
ಶಿವಮೊಗ್ಗ: ಸುಧೀರ್ಘ ಪತ್ರಿಕೋದ್ಯಮ ಸೇವೆ.. ಗಮನ ಸೆಳೆದ ಸಾಹಿತಿ.. ಮಲೆನಾಡ ನಡುಮನೆಯ ಅಕ್ಷರ ಸಂತ.. 70ರ ಹರೆಯದ ಲಕ್ಷ್ಮಣ ಕೊಡಸೆ ಈ ಬಾರಿಯ ಶಿವಮೊಗ್ಗ ಜಿಲ್ಲಾ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಗೌರವಕ್ಕೆ ಭಾಜನರಾಗಿದ್ದಾರೆ.
ಹೊಸನಗರ ತಾಲೂಕಿನ ಹುಂಚಾ ಹೋಬಳಿಯ ಮೂಗುಡುತಿ ಎಂಬ ಹಳ್ಳಿಯಲ್ಲಿ 1953 ಏಪ್ರಿಲ್ 25 ರಂದು ಜನಿಸಿದ ಲಕ್ಷ್ಮಣ ಕೊಡಸೆ ಬೆಳೆದ ಮಟ್ಟ ಎಂತವರನ್ನು ಗಮನ ಸೆಳೆಯುತ್ತದೆ.
ತಂದೆ ಕರಿಯನಾಯ್ಕ, ತಾಯಿ ಭರ್ಮಮ್ಮ,


ಬದುಕು ಬರಹ:
ಹೊಸನಗರ ತಾಲೂಕಿನ ಕಣಬಂದೂರು ಪ್ರಾಥಮಿಕ, ಜಂಬಳ್ಳಿಯಲ್ಲಿ ಹಿರಿಯ ಪ್ರಾಥಮಿಕ, ರಿಪ್ಪನಪೇಟೆಯಲ್ಲಿ ಪ್ರೌಢಶಿಕ್ಷಣ, ಬೆಂಗಳೂರಿನ ರೇಣುಕಾಚಾರ್ಯ ಕಾಲೇಜಿನಲ್ಲಿ ಪಿಯುಸಿ, ಬೆಂಗಳೂರು ಸೆಂಟ್ರಲ್ ಕಾಲೇಜಿನಲ್ಲಿ ಕಲಾ ವಿಭಾಗದಲ್ಲಿ ಪದವಿ, ಬೆಂಗಳೂರು ಕನ್ನಭಾರತಿ ಕನ್ನಡ ಅಧ್ಯಯನ ವಿವಿಯಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಪಡೆದ ಲಕ್ಷ್ಮಣ ಕೊಡಸೆ ಬದುಕು ಮತ್ತು ಬರಹಕ್ಕಾಗಿ ಆರಿಸಿಕೊಂಡಿದ್ದು ಪತ್ರಿಕೋದ್ಯಮ ಕ್ಷೇತ್ರವನ್ನು.
ತುಂಬು ಸಂಸಾರ:
ಪತ್ನಿ ಸ್ವರ್ಣಾಂಬ ಕೊಡಸೆ, ಬಿಎಸ್‌ಸಿ., ಬಿ.ಎ(ಆನರ‍್ಸ್)., ಎಂಎ., ಸಿಎಐಐಬಿ ವಿದ್ಯಾರ್ಹತೆ ಹೊಂದಿದ್ದು ಕೆನರಾ ಬ್ಯಾಂಕ್ ಸೀನಿಯರ್ ಮ್ಯಾನೇಜರ್ ಆಗಿ ನಿವೃತ್ತರಾಗಿದ್ದಾರೆ. ಇವರಿಗೆ
ಇಬ್ಬರು ಗಂಡುಮಕ್ಕಳು. ಹಿರಿಯ ಮಗ ಶರತ್ ಖರಗಪುರ ಐಐಟಿಯಲ್ಲಿ ಬಿ.ಟೆಕ್ (ಆನರ‍್ಸ್)., ಅಮೆರಿಕದ ಮಿಶಿಗನ್
ವಿವಿಯಿಂದ ಎಂಎಸ್ ಶಿಕ್ಷಣ ಪಡೆದಿದ್ದು ಈಗ ಸ್ಯಾಮ್‌ಸಂಗ್ ಕಂಪೆನಿಯಲ್ಲಿ ಉನ್ನತ ಶ್ರೇಣಿಯ ಇಂಜಿನಿಯರ್ ಆಗಿ ಕಾರ್ಯನಿರ್ವಹಿಸಿದ್ದಾರೆ. ಪ್ರಸ್ತುತ ಈಗ ಸಂಸ್ಥೆಯ ಬೆಂಗಳೂರು ಘಟಕದಲ್ಲಿ ನಿರ್ದೇಶಕರಾಗಿದ್ದಾರೆ.
