Homeಕ್ರೈಂತಾಲ್ಲೂಕುತೀರ್ಥಹಳ್ಳಿಶಿವಮೊಗ್ಗಶಿವಮೊಗ್ಗ ಜಿಲ್ಲೆ

ಕೊಲ್ಲೂರು ಹೆದ್ದಾರಿ ಎಬಗೋಡು ಪಕ್ಕದಲ್ಲೇ ನಿಧಿ ಶೋಧನೆ : ಶಿವಲಿಂಗದ ಪಕ್ಕದಲ್ಲಿ 4 ಅಡಿಯಷ್ಟು ಗುಂಡಿ ತೋಡಿದ ನಿಧಿ ಚೋರರು

ಕೊಲ್ಲೂರು ಹೆದ್ದಾರಿ ಎಬಗೋಡು ಪಕ್ಕದಲ್ಲೇ ನಿಧಿ ಶೋಧನೆ : ಶಿವಲಿಂಗದ ಪಕ್ಕದಲ್ಲಿ 4 ಅಡಿಯಷ್ಟು ಗುಂಡಿ ತೋಡಿದ ನಿಧಿ ಚೋರರು

ಹೊಸನಗರ: ರಾಣೇಬೆನ್ನೂರು ಬೈಂದೂರು ರಾಷ್ಟ್ರೀಯ ಹೆದ್ದಾರಿಯ ಕೊಲ್ಲೂರು ಮಾರ್ಗದ ಎಬಗೋಡು ಬಳಿ ಹೆದ್ದಾರಿ ಪಕ್ಕದಲ್ಲೇ ನಿಧಿಯಾಸೆಯಾಗಿ ಗುಂಡಿ ತೋಡಿದ ಘಟನೆ ಗುರುವಾರ ಬೆಳಿಗ್ಗೆ ಬೆಳಕಿಗೆ ಬಂದಿದೆ.

ಎಬಗೋಡು ಹೆದ್ದಾರಿಗೆ ತಾಗಿಕೊಂಡಂತಿರುವ ಧರೆಯ ಮೇಲ್ಭಾಗದಲ್ಲಿ ಶಿವಲಿಂಗದ ಕೆತ್ತನೆ ಇರುವ ಕಲ್ಲು ಇದ್ದು ಅದರ ಪಕ್ಕದಲ್ಲೇ ಗುಂಡಿ ತೋಡಲಾಗಿದೆ. ಶಿವಲಿಂಗ ಕಲ್ಲಿಗೆ ಹರಶಿಣ, ಕುಂಕುಮ ಹಚ್ಚಿದ್ದು ಪಕ್ಕದ ಬೃಹತ್ ಮರದ ಪೊಟರೆಯೊಳಗೆ ಹೂವಿನ ಹಾರ ಕಂಡು ಬಂದಿದೆ. ಸುತ್ತಲೂ ಅಲ್ಲಲ್ಲಿ ಲಿಂಬೆಹಣ್ಣು ಎಸೆದಿರುವುದು ಕಂಡು ಬಂದಿದೆ. ನಿಧಿಯಾಸೆಗೆ ಈ ಘಟನೆ ನಡೆದಿರುವ ಬಗ್ಗೆ ಸ್ಥಳೀಯರು ಶಂಕೆ ವ್ಯಕ್ತಪಡಿಸಿದ್ದಾರೆ.

ಹೆದ್ದಾರಿಯಿಂದ ಹೆಚ್ಚೆಂದರೆ ಹತ್ತಿಪ್ಪತ್ತು ಅಡಿ ಅಂತರದಲ್ಲಿ ಈ ಕೃತ್ಯ ಎಸಗಲಾಗಿದೆ. ಎರಡು ವರ್ಷದ ಹಿಂದೆ ಪಕ್ಕದ ಶ್ರೀಧರ ಗುಡ್ಡದ ಮೇಲ್ಭಾಗದಲ್ಲಿರುವ ಶಿವಲಿಂಗದ ಕೆತ್ತನೆ ಇರುವ ಕಲ್ಲಿನ ಪಕ್ಕದಲ್ಲಿ ಇದೇ ಮಾದರಿ ಘಟನೆ ನಡೆದಿತ್ತು.

ನಗರ ಭಾಗದಲ್ಲಿ ಹಲವು ವರ್ಷಗಳಿಂದ ನಿಧಿಗಾಗಿ ಶೋಧ ನಡೆಸುವ ಘಟನೆಗಳು ನಿರಂತರವಾಗಿ ನಡೆಯುತ್ತಲೇ ಬಂದಿದೆ. ಸಮಾಧಿ ಸ್ಥಳ, ಗಳಿಗೆ ಬಟ್ಟಲು, ಬರೇಕಲ್ ಬತೇರಿ, ಅರೋಡಿ, ಬಸವನಬ್ಯಾಣ, ದರಗಲ್ ಗುಡ್ಡ ಸೇರಿದಂತೆ ಇತಿಹಾಸ ಮಹತ್ವದ ಸ್ಥಳಗಳನ್ನು ಕೂಡ ನಿಧಿಯಾಸೆಗಾಗಿ ಲೂಟಿಕೂರರು ಧ್ವಂಸಗೊಳಿಸಿದ್ದರು.

ಸಮಾಜದಲ್ಲಿಯ ಸುದ್ದಿಗಳನ್ನು ಆರಿಸಿ ಮತ್ತೆ ಸಮಾಜಕ್ಕೆ ನೀಡುವ ಒಂದು ಸಣ್ಣ ಪ್ರಯತ್ನ.. ಆ ಕಾರ್ಯದಲ್ಲಿ ಖಚಿತತೆ, ವಿಶ್ವಾಸಾರ್ಹತೆ, ಸಮಸ್ಯೆಯ ಬಿಂಬ, ಬಿಂಬಿತ ಸಮಸ್ಯೆಗೆ ಪರಿಹಾರದ ಯತ್ನ.. ಆ ಯತ್ನದಲ್ಲಿ ದಕ್ಕಿದ ಒಂದಷ್ಟು ಯಶಸ್ಸು.. ಇದರಲ್ಲಿ‌ ನಿರಂತರತೆ ಕಾಯ್ದುಕೊಳ್ಳುವ ಆಶಯ.. ಅಷ್ಟೆ..

What's your reaction?

Related Posts

1 of 41

Leave A Reply

Your email address will not be published. Required fields are marked *