ತಾಲ್ಲೂಕುತೀರ್ಥಹಳ್ಳಿಹೊಸನಗರ

ಹುಲಿಕಲ್ ಅಪಘಾತ | ನೊಂದ ಜೀವಗಳಿಗೆ ನೆರವು | ಸಹಯಾರ್ಥವಾಗಿ ಕೊಳ್ಳಿ ನಾಟಕ ಹಮ್ಮಿಕೊಂಡ ದೇಶಕ್ಕಾಗಿ ನಾವು ಸಂಘಟನೆ

ತೀರ್ಥಹಳ್ಳಿ/ಹೊಸನಗರ: ಹುಲಿಕಲ್ ನಲ್ಲಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಇಬ್ಬರು ಮಕ್ಕಳು ತಂದೆತಾಯಿಯನ್ನು ಕಳೆದುಕೊಂಡು ಅನಾಥವಾದರೆ.. ಓರ್ವ ತಾಯಿ ಇದ್ದ ಒಬ್ಬ ಮಗನನ್ನು ಕಳೆದುಕೊಂಡು ಏಕಾಂಗಿಯಾದ ಹೃದಯ ವಿದ್ರಾವಕ ಘಟನೆ ಇನ್ನು ಮಾಸಿಲ್ಲ.

ಈ ಎರಡು ಕುಟುಂಬದ ಆಸರೆಯಾಗಿ ಗೃಹ ಸಚಿವ ಆರಗ ಜ್ಞಾನೇಂದ್ರ ಸೇರಿದಂತೆ ಜನಸಮುದಾಯ ವಿಶೇಷವಾಗಿ ಸ್ಪಂದಿಸಿತ್ತು. ಖಾಸಗಿ ಆಸ್ಪತ್ರೆಗೆ ಕಟ್ಟಬೇಕಾಗಿದ್ದ ರೂ.1.80 ಲಕ್ಷ ಹಣದಿಂದ ರಿಯಾಯಿತಿ ಸಿಕ್ಕಿದೆ ಮಾತ್ರವಲ್ಲ ಗೃಹಸಚಿವರ ಮುತುವರ್ಜಿ ಕಾರಣ ಕಟ್ಟಿದ್ದ ರೂ.1 ಲಕ್ಷ ಹಣ ಕೂಡ ಆ ಕುಟುಂಬಕ್ಕೆ ವಾಪಾಸು ದೊರಕಿತ್ತು. ಈಗಾಗಲೇ ಒಕ್ಕಲಿಗ ಸಮುದಾಯ, ಸೇರಿದಂತೆ ಸಮಾಜದ ಸಹೃದಯರ ಸಹಾಯದಿಂದ ಈಗಾಗಲೇ ರೂ.3.5 ಲಕ್ಷಕ್ಕು ಹೆಚ್ಚು ಹಣ ಸಂಗ್ರಹವಾಗಿದೆ.

ನೆರವಿಗೆ ಧಾವಿಸಿದ ತೀರ್ಥಹಳ್ಳಿ ದೇಶಕ್ಕಾಗಿ ನಾವು ಸಂಘಟನೆ

ನೆರವಿಗೆ ಧಾವಿಸಿದ ತೀರ್ಥಹಳ್ಳಿಯ ದೇಶಕ್ಕಾಗಿ ನಾವು ಸಂಘಟನೆ ಆ ಎರಡು ಕುಟುಂಬದ ನೋವುಂಡ ಜೀವಗಳ ಸಹಾಯಾರ್ಥವಾಗಿ ನಾಟಕವನ್ನು ಹಮ್ಮಿಕೊಂಡಿದೆ.

ಡಿಸೆಂಬರ್ 11 ಭಾನುವಾರ ತೀರ್ಥಹಳ್ಳಿಯ ಶಾಂತವೇರಿ ಗೋಪಾಲಗೌಡ ರಂಗಮಂದಿರದಲ್ಲಿ ಸಂಜೆ 6.30 ಕ್ಕೆ ನಾಟಕ ಪ್ರದರ್ಶನಗೊಳ್ಳಲಿದೆ.
ಉಡುಪಿ ಜಿಲ್ಲೆ ಬ್ರಹ್ಮಾವರದ ಸಾಂಸ್ಕೃತಿಕ ಮತ್ತು ಸೇವಾ ಸಂಘಟನೆಯಾದ ಮಂದಾರ(ರಿ) ‘ಕೊಳ್ಳಿ‘ ಎಂಬ ನಾಟಕವನ್ನು ಪ್ರಸ್ತುತ ಪಡಿಸಲಿದೆ.
ಸಾಗರದ ಡಾ.ಜಿ.ಎಸ್.ಭಟ್ಟ ರಚನೆಯ ರೋಹಿತ್ ಎಸ್ ಬೈಕಾಡಿ ನಿರ್ದೇಶನದಲ್ಲಿ ‘ಕೊಳ್ಳಿ‘ ಎಂಬ ನಾಟಕ ಪ್ರದರ್ಶನಗೊಳ್ಳಲಿದೆ.
ಅಸಹಾಯಕ ಮತ್ತು ದಿಕ್ಕಿಲ್ಲದಂತಾದ ಜೀವಗಳ ನೆರವಿಗಾಗಿ ನಾಟಕ ಪ್ರದರ್ಶನ ನಡೆಯಲಿದ್ದು ಟಿಕೆಟ್ ದರವನ್ನು ರೂ.500 ಕ್ಕೆ ನಿಗಧಿ ಪಡಿಸಲಾಗಿದೆ. ರೂ.2 ಲಕ್ಷ ಹಣವನ್ನು ಸಂಗ್ರಹಿಸಿ ಆ ಕುಟುಂಬಗಳಿಗೆ ಗುರಿಯನ್ನು ದೇಶಕ್ಕಾಗಿ ಸಂಘಟನೆ ಹೊಂದಿದೆ.