ಕಿರಿಯ ಮಗ ಭರತ್, ಮದ್ರಾಸ್ ಐಐಟಿಯಿಂದ ಬಿ.ಟೆಕ್ (ಆನರ‍್ಸ್)., ಬೆಂಗಳೂರಿನ ಐಐಎಂ ನಿಂದ
ಎಂಬಿಎ., 2007ರಿಂದ ಲಂಡನ್‌ನಲ್ಲಿ ಹಣಕಾಸು ನಿರ್ವಹಣಾ ತಜ್ಞನಾಗಿ ಅಂತರರಾಷ್ಟ್ರೀ ಬ್ಯಾಂಕುಗಳಲ್ಲಿ
ಸೇವೆ, 2016ರಿಂದ ಬೆಂಗಳೂರಿನಲ್ಲಿ ಗೋಲ್ಡ್ಮನ್ ಸಾಕ್ಸ್ ನಲ್ಲಿ ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಪತ್ರಿಕೋದ್ಯಮ:
ಬೆಂಗಳೂರಿನ ಜನಪ್ರಗತಿ ಮತ್ತು ಮಂಡ್ಯದ ಉದಯರವಿ ವಾರಪತ್ರಿಕೆ, ಬಳಿಕ ಪ್ರಜಾವಾಣಿ ಪತ್ರಿಕೆಯ ವಿವಿಧ ವಿಭಾಗದಲ್ಲಿ 37 ವರ್ಷ ಸುಧೀರ್ಘ ಸೇವೆ.
ಸಂಘಟನೆ:
ಕರ್ನಾಟಕ ಪತ್ರಕರ್ತರ ಸಹಕಾರ ಸಂಘಕ್ಕೆ ನಿರ್ದೇಶಕ, ಗೌರವ ಕಾರ‍್ಯದರ್ಶಿ ಮತ್ತು ಮೂರು
ವರ್ಷ ಅಧ್ಯಕ್ಷನಾಗಿ ಸೇವೆ (1980-83). ಅಧ್ಯಕ್ಷನಾಗಿದ್ದ ಅವಧಿಯಲ್ಲಿ ಸಂಘದ ಬೆಳ್ಳಿ ಹಬ್ಬ ಆಚರಣೆ.
ಬೆಂಗಳೂರು ಪ್ರೆಸ್ ಕ್ಲಬ್ ಆಡಳಿತ ಮಂಡಲಿ ಸದಸ್ಯ, ಭಾರತೀಯ ಕಾರ‍್ಯನಿರತ ಪತ್ರಕರ್ತರ ರಾಷ್ಟ್ರೀಯ
ಮಂಡಲಿಗೆ (ಐಎಫ್‌ಡಬ್ಲ್ಯುಜೆ) ಸದಸ್ಯನಾಗಿ ಒಂದು ಅವಧಿಗೆ ರಾಜ್ಯದ ಪ್ರತಿನಿಧಿ. ಕನ್ನಡ ಸಂಘರ್ಷ ಸಮಿತಿ
ಸಂಸ್ಥಾಪಕ ಖಜಾಂಚಿ. ಮೈಸೂರು ವರದಿಗಾರರ ಕೂಟದ ಸಂಸ್ಥಾಪಕ ಅಧ್ಯಕ್ಷ. ಕನ್ನಡ ಸಾಹಿತ್ಯ ಪರಿಷತ್ತಿನ
ಸಾಹಿತ್ಯ ಪರಿಷತ್ಪತ್ರಿಕೆಯ ಗೌರವ ಸಂಪಾದಕನಾಗಿ (1979-80) ಕೆಲಸ ನಿರ್ವಹಣೆ; ಕರ್ನಾಟಕ ಜಾನಪದ
ಅಕಾಡೆಮಿಯ ಪ್ರಕಟಣೆ ಜಾನಪದ ಗಂಗೋತ್ರಿಯ ಸಂಪಾದಕನಾಗಿ (2012) ಕಾರ‍್ಯನಿರ್ವಹಣೆ. ಕನ್ನಡ
ಅಭಿವೃದ್ಧಿ ಪ್ರಾಧಿಕಾರದ ಪತ್ರಿಕೆ `ಕನ್ನಡ ಜಾಗೃತಿ’ಯ ಸಂಪಾದಕನಾಗಿ ಕಾರ‍್ಯನಿರ್ವಹಣೆ.
