![](https://goodmorningkarnataka.com/wp-content/uploads/2022/10/Sun-Time-electronics-hosanagara-ad.jpg)
-
ಮತದಾನ ಪಟ್ಟಿ ಪರಿಷ್ಕರಣೆಗೆ ಸೂಕ್ತ ಕ್ರಮ | ತಹಶೀಲ್ದಾರ್ ರಶ್ಮಿ ಹಾಲೇಶ್ ಸೂಚನೆ| ಮೂಡುಗೊಪ್ಪ, ಕಾನುಗೋಡು, ಮಾಸ್ತಿಕಟ್ಟೆ, ಹುಲಿಕಲ್ ಮತಕೇಂದ್ರಗಳಿಗೆ ತಹಶೀಲ್ದಾರ್ ಭೇಟಿ | ಮಾಸ್ತಿಕಟ್ಟೆಯಲ್ಲಿ ವರ್ಗಾವಣೆಗೊಂಡ ಕೆಪಿಸಿ ನೌಕರರ ಮಾಹಿತಿ ನೀಡಲು ಸೂಚನೆ
ಹೊಸನಗರ: ತಾಲೂಕಿನ ಹಲವು ಮತಗಟ್ಟೆಗೆ ಭೇಟಿ ನೀಡಿದ ತಹಶೀಲ್ದಾರ್ ರಶ್ಮಿ ಹಾಲೇಶ್ ಹೆಸರು ಸೇರ್ಪಡೆ ಮತ್ತು ತೆಗೆದುಹಾಕಬೇಕಾದ ಹೆಸರುಗಳ ಬಗ್ಗೆ ಕೂಡಲೇ ವರದಿ ನೀಡುವಂತೆ ಮತಗಟ್ಟೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ತಾಲೂಕಿನ ಮೂಡುಗೊಪ್ಪ, ಕಾನುಗೋಡು, ಮಾಸ್ತಿಕಟ್ಟೆ, ಹುಲಿಕಲ್ ಮತಗಟ್ಟೆಗೆ ಶನಿವಾರ ದಿಢೀರ್ ಭೇಟಿ ನೀಡಿ ಬಿಎಲ್ಒ ಹಾಜರು ಬಗ್ಗೆ ಪರಿಶೀಲಿಸಿದರು.
ಮತಪಟ್ಟಿಯನ್ನು ಪರಿಶೀಲಿಸಿದ ಅವರು ಒಂದೇ ಹೆಸರು ಎರಡು ಬಾರಿ ಸೇರ್ಪಡೆ, ಮೃತಪಟ್ಟವರು, ವರ್ಗಾವಣೆಗೊಂಡ ನೌಕರರ ಹೆಸರುಗಳ ಬಗ್ಗೆ ಪರಿಶೀಲಿಸಿ ಮಾಹಿತಿ ಕಲೆಹಾಕುವಂತೆ ಸೂಚಿಸಿದರು.
ಮಾಸ್ತಿಕಟ್ಟೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಕೆಪಿಸಿ ನೌಕರರು ಬಹುತೇಕ ಬೇರೆಡೆ ವರ್ಗಾವಣೆಗೊಂಡಿದ್ದಾರೆ. ಆದರೆ ಮತಪಟ್ಟಿಯಲ್ಲಿ ಹೆಸರು ಇದೆ. ಆದರೆ ಯಾರು ಕೂಡ ಮತದಾನದಲ್ಲಿ ಭಾಗವಹಿಸುತ್ತಿಲ್ಲ ಎಂದು ಮತಗಟ್ಟೆ ಅಧಿಕಾರಿಗಳು ತಹಶೀಲ್ದಾರ್ ಗಮನಕ್ಕೆ ತಂದರು.
ಈ ಬಗ್ಗೆ ಇಲ್ಲಿಂದ ವರ್ಗಾವಣೆಗೊಂಡ ನೌಕರರ ಸವಿವರ ಮಾಹಿತಿ ನೀಡುವಂತೆ ಕೆಪಿಸಿ ಅಧಿಕಾರಿಗಳಿಗೆ ಸೂಚಿಸಿದರು.
ಅರ್ಹರು ಮತದಾನಪಟ್ಟಿಯಿಂದ ವಂಚಿತರಾಗಬಾರದು. ಆದರೆ ಮತಗಟ್ಟೆ ವ್ಯಾಪ್ತಿಯಲ್ಲಿ ವಾಸವಿರದ ಮತ್ತು ಮೃತಪಟ್ಟವರ ಮಾಹಿತಿ ಪಡೆದು ತುರ್ತಾಗಿ ವರದಿ ನೀಡಲು ಸೂಚಿಸಿದರು.
- ಉಪತಹಶೀಲ್ದಾರ್ ಗೌತಮ್, ಗ್ರಾಮ ಲೆಕ್ಕಿಗರಾದ ಆರ್.ಪಿ.ಸುರೇಶ್, ಪೈಗಂಬರ್ ಕಂದಾಯ ಇಲಾಖೆ ಸಿಬ್ಬಂದಿಗಳು ಇದ್ದರು.