
ಹುಲಿಕಲ್ ಘಾಟ್ |IMPACT NEWS| ಬಾರೀ ವಾಹನಗಳಿಗೆ ನಿಷೇಧ | ಅಗತ್ಯ ಸರ್ಕಲ್ ನಲ್ಲಿ ಪರ್ಯಾಯ ಮಾರ್ಗ ಸೂಚಿ ಬ್ಯಾನರ್ ಅಳವಡಿಕೆಗೆ ಮುಂದಾದ PWD |
ಶಿವಮೊಗ್ಗ: ಹುಲಿಕಲ್ ಘಾಟ್ ರಸ್ತೆ ಕುಸಿಯುವ ಭೀತಿ ಎದುರಿಸುತ್ತಿರುವ ಕಾರಣ ಬಾರೀ ವಾಹನಗಳ ಸಂಚಾರಕ್ಕೆ ನಿಷೇಧ ಮಾಡಲಾಗಿದೆ.
ನಿಷೇಧ ಮಾಡಿ ವಾರ ಕಳೆದರೂ ಪರ್ಯಾಯ ರಸ್ತೆಯ ಮಾರ್ಗ ಸೂಚಿ ಫಲಕಗಳನ್ನು ಅಗತ್ಯ ಸರ್ಕಲ್ ಗಳಲ್ಲಿ ಅಳವಡಿಸದ ಕಾರಣ ಬಾರೀ ವಾಹನಗಳು ಮಾಹಿತಿ ತಿಳಿಯದೇ ಮಾಸ್ತಿಕಟ್ಟೆಗೆ ಬಂದು ವಾಪಾಸಾಗುವಂತಾಗಿದೆ. ಇದು ವಾಹನ ಚಾಲಕರ ಪರದಾಟಕ್ಕೆ ಕಾರಣವಾಗಿತ್ತು.
ಈ ಹಿನ್ನೆಲೆಯಲ್ಲಿ ಆ.10 ಭಾನುವಾರ ಗುಡ್ ಮಾರ್ನಿಂಗ್ ಕರ್ನಾಟಕದಲ್ಲಿ ವರದಿ ಪ್ರಕಟವಾಗಿತ್ತು. ಇದಕ್ಕೆ ಸ್ಪಂದಿಸಿದ ಲೋಕೋಪಯೋಗಿ ಇಲಾಖೆ ಆ.11 ಸೋಮವಾರ ಬೆಳಿಗ್ಗೆಯಿಂದಲೇ ಅಗತ್ಯ ಸರ್ಕಲ್ ಗಳಲ್ಲಿ ಮಾರ್ಗ ಸೂಚಿ ಬ್ಯಾನರ್ ನ್ನು ಅಳವಡಿಸುತ್ತಿದೆ.
ಆಯನೂರು ಸರ್ಕಲ್, ಕೈಮರ ಸರ್ಕಲ್, ನಗರ ಚಿಕ್ಕಪೇಟೆ ಸರ್ಕಲ್, ಬಟ್ಟೆಮಲ್ಲಪ್ಪ ಸರ್ಕಲ್, ಸಾಗರದಲ್ಲಿ ಕೂಡ ಪರ್ಯಾಯ ಮಾರ್ಗ ಸೂಚಿ ಬ್ಯಾನರ್ ಕಟ್ಟಿ ಮಾಹಿತಿ ನೀಡಲು ಮುಂದಾಗಿದೆ.