ಗ್ರಾಮೀಣ ನಿರುದ್ಯೋಗಿ ಯುವಕ ಯುವತಿಯರಿಗೆ ಸ್ಪರ್ಧಾತ್ಮಕ ಪರೀಕ್ಷೆಗೆ ತರಬೇತಿ ನೀಡುತ್ತಿರುವ
ಆರ್.ಎಲ್.ಜಾಲಪ್ಪ ಅಕಾಡೆಮಿಯಲ್ಲಿ ಟ್ರಸ್ಟಿ, ಕಾರ‍್ಯದರ್ಶಿಯಾಗಿ ಕಾರ‍್ಯನಿರ್ವಹಣೆ
ಪ್ರಶಸ್ತಿಗಳು:
ಮಂಗಳೂರಿನ ಸಂದೇಶ ಪ್ರತಿಷ್ಠಾನದಿಂದ ಸಂದೇಶ ಮಾಧ್ಯಮ ಪ್ರಶಸ್ತಿ- 2006
ಕರ್ನಾಟಕ ಮಾಧ್ಯಮ ಅಕಾಡೆಮಿಯಿಂದ ಮಾಧ್ಯಮ ಪ್ರಶಸ್ತಿ- 2011
ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ -2014
ಕನ್ನಡ ಸಾಹಿತ್ಯ ಪರಿಷತ್ತಿನಿಂದ ಮಾಧ್ಯಮ ಕ್ಷೇತ್ರದ ಸಾಧನೆಗಾಗಿ ಕಿಟ್ಟಪ್ಪಗೌಡ ದತ್ತಿ ಪ್ರಶಸ್ತಿ
2015
ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ (ಹೊಸನಗರ ತಾಲ್ಲೂಕು 4ನೇ ಸಾಹಿತ್ಯ
ಸಮ್ಮೇಳನ, ರಿಪ್ಪನ್‌ಪೇಟೆ- 2015)
ಕಥಾ ಸಂಕಲನಗಳು:
ಬಲಿ (ಮಲ್ಲೇಪುರಂ ಜಿ. ವೆಂಕಟೇಶ ಅವರ ವಿಚಾರ ಪ್ರಕಾಶನ)- ಪ್ರತಿಗಳು ಮುಗಿದಿವೆ
ಮೈತ್ರಿ (1988) – ಪ್ರತಿಗಳು ಮುಗಿದಿವೆ
ವಿಚಾರಣೆ (ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ತಿನ ಪ್ರಕಟಣೆ)
ಅವ್ವ (ರಾಘವೇಂದ್ರ ಪ್ರಕಾಶನ, ಅಂಬಾರಕೊಡ್ಲ, ಅಂಕೋಲ, ಉತ್ತರ ಕನ್ನಡ ಜಿಲ್ಲೆ) ಊರು-ಮನೆ (ಆಯ್ದ ಕಥೆಗಳ ಸಂಗ್ರಹ) ದೇಸಿ ಪ್ರಕಾಶನ, ನಂ.121, 13ನೇ ಮುಖ್ಯರಸ್ತೆ, ಎಂ ಸಿ
ಲೇಔಟ್, ವಿಜಯನಗರ, ಹಂಪಿನಗರ, ಬೆಂಗಳೂರು-560040) (ಪ್ರತಿಗಳು ಮುಗಿದಿವೆ)
ಕಾದಂಬರಿಗಳು:
ಪಯಣ (ಬೆಂಗಳೂರಿನ ಸುಮುಖ ಪ್ರಕಾಶನ -2008; ಇದು ಮಂಗಳೂರು ವಿವಿ ಬಿಕಾಂ ತರಗತಿಗಳಿಗೆ
