
-
ಶಾಸಕ ಬೇಳೂರು ಗೈರಿನ ನಡುವೆಯೂ ಅವರ ಶಾಸಕರ ಕಚೇರಿಗೆ ಉಸ್ತುವಾರಿ ಸಚಿವರ ದಿಢೀರ್ ಭೇಟಿ | ಅಷ್ಟೆ ಚುರುಕಿನಲ್ಲಿ ಸಚಿವರನ್ನ ಬರಮಾಡಿಕೊಂಡು ಸನ್ಮಾನಿಸಿದ ಶಾಸಕರ ಆಪ್ತ ಸಹಾಯಕರು| ಕುತೂಹಲಕ್ಕೆ ಕಾರಣವಾದ ಸನ್ನಿವೇಶ | ಗಮನಸೆಳೆದ ಮಧು ಬಂಗಾರಪ್ಪ ನಡೆ
ಹೊಸನಗರ: ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ತಾಪಂ ಸಭೆಗೆ ಆಗಮಿಸುವ ಮುನ್ನ ಶಾಸಕ ಬೇಳೂರು ಗೋಪಾಲಕೃಷ್ಣ ಕಚೇರಿ ಭೇಟಿ ನೀಡಿ ಗಮನ ಸೆಳೆದರು.
ಶಾಸಕರ ಗೈರಿನ ನಡುವೆ ಕಚೇರಿಗೆ ಭೇಟಿ ನೀಡಿದ ಸಚಿವರಿಗೆ ಆಪ್ತ ಸಹಾಯಕ ಸಣ್ಣಕ್ಕಿ ಮಂಜು ಮತ್ತು ಕಚೇರಿ ಸಿಬ್ಬಂದಿಗಳು ಶಾಲು ಹೊದಿಸಿ ಸನ್ಮಾನಿಸಿ ಗೌರವ ಸಲ್ಲಿಸಿದರು.


ಸನ್ಮಾನ ಏನು ಬೇಡ ಎಂದು ಸಚಿವರು ನಿರಾಕರಿಸಿದಾಗ ಸರ್ ನಮ್ಮ ಕಚೇರಿಗೆ ಬಂದಿದ್ದೀರಿ. ಗೌರವಿಸಬೇಕಾಗಿದ್ದು ನಮ್ಮ ಕರ್ತವ್ಯ ಎಂದು ಸಮಜಾಯಿಸಿ ನೀಡಿ ಗೌರವ ಸಮರ್ಪಿಸಿದರು.
ಸಚಿವರು ಮತ್ತು ಶಾಸಕರ ನಡುವೆ ಮುನಿಸು ಇದೆ ಎಂಬ ಸನ್ನಿವೇಶದಲ್ಲಿ ಸಚಿವರ ಭೇಟಿ ಕುತೂಹಲಕ್ಕೆ ಕಾರಣವಾಯಿತು.
ಜಿಪಂ ಮಾಜಿ ಸದಸ್ಯ ಕಲಗೋಡು ರತ್ನಾಕರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಜಿ.ನಾಗರಾಜ್, ತಾಪಂ ಮಾಜಿ ಸದಸ್ಯರಾದ ಬಿ.ಜಿ.ಚಂದ್ರಮೌಳಿ ಕೊಡೂರು, ಎರಗಿ ಉಮೇಶ್ ಇತರರು ಇದ್ದರು.
