಕಾರ

ಹೊಸನಗರ: ಪಟ್ಟಣದ ಸರ್ಕಾರಿ ಪದವಿಪೂರ್ವ ಕಾಲೇಜ್ ರಾಷ್ಷ್ರೀಯ ಸೇವಾ ಯೋಜನಾ ಘಟಕದ ವಿದ್ಯಾರ್ಥಿಗಳು ತಾಲೂಕಿನ ಬಿದನೂರು ನಗರದ ಬೀದಿಗಳಲ್ಲಿ ಸ್ವಚ್ಚತಾ ಕಾರ್ಯ ನಡೆಸಿದರು.

ಗುರುವಾರ ಬೆಳಿಗ್ಗೆಯಿಂದ ಇತಿಹಾಸ ಪ್ರಸಿದ್ಧ ಕೋಟೆಯ ಹೊರಾಂಗಣ, ಮಸೀದಿ ರಸ್ತೆ, ನಗರ ನಿಲ್ದಾಣ ಮತ್ತು ಪಂಚಾಯ್ತಿ ರಸ್ತೆಯ ಬೀದಿಗಳಲ್ಲಿ ಸ್ವಚ್ಚತಾ ಕಾರ್ಯ ನಡೆಸಿದರು.
ಎನ್ಎಸ್ಎಸ್ ಘಟಕದಲ್ಲಿ ರಚಿಸಲಾದ ಕಾವೇರಿ, ಯಮುನಾ, ಶರಾವತಿ, ಕಪಿಲಾ, ಸಿಂಧು ಸೇರಿದಂತ ವಿವಿಧ ಗುಂಪುಗಳ ಸದಸ್ಯರು ಶ್ರಮದಾನದಲ್ಲಿ ಭಾಗವಹಿಸಿದ್ದರು. ಗ್ರಾಪಂ ಮಾಜಿ ಅಧ್ಯಕ್ಷ ಕರುಣಾಕರಶೆಟ್ಟಿ ಸ್ವಚ್ಚತಾ ಕಾರ್ಯಕ್ಕೆ ವಾಹನದ ನೆರವು ನೀಡಿದರು.

ಎನ್ಎಸ್ಎಸ್ ನಿಯೋಜನಾಧಿಕಾರಿ ಕೆ.ಟಿ.ಶ್ರೀಧರ್, ಉಪನ್ಯಾಸಕರಾದ ಅಶೋಕಶೆಟ್ಟಿ ದೇವಗಂಗೆ, ಮಹಾಂತೇಶ್ ಗೌಡ, ಟೀಕೇಶ್ ಗೌಡ, ಸಂತೋಷ್ ಎನ್,ಹೊಸನಗರ, ಸೀಮಾ ಟಿ, ರೂಪಾ ಎಸ್ ಭಾಗವಹಿಸಿದ್ದರು.

Exit mobile version