ನೊಂದ ಜೀವಗಳಿಗೆ ಆಸರೆ ಆಗೋಣ..|
ಹುಲಿಕಲ್ ನಲ್ಲಿ ನಡೆದ ಆ ದುರ್ಘಟನೆ
ನೆನಪಿನಾಳದಲ್ಲಿದೆ, ಅಲ್ಲಿ ಒಂದು ಕುಟುಂಬದಲ್ಲಿ ಎರಡು ಮಕ್ಕಳು ಮಾತ್ರ ಉಳಿದರೆ, ಇನ್ನೊಂದು ಕುಟುಂಬದಲ್ಲಿ ಉಳಿದಿರುವುದು ಒಬ್ಬಂಟಿ ತಾಯಿ ಮಾತ್ರ…ಅವರ ಮುಂದಿನ ಜೀವನ ಅನೂಕೂಲಕರವಾಗಿರಲೆಂದು ನಾವು ಈ ನಿರ್ಧಾರಕ್ಕೆ ಬಂದಿದ್ದೇವೆ , ಕೊಳ್ಳಿ ಎಂಬ ನಾಟಕವನ್ನು ಗೋಪಾಲ ಗೌಡ ರಂಗಮಂದಿರ ದೇಶಕ್ಕಾಗಿ ನಾವು ಸಂಘಟನೆಯಿಂದ ನಡೆಸುತ್ತಿದ್ದಾರೆ, ಎರಡು ಲಕ್ಷ ಹಣ ಒಗ್ಗೂಡಿಸಿ ಕೊಡುವುದು ನಮ್ಮ ಗುರಿ, ಟಿಕೆಟ್ ಬೆಲೆ 500 ನೀವು ಕೊಡುವ 500 ಆ ತಾಯಿ ಮಕ್ಕಳ ನೋವನ್ನು ಸ್ವಲ್ಪವಾದರು ತಣಿಸಬಹುದು…ಟಿಕೆಟ್ ನಮ್ಮಲ್ಲಿ ಇದೆ ದಯವಿಟ್ಟು ನೀವು ನಮ್ಮ ಜೊತೆ ಕೈಜೋಡಿಸಿ, ಆ ವೇದಿಕೆಯಲ್ಲಿ ನಿಮ್ಮೆಲ್ಲರ ಸಹಕಾರದೊಂದಿಗೆ ಆ ಹಣವನ್ನು ನೀಡೋಣ

– ಆದರ್ಶ ಹುಂಚದಕಟ್ಟೆ

ಈ ಸುದ್ದಿಯನ್ನು ಓದಿ.. ಹುಲಿಕಲ್ ಅಪಘಾತಕ್ಕೆ ತುತ್ತಾಗಿ ದಿಕ್ಕಿಲ್ಲದಂತಾದ ಆ ಎರಡು ಕುಟುಂಬ

ಇದು ಸಾವಿನ ಸರಣಿ.. ಕಡು ಬಡವರೇ ಏಕೆ ಟಾರ್ಗೆಟ್.. ಏಕಾಂಗಿ.. ತಾಯಿ.. ಅನಾಥ ಮಕ್ಕಳು.. ಎರಡು ಕುಟುಂಬದ ಕರುಣಾಜನಕ ಕತೆ.. ಅಳಿದುಳಿದ ಜೀವಗಳಿಗೆ ಬೇಕಿದೆ.. ಆಸರೆ.. ಸಹಾಯ.. https://goodmorningkarnataka.com/kampadakai-village-sad-story/

ಸಮಾಜದಲ್ಲಿಯ ಸುದ್ದಿಗಳನ್ನು ಆರಿಸಿ ಮತ್ತೆ ಸಮಾಜಕ್ಕೆ ನೀಡುವ ಒಂದು ಸಣ್ಣ ಪ್ರಯತ್ನ.. ಆ ಕಾರ್ಯದಲ್ಲಿ ಖಚಿತತೆ, ವಿಶ್ವಾಸಾರ್ಹತೆ, ಸಮಸ್ಯೆಯ ಬಿಂಬ, ಬಿಂಬಿತ ಸಮಸ್ಯೆಗೆ ಪರಿಹಾರದ ಯತ್ನ.. ಆ ಯತ್ನದಲ್ಲಿ ದಕ್ಕಿದ ಒಂದಷ್ಟು ಯಶಸ್ಸು.. ಇದರಲ್ಲಿ‌ ನಿರಂತರತೆ ಕಾಯ್ದುಕೊಳ್ಳುವ ಆಶಯ.. ಅಷ್ಟೆ..

What's your reaction?

Related Posts

1 of 45

Leave A Reply

Your email address will not be published. Required fields are marked *