ಪಠ್ಯವೂ ಆಗಿದೆ 2011-2014)
ಭೂಮಿ ಹುಣ್ಣಿಮೆ (ರೂಪ ಪ್ರಕಾಶನ, ನಂ.26, 11ನೇ ಬ್ಲಾಕ್, ಡಾ.ರಾಜ್ ಕುಮಾರ್ ರಸ್ತೆ, ನಜರಾಬಾದ್
ಮೊಹಲ್ಲ, ಮೈಸೂರು -570013)
ನೆರಳು (ತಳುಕಿನ ವೆಂಕಣ್ಣಯ್ಯ ಸ್ಮಾರಕ ಗ್ರಂಥಮಾಲೆ, ನಂ. 9, ರಮ್ಯ, ಗೋಕುಲಂ 3ನೇ ಹಂತ,
ಮೈಸೂರು-570002)
ಪಾಡು (ತಳುಕಿನ ವೆಂಕಣ್ಣಯ್ಯ ಸ್ಮಾರಕ ಗ್ರಂಥಮಾಲೆ, ನಂ. 9, ರಮ್ಯ, ಗೋಕುಲಂ 3ನೇ ಹಂತ,
ಮೈಸೂರು-570002)
ಮೇಷ್ಟ್ರು (ತಳುಕಿನ ವೆಂಕಣ್ಣಯ್ಯ ಸ್ಮಾರಕ ಗ್ರಂಥಮಾಲೆ, ನಂ. 9, ರಮ್ಯ, ಗೋಕುಲಂ 3ನೇ ಹಂತ,
ಮೈಸೂರು-570002)
ಪಾಲು (ಲಹರಿ ಪ್ರಕಾಶನ, ನಂ.240, 5ನೇ ಮುಖ್ಯರಸ್ತೆ, 2ನೇ ಅಡ್ಡರಸ್ತೆ, ಕಾಪಿ ಬೋರ್ಡ್ ಲೇಔಟ್,
ಹೆಬ್ಬಾಳ, ಕೆಂಪಾಪುರ, ಬೆಂಗಳೂರು -560024)
ಕಾಮಾಕ್ಷಿ ಸಂಸಾರನೌಕೆ (ಸಿರಿವರ ಪ್ರಕಾಶನ, ನಂ. ಎಂ37/ಬಿ, 8ನೇ ಕ್ರಾಸ್, ಲಕ್ಷ್ನೀನಾರಾಯಣಪುರ,
ಬೆಂಗಳೂರು-560021)
ಶ್ರೀ ಚೌಡೇಶ್ವರಿ ಪ್ರಸನ್ನ (ಸಿವಿಜಿ ಪ್ರಕಾಶನ, ಕಸ್ತೂರ ಬಾ ಭವನ, ಗಾಂದಿ ಭವನ ಆವರಣ,
ಕುಮಾರಪಾರ್ಕ್ ಪೂರ್ವ, ಬೆಂಗಳೂರು-560001)
ಸಕಾಲ (ಸಿವಿಜಿ ಪ್ರಕಾಶನ, ಬೆಂಗಳೂರು)
ಸಂಪಾದಿತ ಕೃತಿಗಳು
ಕ್ರಿಸ್ತಾಂಜಲಿ (ಡಾ.ನರಹಳ್ಳಿ ಬಾಲಸುಬ್ರಹ್ಮಣ್ಯ ಜೊತೆ. ಕ್ರೆಸ್ಟ್ ಕಾಲೇಜು ಕನ್ನಡ ಸಂಘದ ಪ್ರಕಟಣೆ)
ಕನ್ನಡ ವಿಮರ್ಶಾ ವಿವೇಕ (ಬೆಂಗಳೂರಿನ ಸುಮುಖ ಪ್ರಕಾಶನ)
ಮಾಧ್ಯಮ (ಪ್ರಕಾಶಕರು: ಹಂಸಲೇಖ)
