
ವಿದ್ಯೆಯಲ್ಲಿ ಭರವಸೆ ಇಟ್ಟರೇ ಭವಿಷ್ಯ ಉಜ್ವಲ : ಫಾ.ರೆವರೆಂಡ್ ಪಿಂಟೋ
ಕಾನುಗೋಡು ಪ್ರೌಢಶಾಲೆಯಲ್ಲಿ ಗಮನಸೆಳೆದ ವಿಜ್ಞಾನ ಮೇಳ
ಹೊಸನಗರ: ಬಾಲ್ಯದಲ್ಲಿ ವಿದ್ಯೆ ಮೇಲೆ ಭರವಸೆ ಇಟ್ಟು ಮುನ್ನೆಡೆದರೆ ಭವಿಷ್ಯ ಉಜ್ವಲವಾಗಿರುತ್ತದೆ ಎಂದು ಕಬಳೆ ಚರ್ಚ್ ಫಾ.ರೆವರೆಂಡ್ ಪಿಂಟೋ ಅಭಿಪ್ರಾಯಿಸಿದರು.
ತಾಲೂಕಿನ ಕಾನುಗೋಡು ಸರ್ಕಾರಿ ಪ್ರೌಢಶಾಲೆಯಲ್ಲಿ ವಿಜ್ಞಾನ ಮತ್ತು ಕಲಾ ಪ್ರದರ್ಶನಕ್ಕೆ ಚಾಲನೆ ನೀಡಿ, ಎಲ್ಲಾ ಮಕ್ಕಳಲ್ಲೂ ಒಂದಲ್ಲ ಒಂದು ಪ್ರತಿಭೆ ಇರುತ್ತದೆ. ಅದನ್ನು ಹೊರತೆಗೆಯಲು ಸೂಕ್ತ ವೇದಿಕೆ ಅಗತ್ಯ ಎಂದರು.
ಗೀತಾ ಪೌಂಡೇಶನ್ ಸಂಸ್ಥಾಪಕ ಶಂಕರ ಐತಾಳ್, ವಿಜ್ಞಾನ ಮೇಳ ಆಯೋಜಿಸುವುದು ಸುಲಭವಲ್ಲ.ಈ ದಿಸೆಯಲ್ಲಿ ಕಾನುಗೋಡು ಸರ್ಕಾರಿ ಪ್ರೌಢಶಾಲೆ, ಶಿಕ್ಷಕ ವೃಂದ ಮಾದರಿ ಎಂದರು.
ವಿಜ್ಞಾನಮೇಳದಲ್ಲಿ ಸೌರಮಂಡಲ, ಸೌರಶಕ್ತಿ, ಪರಿಸರ ಜ್ಞಾನ, ಪುರಾತನ ಅಡುಗೆ ಸಲಕರಣೆಗಳು, ಭಾಷಾ ಜ್ಞಾನ, ಸೇರಿದಂತೆ ಹಲವು ವಿಷಯಗಳ ಕುರಿತಾಗಿ ಮಾಡೆಲ್ ರಚಿಸಿ ಆ ವಿಚಾರವಾಗಿ ಸಂವಹನ ನಡೆಸಿದ್ದು ಗಮನ ಸೆಳೆಯಿತು.

ಸಭಾ ಕಾರ್ಯಕ್ರಮದಲ್ಲಿ ಎಸ್ಎಸ್ಎಲ್ಸಿಯಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದ ಸಾನಿಯ ಡಿಸೋಜ, ಪ್ರಜ್ಞಾ, ಅಮೃತರನ್ನು ಸನ್ಮಾನಿಸಿ ಗೌರವಿಸಲಾಯಿತು.
ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಗಣೇಶ್ ಅಧ್ಯಕ್ಷತೆ ವಹಿಸಿದ್ದರು.
ಹೊಸನಗರ ಪಪಂ ಸದಸ್ಯ ಅಶ್ವಿನ್ ಕುಮಾರ್, ಕರಿಮನೆ ಗ್ರಾಪಂ ಉಪಾಧ್ಯಕ್ಷೆ ಸೀತಮ್ಮ, ಸಿಆರ್ಪಿ ರೇಖಾ ಪ್ರಭಾಕರ್, ಆರ್ಡಿ ಲಯನ್ಸ್ ಕ್ಲಬ್ ಅಧ್ಯಕ್ಷ ಮುಷ್ತಾಕ್ ಅಹಮದ್, ಸಾಮಾಜಿಕ ಕಾರ್ಯಕರ್ತ ರವಿಶಾಸ್ತ್ರಿ, ನಿವೃತ್ತ ಯೋಧ ವೀರೇಂದ್ರ ಹೆಚ್.ಟಿ, ಮುಖ್ಯ ಶಿಕ್ಷಕ ತಿಮ್ಮಪ್ಪ, ರಾಜೇಶ ಹಿರಿಮನೆ, ಭವ್ಯ, ಪ್ರಕಾಶ ವಾರದ್, ನಿಂಗಪ್ಪ, ಶ್ರೀನಿವಾಸ್, ಸವಿತಾ, ತಸ್ಮಿಯಾ ಬಾನು ಉಪಸ್ಥಿತರಿದ್ದರು.











