
ಕೊಡಚಾದ್ರಿ ರಾಜೇಂದ್ರ ಶೆಟ್ಟಿ ಮನೆ ಕಳ್ಳತನ : ನಗದು ಸೇರಿ 14.55 ಲಕ್ಷ ಮೌಲ್ಯದ ಚಿನ್ನಾಭರಣ ಅಪಹರಣ
ಹೊಸನಗರ: ನಿಟ್ಟೂರು ಗೌರಿಕೆರೆ ನಿವಾಸಿ ಕೊಡಚಾದ್ರಿ ರಾಜೇಂದ್ರ ಶೆಟ್ಟಿ ಮನೆಯಲ್ಲಿ ಕಳ್ಳತನ ಮಾಡಿದ್ದು ನಗದು ಸೇರಿದಂತೆ ರೂ.14.55 ಲಕ್ಷ ಮೌಲ್ಯದ ಚಿನ್ನಾಭರಣ ದೋಚಿರುವುದು ಬೆಳಕಿಗೆ ಬಂದಿದೆ.
ಮನೆ ಮಾಲೀಕ ರಾಜೇಂದ್ರ, ಹೆಂಡತಿ ಮಕ್ಕಳು ಕಾರ್ಯ ನಿಮಿತ್ತ ಬೇರೆಡೆ ಹೋಗಿದ್ದ ಸಂದರ್ಭದಲ್ಲಿ ಮನೆಗೆ ನುಗ್ಗಿ ಕಳ್ಳತನ ಮಾಡಲಾಗಿದೆ. ಮನೆಬಾಗಿಲು ಮುರಿದು ಕಳ್ಳರು ಒಳಹೊಕ್ಕಿದ್ದು ಗೋದ್ರೆಜ್ ಬೀರಿನಲ್ಲಿದ್ದ ಇಟ್ಟಿದ್ದ ಬಟ್ಟೆ ಇನ್ನಿತರ ವಸ್ತುಗಳನ್ನು ಚೆಲ್ಲಾಪಿಲ್ಲಿ ಮಾಡಿರುವುದು ಕಂಡು ಬಂದಿದೆ.
ಬೀರುವಿಲ್ಲಿದ್ದ 48 ಗ್ರಾಂ ತೂಕದ ಚಿನ್ನದ ನಕ್ಸೆಸ್ ಮೌಲ್ಯ ಸುಮಾರು 4.80 ಲಕ್ಷ, 40 ಗ್ರಾಂ ತೂಕದ ಬ್ರಾಸ್ ಲೆಟ್ ಮೌಲ್ಯ ಸುಮಾರು 4 ಲಕ್ಷ, 20 ಗ್ರಾಂ ತೂಕದ 02 ಚಿನ್ನದ ಬಳೆಗಳು ಮೌಲ್ಯ ಸುಮಾರು 2 ಲಕ್ಷ, 01 ಹರಿವಾಣ, 2 ಕುಂಕುಮ ಭಟ್ಟಲು, 02 ಜೋಡಿ ಕಾಲು ದೀಪ, 03 ನಂದಾ ದೀಪ ಇತರೆ ಸಣ್ಣ ಪುಟ್ಟ ಬೆಳ್ಳಿಯ ಸಾಮಾಗ್ರಿಗಳು ಒಟ್ಟು 02 ಲಕ್ಷ ಮೌಲ್ಯದ ಬೆಳ್ಳಿ ಸಾಮಾಗ್ರಿ, ನಗದು 1.75,000/- ರೂಪಾಯಿ ದೋಚಲಾಗಿದೆ. ಒಟ್ಟು 108 ಗ್ರಾಂ ಚಿನ್ನಾಭರಣಗಳು, 1 ಕೆ.ಜಿ ಬೆಳ್ಳಿಯ ಸಾಮಾಗ್ರಿಗಳು, ಮತ್ತು ನಗದು ಸೇರಿ 14,55,000/- ಒಟ್ಟು ರೂ ಮೌಲ್ಯದ ಸಾಮಾಗ್ರಿಗಳನ್ನು ಕಳ್ಳತನ ಮಾಡಲಾಗಿದೆ.
ನಗರ ಪೊಲೀಸ್ ಠಾಣೆಯಲ್ಲಿ ಪಿಎಸ್ಐ ಶಿವಾನಂದ ಕೋಳಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ. ಕಳ್ಳರ ಪತ್ತೆಗೆ ವಿವಿಧ ರೀತಿ ಶೋಧ ಕಾರ್ಯ ನಡೆಸಿದ್ದಾರೆ.