ಹಾಸು ಹೊಕ್ಕು (ಇತರರೊಡನೆ, ಸಿರಿವರ ಪ್ರಕಾಶನ)
ನೆಲದನಿ (ಎಚ್.ಎಸ್.ವೆಂಕಟೇಶಮೂರ್ತಿ ಅವರೊಂದಿಗೆ)
ಒಡನಾಡಿ ಅರಸು (ಕಾ.ತ.ಚಿಕ್ಕಣ್ಣ, ಡಾ.ಕೆ.ಷರೀಫಾ ಅವರೊಂದಿಗೆ)
ಸುಗಮಸಂಗೀತ ಸಂಪತ್ತು ವೈಕೆಎಂ-70 (ಡಾ. ನಾ. ದಾಮೋದರ ಶೆಟ್ಟಿ ಅವರೊಂದಿಗೆ)
ಸಂಗೀತ ಸಂಸಾರ ಸಾಧಕಿ ಬಿ.ಕೆ.ಸುಮಿತ್ರ 75 (ಡಾ. ನಾ. ದಾಮೋದರ ಶೆಟ್ಟಿ ಅವರೊಂದಿಗೆ)
ಮೆಕ್ಕಲು (ಸಮಕಾಲೀನ ಸಾಂಸ್ಕೃತಿಕ ಪರಿಸರ) (ಎಚ್. ದಂಡಪ್ಪ ಅವರೊಂದಿಗೆ)
ವಾರೆನೋಟ (ಚಿತ್ರ ಸಂಪುಟ.. ಎಚ್.ದಂಡಪ್ಪ ಅವರೊಂದಿಗೆ)
ಸಿದ್ಧಹಸ್ತ (ಎಂ.ಸಿದ್ಧರಾಜು ಗೌರವ ಗ್ರ‍್ರಂಥ)
ಸಂಗತ (ಎಚ್. ಎಂ. ರೇವಣ್ಣ ಗೌರವ ಗ್ರಂಥ), (ಕಾ. ತ. ಚಿಕ್ಕಣ್ಣ ಅವರೊಂದಿಗೆ)
ದೃಶ್ಯಯಾನ (ಎಚ್ ಎಂ ಆರ್ ದೃಶ್ಯಯಾನ, (ಕಾ. ತ. ಚಿಕ್ಕಣ್ಣ ಅವರೊಂದಿಗೆ)
ಕನ್ನಡ ಅವಲೋಕನ (ಪ್ರಾಧಿಕಾರದ ಮೂರು ವರ್ಷಗಳ ಕರ‍್ಯಚಟುವಟಿಕೆಗಳ ಸಮೀಕ್ಷೆ) ಡಾ.ವೀರಶೆಟ್ಟಿ
ಬಿ.ಗಾರಂಪಳ್ಳಿ ಅವರೊಂದಿಗೆ ಸಂಪಾದನೆ
ಸಿದ್ಧರಾಮಯ್ಯ ಆಡಳಿತ; ನೀತಿ ನಿರ್ಧಾರ (ಕಾ.ತ ಚಿಕ್ಕಣ್ಣ ಅವರೊಂದಿಗೆ ಸಂಪಾದನೆ) ಸಂಕೀರ್ಣ:
ಮೆಲುಕು (ನೆನಪುಗಳ ಸಂಕಲನ. ಸುಮುಖ ಪ್ರಕಾಶನ)
ಬಲ್ಲಿದರೊಡನೆ (ಪತ್ರಿಕಾ ಭಾಷೆಯಲ್ಲಿ ಪರಿಚಯ, ವ್ಯಕ್ತಿತ್ವ, ವಿಮರ್ಶೆ, ಬೆಂಗಳೂರಿನ ದಾಮಿನಿ ಪ್ರಕಾಶನ)
ಟಿ.ಆರ್.ನರಸಿಂಹರಾಜು (ವ್ಯಕ್ತಿ ಚಿತ್ರ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಲಿ ಪ್ರಕಟಣೆ)
ಅಜಲು (ಪತ್ರಿಕಾ ಲೇಖನಗಳು, ಬೆಂಗಳೂರಿನ ಪ್ರೆಸ್ ಕ್ಲಬ್ ಪ್ರಕಟಣೆ)
