
ಕಾಂತಾರ 1 ಚಾಪ್ಟರ್ ದುರಂತ ನಿಜವೇ..? ದೋಣಿ ಮಗುಚಿದ್ದೋ.. ಇಲ್ಲ ನೀರಿನ ಮೇಲೆ ಹಾಕಿದ್ದ ಸ್ಟೇಜ್ ಮಗುಚಿದ್ದೋ..! ರಾತ್ರಿಯಿಂದಲೇ ಭಾರೀ ದುರಂತ ನಡೆದ ಸುದ್ದಿ ವ್ಯಾಪಿಸಿದ್ದರೂ.. ಸ್ಪಷ್ಟ ಪಡಿಸೋರು ಯಾರು? ಪೊಲೀಸರಿಗೂ ಒಳಗೆ ಹೋಗೋ ಅವಕಾಶ ಇಲ್ಲ ಎಂದರೆ ಇಡೀ ಪ್ರದೇಶವನ್ನು ಕಬ್ಜ ಮಾಡಲಾಗಿದೆಯೇ?
ಶಿವಮೊಗ್ಗ: ಹೊಸನಗರ ತಾಲೂಕಿನ ವಾರಾಹಿ ಹಿನ್ನೀರಿನ ವ್ಯಾಪ್ತಿಯಲ್ಲಿ ಕಾಂತಾರ 1 ಚಾಪ್ಟರ್ ಸಿನಿಮಾ ಚಿತ್ರೀಕರಣ ನಡೆಯುವಾಗ ಭಾರೀ ಅವಘಡ ಸಂಭವಿಸಿದೆ. 30. ಜನ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂಬ ಸುದ್ದಿ ಎಲ್ಲಾ ಮೀಡಿಯಾ ಗಳಲ್ಲಿ ಸದ್ದು ಮಾಡಿದೆ. ಆದರೆ ರಾತ್ರಿ ಕಳೆದು ಬೆಳಗಾದರೂ.. ಯಾರು ಕೂಡ ಸುದ್ದಿಯ ಸತ್ಯಾಸತ್ಯತೆಯನ್ನು ಖಚಿತ ಪಡಿಸದಿರುವುದು ಸಾಕಷ್ಟು ಅನುಮಾನ ಮತ್ತು ಚಿತ್ರೀಕರಣ ತಂಡವಾಗಲಿ, ಸಂಬಂಧಪಟ್ಟವರ ಬೇಜವಾಬ್ದಾರಿಯನ್ನು ಪ್ರಶ್ನಿಸುವಂತಾಗಿದೆ.
ದೋಣಿ ಮಗುಚಿ 30 ಜನ ಕಲಾವಿದರು ರಿಷಬ್ ಶೆಟ್ಟಿ ಸೇರಿದಂತೆ ಕಲಾವಿದರು ಅದೃಷ್ಟವಶಾತ್ ಪಾರಾಗಿದ್ದಾರೆ ಎಂಬ ಸುದ್ದಿ ರಾಜ್ಯಾದ್ಯಂತ ಹರಿದಾಡಿದ್ದರು ಕೂಡ.. ಅದು ಸತ್ಯವೋ.. ಸುಳ್ಳೋ ಇಲ್ಲ.. ಅವಘಡ ಆಗಿದ್ದರೆಬಯಾವ ಪ್ರಮಾಣದಲ್ಲಿ ಎಂಬ ಬಗ್ಗೆ ಸ್ಪಷ್ಟನೆ ನೀಡಬೇಕಾದ ಚಿತ್ತೀಕರಣ ತಂಡ ತಮಗೇನು ತಿಳಿದೇ ಇಲ್ಲ ಎಂದು ಮಗುಮ್ಮಾಗಿರುವುದರ ಹಿಂದಿನ ಕಾರಣ ತಿಳಿಯಬೇಕಿದೆ.
ಅವಘಡ ನಡೆದಿದೆಯೋ.. ಇಲ್ಲವೋ.. ಆದರೆ ಜನರು ಆತಂಕ ಪಡುವ ಸುದ್ದಿ ಹರಿದಾಡುತ್ತಿದ್ದರು ಕೂಡ.. ಚಿತ್ತೀಕರಣಕ್ಕೆ ಅವಕಾಶ ಕೊಟ್ಟ ಕೆಪಿಸಿ ಅಧಿಕಾರಿಗಳಾಗಲಿ.. ವ್ಯಾಪ್ತಿಗೆ ಪೊಲೀಸ್ ಅಧಿಕಾರಿಗಳಿಗಾಗಲಿ.. ಮಾಹಿತಿ ಸಿಕ್ಕಿಲ್ಲ.. ಇಲ್ಲವೇ ಈ ಬಗ್ಗೆ ಪರಿಶೀಲಿಸಲು ಅವಕಾಶ ಸಿಗುತ್ತಿಲ್ಲ ಎಂದಾದರೇ.. ವಾರಾಹಿ ಯೋಜನೆಯ ಸೂಕ್ಷ್ಮ ಪ್ರದೇಶವಾಗಿರುವ ಇಡೀ ಪ್ರದೇಶವನ್ನು ಚಿತ್ರೀಕರಣ ತಂಡ ಕಬ್ಜ ಮಾಡಿಕೊಂಡಿದೆಯೋ ಎಂಬ ಅನುಮಾನ ಕಾಡುತ್ತಿದೆ.


