
Hosanagar Crime|
-
ಪುರಪ್ಪೇಮನೆ ಶರಾವತಿ ನದಿ ತೀರದಲ್ಲಿ ಅಕ್ರಮ ಮರಳು ದಾಸ್ತಾನು | ಸಿಪಿಐ ಗುರಣ್ಣ ಎಸ್.ಹೆಬ್ಬಾಳ್, ಗಣಿ ಅಧಿಕಾರಿ ಪ್ರಿಯಾ ಜಂಟಿ ದಾಳಿ | 150 ಟನ್ ಮರಳು ವಶ
ಹೊಸನಗರ: ತಾಲೂಕಿನ ಪುರಪ್ಪೇಮನೆ ನದಿ ತೀರದಲ್ಲಿ ಅಕ್ರಮವಾಗಿ ದಾಸ್ತಾನು ಮಾಡಲಾಗಿದ್ದ 150 ಟನ್ ಮರಳನ್ನು ಪೊಲೀಸ್ ಮತ್ತು ಗಣಿ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
ಖಚಿತ ಮಾಹಿತಿ ಮೇಲೆ ಹೊಸನಗರ ಸಿಪಿಐ ಗುರಣ್ಣ ಎಸ್, ಹೆಬ್ಬಾಳ್, ಪಿಎಸ್ಐ ಶಿವಾನಂದ ವೈ.ಕೆ, ಶಿವಮೊಗ್ಗ ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿ ಪ್ರಿಯಾ ನೇತೃತ್ವದಲ್ಲಿ ಜಂಟಿ ಕಾರ್ಯಾಚರಣೆ ನಡೆಸಿ ಅಕ್ರಮ ಮರಳನ್ನು ವಶಪಡಿಸಿಕೊಳ್ಳಲಾಗಿದೆ.


ಕಾರ್ಯಾಚರಣೆಯಲ್ಲಿ ಗಂಗಪ್ಪ ಬಟೋಲಿ, ಸುನಿಲ್, ಶಿವಪುತ್ರ, ಅವಿನಾಶ ಇತರರು ಇದ್ದರು.