ಕುವೆಂಪು ಮತ್ತು…(ವ್ಯಕ್ತಿ ಚಿತ್ರಣ, ವಿಮರ್ಶೆ, ಅನ್ನಪೂರ್ಣ ಪ್ರಕಾಶನ, ಸಿರಿಗೇರಿ, ಬಳ್ಳಾರಿ)
ಹಾಯಿ ದೋಣಿ (ಅಂಕಣ ಬರಹಗಳು, ತಳುಕಿನ ವೆಂಕಣ್ಣಯ್ಯ ಸ್ಮಾರಕ ಗ್ರಂಥಮಾಲೆ)
ಅಪ್ಪನ ಪರಪಂಚ (ಅಂಕಿತ ಪ್ರಕಾಶನ)
ಗೆದ್ದವರು (ವ್ಯಕ್ತಿ ಚಿತ್ರಣಗಳು, ಸಿವಿಜಿ ಪ್ರಕಾಶನ)
ಆಗು ಹೋಗು (ಮಾಧ್ಯಮ ಚಿಂತನೆ, ವಿಸ್ಮಯ ಪಬ್ಲಿಕೇಷನ್ಸ್, ಬೆಂಗಳೂರು-2012)
ಅಬ್ದುಲ್ ಹಮೀದ್ (ಜೀವನಚಿತ್ರ) ರಾಷ್ಟೊçÃತ್ಥಾನ ಸಾಹಿತ್ಯ ಪ್ರಕಾಶನ)
ಸಹಪಥಿಕ (ಪ್ರವಾಸ ಕಥನ (ಐಸಿರಿ ಪ್ರಕಾಶನ)
ದಲಿತೋದ್ಧಾರಕ ಕುದ್ಮುಲ್ ರಂಗರಾವ್ (ನಾಡಿಗೆ ನಮಸ್ಕಾರ ಮಾಲಿಕೆ, ಕಾಂತಾವರ ಕನ್ನಡ ಸಂಘ)
ನಮ್ಮ ಜೆಪಿ (ಸಿರಿವರ ಪ್ರಕಾಶನ)
ದಿವಾಳಿ (ಅಂಕಣ ಬರಹಗಳ ಸಂಕಲನ, ವಿಕ್ರಂ ಪ್ರಕಾಶನ, ಬೆಂಗಳೂರು)
ಬೆಂಗಳೂರು ನಗರ ರಂಗದರ್ಶನ (ನಾಟಕ ಅಕಾಡೆಮಿ ಪ್ರಕಟಣೆ)
ಬಿ. ಜನಾರ್ದನ ಪೂಜಾರಿ ಅವರ ಆತ್ಮಕಥೆ `ಸಾಲಮೇಳದ ಸಂಗ್ರಾಮ’ ನಿರೂಪಣೆ
ಅಚ್ಚುಮೆಚ್ಚಿನ ಅಪ್ಪಾಜಿ (ಕೋಚೆ ನೆನಪು) ಸಂಪಾದನೆ
ಲಕ್ಷ್ಮಣರೇಖೆ (ಅಂಕಣ ಬರಹಗಳು)
ಮಿತ್ರಲಾಭ (ನೆನಪುಗಳ ಮೆರವಣಿಗೆ)
ಡಾ.ಪದ್ಮನಾಭನ್ ಪಲ್ಪು (ವ್ಯಕ್ತಿಚಿತ್ರಣ)
ಕೊಡಚಾದ್ರಿ (ವ್ಯಕ್ತಿಚಿತ್ರಣಗಳು)
ಸುಭಟರ್ಕಳ್ ಕವಿಗಳ್ (ವ್ಯಕ್ತಿಚಿತ್ರಣಗಳು)
ಇಬ್ಬರಿಂದ ಪಿಹೆಚ್ ಡಿ:
ಲಕ್ಷ್ಮಣ ಕೊಡಸೆ ಅವರ ಕಾದಂಬರಿಗಳ ಅಧ್ಯಯನ ನಡೆಸಿ ಡಾ.ಎನ್.ಕೆ.ಶಾರದಾಂಬ ಅವರು
ಮೈಸೂರು ವಿಶ್ವವಿದ್ಯಾನಿಲಯದಿಂದ ಪಿಎಚ್ ಡಿ ಪಡೆದಿದ್ದಾರೆ.