ಕೆಪಿಸಿ ಅಧಿಕಾರಿಗಳಿಗೆ ಮಾಹಿತಿ ಇಲ್ಲ.. ಪೊಲೀಸರಿಗೆ ಒಳಹೋಗಲು ಅವಕಾಶ ನೀಡುತ್ತಿಲ್ಲ ಎಂಬ ಮಾಹಿತಿ ಇದೆ. ಇದಕ್ಕೆ ಯಾರು ಹೊಣೆ ಎಂಬುದು ಎಲ್ಲರ ಪ್ರಶ್ನೆಯಾಗಿದೆ.
ಇಷ್ಟೊಂದು ದೊಡ್ಡಮಟ್ಟದ ಸುದ್ದಿಯಾಗಿದ್ದರೂ ಕೂಡ ಚಿತ್ರೀಕರಣದ ತಂಡ. ಅವಘಡ ನಡೆದಿರುವುದು ಸುಳ್ಳಾಗಿದ್ದರೇ.. ಸುಳ್ಳು ಎಂದು ಸ್ಪಷ್ಟನೆ ನೀಡಲು ಏನು ತೊಂದರೆ..? ಇಲ್ಲ ನೆಗೆಟಿವ್ ಪ್ರಚಾರವೇ ಚಿತ್ರದ ಬಂಡವಾಳ ಎಂದು ಭಾವಿಸಿದೆಯೇ..? ಎಂಬುದು ಸ್ಥಳೀಯರ ಪ್ರಶ್ನೆ.
ಇನ್ನು ಕೆಪಿಸಿ ಪ್ರತಿಯೊಂದಕ್ಕು ಸೂಕ್ಷ್ಮ ಮತ್ತು ಭದ್ರತೆ ಕಾರಣಕ್ಕಾಗಿ ಸ್ಥಳೀಯರಿಗೆ ಡ್ಯಾಂ ದಾರಿಯಲ್ಲಿ ಹೋಗಲು ಕೂಡ ಅನುಮತಿ ನೀಡಲು ಮೀನಾಮೇಷ ಎಣಿಸುತ್ತದೆ. ಆದರೆ ಸೂಕ್ಷ್ಮ ಪ್ರದೇಶದಲ್ಲಿ ಚಿತ್ರೀಕರಣಕ್ಕೆ ತಿಂಗಳುಗಟ್ಟಲೇ ಅವಕಾಶ ನೀಡುತ್ತದೆ. ನೀಡಲಿ ಆದರೆ ಅವಘಡ ನಡೆದಿದೆ ಎಂಬ ಮಾಹಿತಿ ವ್ಯಾಪಕವಾಗಿ ಹರಿದಾಡಿದರೂ.. ಖಚಿತ ಮಾಹಿತಿ ನೀಡಲು ಹಿಂದೇಟು ಹಾಕುತ್ತಿರುವುದೇಕೆ ಎಂಬದು ಪ್ರಶ್ನೆ. ಇದೇ ಜವಾಬ್ದಾರಿ ಅರಣ್ಯ ಇಲಾಖೆಗೂ ಇದೆ ಎಂಬುದು ಸತ್ಯ.
ಒಟ್ಟಾರೆ ಯಡೂರು ಮೇಲಿನಕೊಪ್ಪ ಸಮೀಪದ ವಾರಾಹಿ ಹಿನ್ನೀರಲ್ಲಿ ನೆಡೆದಿದೆ ಎನ್ನಲಾದ ಅವಘಡದ ಸತ್ಯಾಸತ್ಯತೆ ಬಗ್ಗೆ ಮಾಹಿತಿಯನ್ನು ಚಿತ್ರೀಕರಣ ತಂಡ, ಸಂಬಂಧಪಟ್ಟ ಇಲಾಖೆ ನೀಡಬೇಕಿದೆ.. ಆ ಮೂಲಕ ತಮ್ಮ ಜವಾಬ್ದಾರಿಯನ್ನು ನಿರ್ವಹಿಸಬೇಕಿದೆ..
