ಹೊಸನಗರ :ತಾಲೂಕು ವಿಜಯವಾಣಿ ಪತ್ರಿಕೆ ವರದಿಗಾರರಾದ ರವಿ ಬಿದನೂರು ಕೆಯುಡಬ್ಲೂಜೆ ಕೊಡಮಾಡುವ ರಾಜ್ಯ ಪ್ರಶಸ್ತಿಗೆ ಆಯ್ಕೆ ಆಗಿದ್ದಾರೆ.
ಕೆಯುಡಬ್ಲೂಜೆ ವಾರ್ಷಿಕ ಪ್ರಶಸ್ತಿ ಘೋಷಣೆಯಾಗಿದ್ದು, ಗ್ರಾಮೀಣ ಜನ ಜೀವನದ ಕುರಿತ ಅತ್ಯುತ್ತಮ ವರದಿಗಾಗಿ ರವಿಯವರಿಗೆ ಮಂಡಿಬೆಲೆ ಶಾಮಣ್ಣ ಸ್ಮಾರಕ ಪ್ರಶಸ್ತಿ ಲಭಿಸಿದೆ.ತುಮಕೂರಿನಲ್ಲಿ ಜನವರಿ 18 ಮತ್ತು 19ರಂದು ನಡೆಯುವ 39ನೇ ರಾಜ್ಯ ಪತ್ರಕರ್ತರ ಸಮ್ಮೇಳನದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ.
ನಾಡಿಗೆ ಬೆಳಕು ಕೊಟ್ಟು ಕತ್ತಲಿನಲ್ಲಿ ಬಾಳು ಸಾಗಿಸುತ್ತಿರುವ, ಮೂಲಭೂತ ಸೌಕರ್ಯ ವಂಚಿತ ಕುಗ್ರಾಮಗಳ ಕುರಿತು ವಿಶೇಷ ಕಾಳಜಿಯಿಂದ ವರದಿ ಮಾಡಿ ಆಡಳಿತದ ಗಮನಕ್ಕೆ ತರುವಲ್ಲಿ ಯಶಸ್ವಿಯಾಗಿರುವ ಬಿದನೂರುರಿಗೆ ಹಿಂದೆ2011ರಲ್ಲಿ ನವದೆಹಲಿಯಲ್ಲಿ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಜ್ಯೋತಿ ಬಾ ಪುಲೆ ಫೆಲೋಶಿಪ್ ಅವಾರ್ಡ್, 2017ರಲ್ಲಿ ರಾಜ್ಯಸರ್ಕಾರ ಕೊಡಮಾಡುವ ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಅರ್ಹವಾಗಿಯೇ ಸಂದಿತ್ತು.
ಜನಪರ ಕಾಳಜಿಯ, ಜನರ ಸಮಸ್ಯೆಗೆ ಧ್ವನಿಯಾಗುವ ರವಿಯವರ ವೃತ್ತಿಧರ್ಮಕ್ಕೆ ಪತ್ರಿಕೆ ವಿಶೇಷ ಅಭಿನಂದನೆ ಸಲ್ಲಿಸುತ್ತದೆ.