ಲಕ್ಷ್ನಣ ಕೊಡಸೆ ಅವರ ಕಥಾ ಸಾಹಿತ್ಯದ ಅಧ್ಯಯನ ನಡೆಸಿ ಡಾ. ಬಿ.ಕೆ. ಪಂಡಿತ್ ಅವರು
ಕಲಬುರಗಿ ವಿಶ್ವವಿದ್ಯಾಲಯದಿಂದ ಪಿಎಚ್ ಡಿ ಪಡೆದಿದ್ದಾರೆ.
ಬದುಕಿನ ಬಹುದೊಡ್ಡ ಗೌರವ:
ಶಿವಮೊಗ್ಗ ಜಿಲ್ಲೆ ಸಾಮರಸ್ಯದ ಜಿಲ್ಲೆ. ಇಲ್ಲಿ ಜಾತ ಮತ ಧರ್ಮದ ಅಂತರವಿಲ್ಲದೇ ಎಲ್ಲರೂ ನಡೆದುಕೊಂಡು ಬರುವ ಗುಡಿಗಳಿವೆ.. ದರ್ಗಾಗಳಿವೆ. ಇಬ್ಬರು ರಾಷ್ಟ್ರಕವಿಗಳನ್ನು ಕೊಟ್ಟಿದೆ ಈ ಜಿಲ್ಲೆ. ನಾಲ್ವರು ಮುಖ್ಯಮಂತ್ರಿಗಳು ಈ ಮಣ್ಣಿನವರು. ಕುವೆಂಪು ಪ್ರಭಾವಳಿ ಇರುವ ಜಿಲ್ಲೆಯಲ್ಲೂ ಇಂದು ಕೂಡ ಸಾಹಿತ್ಯ ಸಮೃದ್ಧವಾಗಿದೆ. ರಾಜ್ಯದ ಸಾಂಸ್ಕೃತಿಕ ಮತ್ತು ಸಾಹಿತ್ಯ ರಾಯಭಾರಿ ಎನ್ನುವ ಮಟ್ಟದಲ್ಲಿ ಈ ಜಿಲ್ಲೆ ಗುರುತಾಗಿದೆ. ಇಲ್ಲಿಯ ಕಸಾಪ ಕೂಡ ರಾಜ್ಯದಲ್ಲೇ ಅತ್ಯಂತ ಕ್ರಿಯಾಶೀಲ ಸಂಘಟನೆ. ಇಲ್ಲಿಯ ಸಾಹಿತ್ಯ ಸಮ್ಮೇಳನಗಳು ತನ್ನದೇ ಮೌಲ್ಯ ಮತ್ತು ಆಶಯವನ್ನು ಪ್ರಚುರಪಡಿಸಿ ಗಮನಸೆಳೆದಿವೆ. ಇಂತಹ ಸನ್ನಿವೇಶ ನಾನು ಸಮ್ಮೇಳನಾಧ್ಯಕ್ಷ ಆಗಿರುವುದು ನನ್ನ ಬದುಕಿನ ಬಹುದೊಡ್ಡ ಗೌರವ. ಸಮ್ಮೇಳನ ಮತ್ತು ಗೌರವಕ್ಕೆ ಚ್ಯುತಿ ಬಾರದ ರೀತಿಯಲ್ಲಿ ಜವಾಬ್ದಾರಿ ನಿರ್ವಹಿಸುವೆ. ಶಿವಮೊಗ್ಗ ಜಿಲ್ಲೆಯ ಜನರು ಬದುಕಿನೊಂದಿಗೆ ಆಪ್ತತೆ ಇದೆ. ಸಮಸ್ಯೆಗಳ ಬಗ್ಗೆ ಅರಿವಿದೆ. ಇವೆರಡನ್ನು ಪರಿಣಾಮಕಾರಿಯಾಗಿ ಪ್ರಚುರಪಡಿಸುವ ಆಶಯ ಹೊಂದಿದ್ದೇನೆ
– ಲಕ್ಷ್ಮಣ ಕೊಡಸೆ
ಸಮ್ಮೇಳನ ಅಧ್ಯಕ್ಷರು
